ದಾವಣಗೆರೆ| ಹಾಡುಹಗಲೇ ವಕೀಲ ಕಣ್ಣನ ಹತ್ಯೆ ಖಂಡಿಸಿ ಪ್ರತಿಭಟನೆ

Spread the love

ಕೃತ್ಯದಲ್ಲಿ ಭಾಗಿಯಾದವರನ್ನು ಈ ಕೂಡಲೇ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಈ ಮೂಲಕ ಮನವಿ ಸಲ್ಲಿಸಿ, ಸಂಬಂಧಪಟ್ಟ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಹಾಗೂ ವಕೀಲರಿಗೆ ಸೂಕ್ತ ಭದ್ರತೆಯನ್ನು ಒದಗಿಸಿಕೊಡಬೇಕೆಂದು ಈ ಮೂಲಕ ಮನವಿ ಸಲ್ಲಿಸಲಾಯಿತು.ಆರೋಗ್ಯಕರ ಸಮಾಜದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವಕೀಲರ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಬಸವರಾಜ್ ಎಸ್., ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಬಿ. ಅಜ್ಜಯ್ಯ ಆವರಗೆರೆ, ಭಾಗ್ಯಲಕ್ಷ್ಮಿ ಆರ್., ಚೌಡಪ್ಪ, ಮಧುಸೂದನ್ ಟಿ.ಹೆಚ್., ನಾಗರಾಜ್ ಎಲ್., ನೀಲಕಂಠಯ್ಯ ಕೆ.ಎಂ., ರಾಘವೇಂದ್ರ ಎಂ., ಸಂತೋಷ್ ಕುಮಾರ್ ಜಿ.ಜೆ., ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿ ಮಠ, ಹಿರಿಯ ವಕೀಲರುಗಳಾದ ಎ.ಸಿ. ಜಗದೀಶ್ವರ್, ಎನ್. ಶಿವಲಿಂಗಪ್ಪ, ಬಿ.ಎಂ. ಹನುಮಂತಪ್ಪ, ಎಲ್.ದಯಾನಂದ್, ಗುಮ್ಮನೂರು ಮಲ್ಲಿಕಾರ್ಜುನ್, ಹೆಚ್.ದಿವಾಕರ್, ಎ.ಸಿ. ರಾಘವೇಂದ್ರ, ಸೇರಿದಂತೆ ವಕೀಲರ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು

Leave a Reply

Your email address will not be published. Required fields are marked *