ದಾವಣಗೆರೆ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆದಾವಣಗೆರೆ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love

ದಾವಣಗೆರೆ (Davanagere): ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಜಾತಿ ಗಣತಿ ಬೇಕು ಎನ್ನುವ ಸಿದ್ದರಾಮಯ್ಯ ಬಜೆಟ್ ಅನುದಾನ , ನಿಗಮ, ನೇಮಕಾತಿ , ಇತರ ಸೌಲಭ್ಯಗಳನ್ನು ಒದಗಿಸಲು ಜಾತಿ ಗಣತಿ ಬೇಕು ಎಂದು ಏಕೆ ಕೇಳಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಗಳ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬುಧವಾರ ಏರ್ಪಡಿಸಿದ್ದ ನಡೆಸಿದ ಬೃಹತ್ ಪ್ರತಿಭಟನೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಳಮೀಸಲಾತಿ ಅಸ್ಪøಶ್ಯ ಜನಾಂಗದ 30 ವರ್ಷಗಳ ಹೋರಾಟದ ಪ್ರತಿ ಫಲ. ದಿಕ್ಕು ತಪ್ಪಿಸುವ ಅನೇಕ ರಾಜಕೀಯ ಪಕ್ಷಗಳ, ಸರ್ಕಾರಗಳ ದೊಂಬರಾಟದಿಂದ ಇಲ್ಲಿಯವರೆಗೆ ದಕ್ಕಿಲ್ಲ. ಪಂಜಾಬ್ ನಲ್ಲಿ 29 ವರ್ಷ, ಹರಿಯಾಣದಲ್ಲಿ 12 ವರ್ಷ ಒಳಮೀಸಲಾತಿಯನ್ನು ಅಲ್ಲಿನ ಶೋಷಿತರು ಅನುಭವಿಸಿದ್ದಾರೆ. ಉಷಾಮೇಹ್ರಾ ಆಯೋಗ ದೇಶಕ್ಕೆ ಒಳಮೀಸಲಾತಿ ಅವಶ್ಯಕತೆ ಇದೆ. ಕೆಲವು ಜಾತಿಗಳು ಮೀಸಲಾತಿಯಿಂದ ವಂಚಿತವಾಗಿವೆ ಎಂದು ವರದಿಕೊಟ್ಟಿತ್ತು. ಅದನ್ನು ತಿರಸ್ಕರಿಸಿದವರು ಯಾರು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಸಾವಿರಾರು ವರ್ಷಗಳಿಂದ ನಮ್ಮನು ತುಳಿದಿದ್ದಾರೆ, ಒಳಮೀಸಲಾತಿ ಬೇಕೆಂದು ನಾವ್ಯಾರೂ ಕಲ್ಲು ಹೊಡೆದಿಲ್ಲ, ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಸಂತೋಷ್ ಹೆಗಡೆ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠ ಕೊಟ್ಟ ತೀರ್ಪು ಯಾವುದೇ ಕಾರಣಕ್ಕೂ ಒಪ್ಪುವ ತೀರ್ಪಲ್ಲ. ಪಂಜಾಬ್ ವರ್ಸಸ್ ದೇವೆಂದ್ರನಾಥ್ ತೀರ್ಪಿನಲ್ಲಿ ಅಸ್ಪ್ರಶ್ಯ ಜಾತಿಗಳಿಗೆ ಸಮರ್ಪಕವಾಗಿ ನ್ಯಾಯ ಸಿಕ್ಕಿಲ್ಲ ಎಂದರೆ ವರದಿಯನ್ನು ನೀವು ಸಿದ್ದರಾಮಯ್ಯ ವಿರೋಧಿಸುತ್ತೀರಿ. ಏಳು ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಿದರೂ ಅಮೆಂಡ್ಮೆಂಟ್ ಬೇಕು ಎಂದು ಮತ್ತೆ ಹೇಳುತ್ತಾರೆ. ರಾಜ್ಯದಲ್ಲಿ ಮಾದಿಗ ಮತ್ತು ಛಲವಾದಿ ಗಳಿಗೆ ನ್ಯಾಯ ಕೊಡದೇ ಹೋದರೆ ರಾಜಕಾರಣಿಗಳನ್ನು ನಮ್ಮ ಮನೆ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿಗೆ ಜಾತಿ ಗಣತಿ ನಡೆಯಬೇಕು ಎಂದು ಕೇಳುತ್ತಾರೆ. ನಿಗಮಕ್ಕೆ, ಅನುದಾನ ನೀಡಲು ಜಾತಿ ಗಣತಿ ಬೇಕು ಎಂದು ಯಾಕೆ ಕೇಳಲಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.

Read also : Davanagere | ಪೋಕ್ಸೋ , ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾಗೃತಿ ಹೆಚ್ಚಿಸಲು ಡಿಸಿ ಸೂಚನೆ

ನಿವೃತ್ತ ಡಿವೈಎಸ್ಪಿ ರುದ್ರಮುನಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ನಿರ್ಲಕ್ಷಿಸಿ ಅಸಡ್ಡೆ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿಗಾಗಿ ಒತ್ತಾಯಿಸಿ ಬಿಸಿ ಮುಟ್ಟಿಸುವ ಸಲುವಾಗಿ ಅಣ್ಣ-ತಮ್ಮಂದಿರಂತಿರುವ ಛಲವಾದಿ ಮತ್ತು ಮಾದಿಗ ಸಮುದಾಯಗಳು ಒಗ್ಗೂಡಿ ಹೋರಾಟ ನಡೆಸುತ್ತಿವೆ. ಈ ತಕ್ಷಣ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾಲಕ ಮಲ್ಲೇಶ್ ಮಾತನಾಡಿ, ನಮ್ಮ ಹಕ್ಕುಗಳನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ಒಳಮೀಸಲಾತಿ ನಮ್ಮ ಸಂವಿಧಾನಿಕ ಮತ್ತು ಸಾಮಾಜಿಕ ನ್ಯಾಯ. ಅದನ್ನು ಸರ್ಕಾರ ಸಂಪುಟದಲ್ಲಿ ಅನುಮೋದನೆ ಪಡೆದು ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ ಮಾತನಾಡಿ, ಡಾ. ಅಂಬೇಡ್ಕರ್ ರವರು ಪ. ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸಿದರು. ಅಂದಿನಿಂದಲೂ ಪ.ಜಾತಿಯಲ್ಲಿನ ಬಲಾಢ್ಯ ಜಾತಿಗಳು ಅವಕಾಶಗಳನ್ನು ಬಾಚಿಕೊಂಡು ಅಸ್ಪ್ರಶ್ಯ ಜಾತಿಗಳಿಗೆ ಅವಕಾಶ ಸಿಗದೇ ಇನ್ನೂ ದುರ್ಬಲ, ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ದಸಂಸ, ಇತರ ಸಂಘಟನೆಗಳ ಹೋರಾಟಕ್ಕೆ ಮಣಿದ ಸರ್ಕಾರ 2004ರಲ್ಲಿ ಸದಾಶಿವ ಆಯೋಗ ರಚಿಸಿ ವರದಿ ಪಡೆದುಕೊಂಡಿದೆ. ಇದರನ್ವಯ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ಒಳಮೀಸಲಾತಿ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿ 80 ದಿನ ಕಳೆದರೂ ರಾಜ್ಯ ಸರ್ಕಾರ ಅನುμÁ್ಠನಕ್ಕೆ ತರಲು ಮೀನಾಮೇಷ ಎಣಿಸುತ್ತಿದೆ. ಈ ಕೂಡಲೇ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ಒಳಮೀಸಲಾತಿ ಜಾರಿಗೊಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ವಿಶ್ವಾಸ ಗಳಿಸುತ್ತಾರೆ. ಹಾಗಾಗಿ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ದಸಂಸ ಮುಖಂಡ ಶ್ರೀನಿವಾಸ್ ಹೆಣ್ಣೂರು ಮಾತನಾಡಿ , ರಾಚಯ್ಯ ಬಸವಲಿಂಗಪ್ಪ 50 ವರ್ಷದ ಹಿಂದೆಯೇ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸಿದ್ದರು. ಕಳೆದ 30 ವರ್ಷಗಳಿಂದ ಹೋರಾಟ ಮಾಡಿದ್ದರ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಕೂಡಲೇ ರಾಜ್ಯ ಸರ್ಕಾರ ಜಾರಿಗೆ ತರಬೇಕು. 2016ರಲ್ಲಿ ಒಳಮೀಸಲಾತಿಯನ್ನು ನಿರ್ಲಕ್ಷಿಸಿ 2018ರಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಅದೇ ರೀತಿ ಬಿಜೆಪಿಯೂ ನಿರ್ಲಕ್ಷಿಸಿ ಸೋತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಸರ್ಕಾರದ ಸೌಲಭ್ಯ, ನೇಮಕಾತಿ ನಿಲ್ಲಿಸಿ ಒಳಮೀಸಲಾತಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಗಳು ಒಗ್ಗೂಡಿ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಹೋರಾಟ ಪ್ರಾರಂಭಿಸಿದ ಹೋರಾಟಗಾರರು ಜಯದೇವ ಸರ್ಕಲ್, ಅಶೋಕ ರಸ್ತೆ, ಗಾಂಧಿ ಸರ್ಕಲ್ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುಂದೆ ಬೃಹತ್ ಬಹಿರಂಗ ಸಭೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒಳಮಿಸಲಾತಿ ಅನುμÁ್ಠನಕ್ಕಾಗಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾದಿಗ ಮತ್ತು ಛಲವಾದಿ ಒಳಮೀಸಲಾತಿ ಹೋರಾಟ ಒಕ್ಕೂಟದ ಸಮಿತಿಯ ರವಿನಾರಾಯಣ್, ರುದ್ರಮನಿ, ಆಲೂರು ನಿಂಗರಾಜ, ಮಲ್ಲಿಕಾರ್ಜುನ ಹಲಸಂಗಿ, ಬಿ.ಎಂ.ನಿರಂಜನ್, ಬಿ.ಎಂ. ಹನುಮಂತಪ್ಪ, ಸಾಹಿತಿ ಬಿ.ಟಿ.ಜಾಹ್ನವಿ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ್, ನಿವೃತ್ತ ಅಧಿಕಾರಿ ಪುರುಷೋತ್ತ್ತಮ, ನಗರಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಎಲ್.ಎಂ.ಹನುಮಂತಪ್ಪ, ಬಿ.ಎಚ್.ವೀರಭದ್ರಪ್ಪ, ಜಯಪ್ರಕಾಶ್, ವಕೀಲರಾದ ಅನೀಸ್ ಪಾಶ, ಬಸವರಾಜ್, ಮಲ್ಲೇಶ್, ಎಚ್ ನಿಜಗುಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ರವಿಕುಮಾರ್, ಮಹಾಂತೇಶ್, ಡಿಎಸ್‍ಎಸ್ ತಾಲೂಕು ಸಂಚಾಲಕ ಮಹಾಂತೇಶ್ ಪಿ.ಜೆ., ಮೋಹನ್, ಲಿಂಗರಾಜ್, ಮಲ್ಲೇಶ್, ಹನುಮಂತಪ್ಪ, ಸಿ ಬಸವರಾಜ್, ವಿವಿಧ ದಲಿತ ಸಂಘಟನೆಗಳ ಸೇರಿದಂತೆ ಮಾದಿಗ ಸಮುದಾಯದ ಮತ್ತು ಚಲವಾದಿ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರುಪ್ರತಿಭಟನೆಯಲ್ಲಿ ಮಾದಿಗ ಮತ್ತು ಛಲವಾದಿ ಒಳಮೀಸಲಾತಿ ಹೋರಾಟ ಒಕ್ಕೂಟದ ಸಮಿತಿಯ ರವಿನಾರಾಯಣ್, ರುದ್ರಮನಿ, ಆಲೂರು ನಿಂಗರಾಜ, ಮಲ್ಲಿಕಾರ್ಜುನ ಹಲಸಂಗಿ, ಬಿ.ಎಂ.ನಿರಂಜನ್, ಬಿ.ಎಂ. ಹನುಮಂತಪ್ಪ, ಸಾಹಿತಿ ಬಿ.ಟಿ.ಜಾಹ್ನವಿ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ್, ನಿವೃತ್ತ ಅಧಿಕಾರಿ ಪುರುಷೋತ್ತ್ತಮ, ನಗರಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಎಲ್.ಎಂ.ಹನುಮಂತಪ್ಪ, ಬಿ.ಎಚ್.ವೀರಭದ್ರಪ್ಪ, ಜಯಪ್ರಕಾಶ್, ವಕೀಲರಾದ ಅನೀಸ್ ಪಾಶ, ಬಸವರಾಜ್, ಮಲ್ಲೇಶ್, ಎಚ್ ನಿಜಗುಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ರವಿಕುಮಾರ್, ಮಹಾಂತೇಶ್, ಡಿಎಸ್‍ಎಸ್ ತಾಲೂಕು ಸಂಚಾಲಕ ಮಹಾಂತೇಶ್ ಪಿ.ಜೆ., ಮೋಹನ್, ಲಿಂಗರಾಜ್, ಮಲ್ಲೇಶ್, ಹನುಮಂತಪ್ಪ, ಸಿ ಬಸವರಾಜ್, ವಿವಿಧ ದಲಿತ ಸಂಘಟನೆಗಳ ಸೇರಿದಂತೆ ಮಾದಿಗ ಸಮುದಾಯದ ಮತ್ತು ಚಲವಾದಿ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *