ಹಿರಿಯ ನ್ಯಾಯವಾದಿಗಳು ರಜ್ವಿ ಖಾನ್ ಮತ್ತು ಸಮೀರ್ ಇಂಜಿನಿಯರ್ ಅರಿಫ್ ಪೈಲ್ವಾನ್ ಮುಕ್ತಿಯರ್ ಖಾನ್ ಮತ್ತು ಮದೀನಾ ಆಟೋ ಸ್ಟ್ಯಾಂಡಿನ ಮಹಮ್ಮದ್ ಬುಡೇನ್ ಅಜಮ ಇಬ್ರಾಹಿಂ . ದಾವೂದ್ ಅಂಬುಲೆನ್ಸ್ ಹಾಗೂ ಅನೇಕ ಯುವಕರು ಸರಿ ಮದೀನಾ ಆಟೋ ಸ್ಟ್ಯಾಂಡ್ ಬಳಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು ರಜ್ವಿ ಖಾನ್ ವಕೀಲರು ಹಜರತ್ ಟಿಪ್ಪು ಸುಲ್ತಾನ್ ರವರ ಬಗ್ಗೆ ಮಾತನಾಡಿ ಮೈಸೂರು ಹುಲಿಯಾದ ಟಿಪ್ಪು ಸುಲ್ತಾನ್, ಬ್ರಿಟಿಷರ ವಿರುದ್ಧ ಭಾರತದ ಪ್ರತಿರೋಧದ ಶಕ್ತಿ ಎಂದು ಗೌರವದಿಂದ ನೆನಸಲ್ಪಡುವ ಮಹಾನ್ ದೇಶಭಕ್ತರು. ದೇಶಪ್ರೇಮಿಯು ಪ್ರಗತಿಪರ ಶ್ರೇಣಿಯ ನಾಯಕನಾಗಿರುವ ಟಿಪ್ಪು, ಯುದ್ಧತಂತ್ರದಲ್ಲಿ ಮೊದಲ ಬಾರಿಗೆ ಕಬ್ಬಿಣದ ಆವರಣದ ರಾಕೆಟ್‌ಗಳನ್ನು ಬಳಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿದರು. ಅವರು ಕೇವಲ ಶ್ರೇಣಿಯ ವೀರ ಯೋಧನಷ್ಟೇ ಅಲ್ಲ, ಮೈಸೂರು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವ ಮೂಲಕ, ಶಿಕ್ಷಣವನ್ನು ಉತ್ತೇಜಿಸುವ ಮೂಲಕ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡುವ ಮೂಲಕ ಪ್ರಗತಿಪರ ಆಡಳಿತವನ್ನು ರೂಪಿಸಿದ ಶ್ರೇಷ್ಟ ರಾಜನಾಗಿದ್ದರು. 1799ರಲ್ಲಿ ಶ್ರೀರಂಗಪಟ್ಟಣದ ಯುದ್ಧದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬಲಿದಾನವನ್ನು ಅರ್ಪಿಸಿದ ಟಿಪ್ಪು ಸುಲ್ತಾನ್, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಶಾಶ್ವತವಾಗಿ ಗೌರವದ ಸ್ಥಾನದಲ್ಲಿ ನೆಲೆಸಿದ್ದಾರೆ.ಹಜರತ್ ಟಿಪ್ಪು ಸುಲ್ತಾನ್ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು