ಮಾನವೀಯತೆ ಮೆರೆದ AIMIM ಕಾರ್ಯಕರ್ತರು:AIMIM ಕಾರ್ಯಕರ್ತರು ಬಾಷ್ ನಗರದಲ್ಲಿರುವ ಮಿಲ್ಲತ್ ಶಾಲೆಯ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗೆ ತೀವ್ರ ತೊಂದರೆಯಲ್ಲಿ ನಿಂತಿದ್ದ ರವಿ ( ಹೋಸ್ಕ್ಯಾಂಪ್ ನಿವಾಸಿ) ಅವರನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ. ವಿಚಾರಣೆ ಮಾಡಿದಾಗ, ಅವರು uncontrolled ಡಯಾಬಿಟಿಸ್‌ನಿಂದ ತೀವ್ರವಾಗಿ ಪೀಡಿತರಾಗಿದ್ದು, ಅವರ ಕಾಲು ಕೊಳೆತು ಹುಳ ಬಿದ್ದಿದ್ದವು, ಪರಿಸ್ಥಿತಿ ಗಂಭೀರವಾಗಿತ್ತು ಎಂಬುದನ್ನು ಕಾರ್ಯಕರ್ತರು ಅರಿತುಕೊಂಡರು. ದುರದೃಷ್ಟವಶಾತ್, ಆರೋಗ್ಯ ಕೇಂದ್ರದ ಸಿಬ್ಬಂದಿ ಅವರ ತುರ್ತು ಪರಿಸ್ಥಿತಿಯನ್ನು ಗಮನಿಸದೆ ಅವರಿಗು ಒಳಗೊಂಡ ಅಡ್ಮಿಷನ್ ಮತ್ತು ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದರು.ಸಮಸ್ಯೆಯ ತೀವ್ರತೆಯನ್ನು ಅರಿತು, AIMIM ಕಾರ್ಯಕರ್ತರು ತಕ್ಷಣವೇ ಸ್ವತಃ ಶ್ರಮದಿಂದ ರವಿಯವರಿಗೆ ಸ್ನಾನ ಮಾಡಿಸಿ, ಅವರ ಗಾಯದ ಸ್ಥಳವನ್ನು ಶುದ್ಧೀಕರಿಸಿ, ಪಟ್ಟಿ ಹಾಕಿದರು. ನಂತರ, ಅವರು ರವಿಯನ್ನು CG ಆಸ್ಪತ್ರೆಗೆ ಕರೆದೊಯ್ಯಲಾಯಿತು.