ಹರಿಹರ :ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

Spread the love

ದಿನಾಂಕ: 23-10-2024 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪಿರ್ಯಾದುದಾರರಾದ ಶ್ರೀ ರಾಜು ಲಕ್ಷ್ಮಣ್ ಕಾಂಬ್ಳೆ, ರಾಣಿಬೆನ್ನೂರು ಟೌನ್, ಹಾವೇರಿ ಜಿಲ್ಲೆ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬು ಹರಿಹರ ನಗರದ ಹೊರ ವಲಯದ ಎನ್.ಹೆಚ್ ರಸ್ತೆಯಲ್ಲಿರುವ ಶ್ರೀದೇವಿ ಪೆಟ್ರೋಲ್ ಬಂಕ್‌ನ ನಿವೇಶನದ ಸುಮಾರು 3-4 ವರ್ಷಗಳ ಕಂದಾಯವನ್ನು ಪಾವತಿಸುವುದು ಬಾಕಿ ಇದ್ದು, ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾದ ಶ್ರೀ ನಾಗೇಶ್ ಹಾಗೂ ಕಂದಾಯ ಅಧಿಕಾರಿಯಾದ ಶ್ರೀ ರಮೇಶ.ಯು ರವರುಗಳು ಸದರಿ ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400/-ರೂಗಳನ್ನು ಪಾವತಿಸಬೇಕಾಗುತ್ತೆ ಅಂತಾ

ತಿಳಿಸಿದ್ದು, ಸದ್ಯ 2020-21 ನೇ ಸಾಲಿನ ಕರದಂತೆ ಇಲ್ಲಿಯವರೆಗೆ ಲೆಕ್ಕ ಹಾಕಿ ಬರುವ ಕಂದಾಯ ಮೊತ್ತವನ್ನು 1,39,400/- ರಲ್ಲಿ ಕಡಿಮೆ ಮಾಡಿ, ಉಳಿದ ಹಣದಲ್ಲಿ ಶೇಕಡ 50% ರಷ್ಟು ಅಂದರೆ ಸುಮಾರು 50-60 ಸಾವಿರ ರೂಗಳ ಮೊತ್ತವನ್ನು ನೀಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿಠ್ಯಾದಿಯವರಿಗೆ ಲಂಚದ ಹಣವನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ಇದ್ದ ಕಾರಣ ಮೇಲ್ಕಂಡ ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಿನಾಂಕ:23-10-2024 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣಿ ಮೊಕದ್ದಮೆ

ಸಂ: 11/2024 ಕಲಂ: 7(a) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ದಿನಾಂಕ 25-10-2024 ರಂದು ಎ1 ಆರೋಪಿತ ಅಧಿಕಾರಿ ಶ್ರೀ ನಾಗೇಶ ರವರು ಪಿತ್ಯಾದಿಯವರಿಂದ 20,000/- ರೂ ಲಂಚದ ಹಣವನ್ನು ಸ್ವೀಕರಿಸಿದ್ದು, ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿರುತ್ತದೆ.

ಮಾನ್ಯ ಶ್ರೀ ಎಂ.ಎಸ್.ಕೌಲಾಪೂರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಹಾಗೂ ಶ್ರೀಮತಿ ಕಲಾವತಿ, ಕೆ ಪೊಲೀಸ್ ಉಪಾಧಿಕ್ಷಕರು ಕರ್ನಾಟಕ ಲೋಕಾಯುಕ್ತ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಮಧುಸೂದನ್ ಸಿ, ಶ್ರೀ ಪ್ರಭು ಬ ಸೂರಿನ ಮತ್ತು ಶ್ರೀಮತಿ ಸರಳ.ಪಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿತ ಅಧಿಕಾರಿಗಳಾದ ಶ್ರೀ ನಾಗೇಶ್ ಮತ್ತು ಶ್ರೀ ರಮೇಶ್.ಯು ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.ಮಾನ್ಯ ಶ್ರೀ ಎಂ.ಎಸ್.ಕೌಲಾಪೂರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಹಾಗೂ ಶ್ರೀಮತಿ ಕಲಾವತಿ, ಕೆ ಪೊಲೀಸ್ ಉಪಾಧಿಕ್ಷಕರು ಕರ್ನಾಟಕ ಲೋಕಾಯುಕ್ತ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಮಧುಸೂದನ್ ಸಿ, ಶ್ರೀ ಪ್ರಭು ಬ ಸೂರಿನ ಮತ್ತು ಶ್ರೀಮತಿ ಸರಳ.ಪಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿತ ಅಧಿಕಾರಿಗಳಾದ ಶ್ರೀ ನಾಗೇಶ್ ಮತ್ತು ಶ್ರೀ ರಮೇಶ್.ಯು ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

One thought on “ಹರಿಹರ :ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

Leave a Reply

Your email address will not be published. Required fields are marked *