ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ದಾಖಲೆ ತಿದ್ದಿ, ಅಕ್ರಮವಾಗಿ ಆಸ್ತಿ ಮಾಡಿದ್ದನ್ನು ಪತ್ತೆ ಹಚ್ಚಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮರಳಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತೆ ರೇಣುಕಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1948ರಿಂದ 2000ರವರೆಗೆ ಪಾರ್ಕ್ ಜಾಗ ಒತ್ತುವರಿ, ಸಿಎ ನಿವೇಶನ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ಆಸ್ತಿಯನ್ನು ದಾಖಲೆಗಳನ್ನು ತಿದ್ದಿ ವಂಚಿಸಿ ಹೆಸರಿಗೆ ಬದಲಾಯಿಸಿಕೊಂಡಿದ್ದರು. ಇದನ್ನು ಪತ್ತೆ ಹಚ್ಚಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಿ ಪಾಲಿಕೆಗೆ ಪಡೆಯಲಾಗಿದೆ ಎಂದು ಹೇಳಿದರು.
ದಾಖಲೆ ತಿದ್ದಬಾರದು ಎಂಬ ಕಾರಣಕ್ಕೆ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಇದೇ ಮೊದಲ ಬಾರಿಗೆ ಹಳೆಯ ದಾಖಲಾತಿಗಳ ಪತ್ರವುಳ್ಳ ಪುಸ್ತಕದ ಪ್ರತಿ ಹಾಳೆಗೂ ಲ್ಯಾಮಿನೇಷನ್ ಮಾಡಿಸಲಾಗಿದೆ. ಮಾತ್ರವಲ್ಲ, ಈ ಪುಸ್ತಕಗಳು
ಇರುವ ಜಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಪತ್ರ ತಿದ್ದಿ ಬೇರೆಯವರ ಹೆಸರಿಗೆ ಮಾಡಿಕೊಳ್ಳದಂತೆ ಎಲ್ಲಾ ರೀತಿಯಲ್ಲಿಯೂ ಎಚ್ಚರ ವಹಿಸಲಾಗಿದೆ. ಬೆಳಗಾವಿಯಲ್ಲಿ ಈ ಬೈಂಡಿಂಗ್ ಮಾಡಿಸಲಾಗಿದ್ದು, ಇನ್ನೂ ಕೆಲವು ಪುಸ್ತಕಗಳು
ಇದ್ದು, ಸದ್ಯದಲ್ಲಿಯೇ ಪಾಲಿಕೆಗೆ ತರಲಾಗುತ್ತದೆ ಎಂದು ತಿಳಿಸಿದರು.
ಪಾಲಿಕೆಯ ಜಾಗ ಒತ್ತುವರಿ, ಪಾರ್ಕ್ ಜಾಗ, ಸಿಎ ಸೈಟ್ ಗಳನ್ನು ಅಕ್ರಮವಾಗಿ ಕೆಲವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಇದು ಮುಂದೆ ಆಗಬಾರದು ಎಂಬ ಕಾರಣಕ್ಕೆ ಲ್ಯಾಮಿನೇಷನ್ ಮಾಡಲಾಗಿದೆ. ಇನ್ನು ಮುಂದೆ ಹಳೆಯ
ದಾಖಲಾತಿಗಳನ್ನು ತಿದ್ದಿ ಆಸ್ತಿ ಲಪಟಾಯಿಸುವುದಕ್ಕೆ ಕಡಿವಾಣ ಹಾಕಲಾಗುವುದು. ಎಲ್ಲಾ ದಾಖಲಾತಿಗಳನ್ನು ಮೂಲ ಕಡತದಲ್ಲಿ ಫೈಲ್ ಮಾಡಲಾಗಿದ್ದು, ರ್ಯಾಕ್ ಸಿಸ್ಟಂ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್ ಹಾಜರಿದ್ದರುದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ದಾಖಲೆ ತಿದ್ದಿ, ಅಕ್ರಮವಾಗಿ ಆಸ್ತಿ ಮಾಡಿದ್ದನ್ನು ಪತ್ತೆ ಹಚ್ಚಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮರಳಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತೆ ರೇಣುಕಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1948ರಿಂದ 2000ರವರೆಗೆ ಪಾರ್ಕ್ ಜಾಗ ಒತ್ತುವರಿ, ಸಿಎ ನಿವೇಶನ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ಆಸ್ತಿಯನ್ನು ದಾಖಲೆಗಳನ್ನು ತಿದ್ದಿ ವಂಚಿಸಿ ಹೆಸರಿಗೆ ಬದಲಾಯಿಸಿಕೊಂಡಿದ್ದರು. ಇದನ್ನು ಪತ್ತೆ ಹಚ್ಚಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಿ ಪಾಲಿಕೆಗೆ ಪಡೆಯಲಾಗಿದೆ ಎಂದು ಹೇಳಿದರು.
ದಾಖಲೆ ತಿದ್ದಬಾರದು ಎಂಬ ಕಾರಣಕ್ಕೆ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಇದೇ ಮೊದಲ ಬಾರಿಗೆ ಹಳೆಯ ದಾಖಲಾತಿಗಳ ಪತ್ರವುಳ್ಳ ಪುಸ್ತಕದ ಪ್ರತಿ ಹಾಳೆಗೂ ಲ್ಯಾಮಿನೇಷನ್ ಮಾಡಿಸಲಾಗಿದೆ. ಮಾತ್ರವಲ್ಲ, ಈ ಪುಸ್ತಕಗಳು
ಇರುವ ಜಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಪತ್ರ ತಿದ್ದಿ ಬೇರೆಯವರ ಹೆಸರಿಗೆ ಮಾಡಿಕೊಳ್ಳದಂತೆ ಎಲ್ಲಾ ರೀತಿಯಲ್ಲಿಯೂ ಎಚ್ಚರ ವಹಿಸಲಾಗಿದೆ. ಬೆಳಗಾವಿಯಲ್ಲಿ ಈ ಬೈಂಡಿಂಗ್ ಮಾಡಿಸಲಾಗಿದ್ದು, ಇನ್ನೂ ಕೆಲವು ಪುಸ್ತಕಗಳು
ಇದ್ದು, ಸದ್ಯದಲ್ಲಿಯೇ ಪಾಲಿಕೆಗೆ ತರಲಾಗುತ್ತದೆ ಎಂದು ತಿಳಿಸಿದರು.
ಪಾಲಿಕೆಯ ಜಾಗ ಒತ್ತುವರಿ, ಪಾರ್ಕ್ ಜಾಗ, ಸಿಎ ಸೈಟ್ ಗಳನ್ನು ಅಕ್ರಮವಾಗಿ ಕೆಲವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಇದು ಮುಂದೆ ಆಗಬಾರದು ಎಂಬ ಕಾರಣಕ್ಕೆ ಲ್ಯಾಮಿನೇಷನ್ ಮಾಡಲಾಗಿದೆ. ಇನ್ನು ಮುಂದೆ ಹಳೆಯ
ದಾಖಲಾತಿಗಳನ್ನು ತಿದ್ದಿ ಆಸ್ತಿ ಲಪಟಾಯಿಸುವುದಕ್ಕೆ ಕಡಿವಾಣ ಹಾಕಲಾಗುವುದು. ಎಲ್ಲಾ ದಾಖಲಾತಿಗಳನ್ನು ಮೂಲ ಕಡತದಲ್ಲಿ ಫೈಲ್ ಮಾಡಲಾಗಿದ್ದು, ರ್ಯಾಕ್ ಸಿಸ್ಟಂ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್ ಹಾಜರಿದ್ದರು