ಹರಿಹರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದು ಕೊರತೆಗಳ ಸಭೆ

Spread the love

ಪ.ಜಾತಿ,ಪ.ಪಂಗಡದ ಕುಂದು ಕೊರತೆ ಸಭೆ ನಡೆಸಲು ದಸಂಸ ಆಗ್ರಹ
ಹರಿಹರ (Harihara): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹರಿಹರತಾಲ್ಲೂಕು ಮಟ್ಟದ ಕುಂದು ಕೊರತೆಸಭೆ ನಡೆಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹರಿಹರ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್  ಆಗ್ರಹಿಸಿದ್ದಾರೆ.

ಈ ಹಿಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಜಕಲ್ಯಾಣ ಇಲಾಖೆಯಿಂದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಗಳನ್ನುನಡೆಸಲಾಗುತ್ತಿತ್ತು. ಆ ಸಭೆಗಳಲ್ಲಿ ಈ ತಳಸಮುದಾಯದ ಮುಖಂಡರು, ಜನಸಾಮಾನ್ಯರು ಈ ಸಭೆಗಳಲ್ಲಿ ಭಾಗವಹಿಸಿ ತಳಸಮುದಾಯದವರಾಗಿ ತಾವು ನಿತ್ಯ ಬದುಕಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಾಲ್ಲೂಕುಮಟ್ಟದ ವಿವಿಧ ಇಲಾಖಾಧಿಕಾರಿಗಳ ಮುಂದೆ ಪ್ರಸ್ತಾಪಿಸಿ ಪರಿಹಾರವನ್ನು ಪಡೆಯುತ್ತಿದ್ದರು. ಈ ಹಿಂದೆ 09-01 2022 ರಂದು ಇಂತಹ ಸಭೆನಡೆಸಿದ್ದು ಬಿಟ್ಟರೆ ಈವರೆಗೆ ಸಭೆ ಕರೆದಿರುವುದಿಲ್ಲ. ಕೋವಿಡ್ಹಾಗೂ ಚುನಾವಣೆಗಳ ಕಾರಣವನ್ನು ಮುಂದಿಟ್ಟು ಕಳೆದ ಎರಡು ವರ್ಷ ಹತ್ತು ತಿಂಗಳಿAದ ಸಭೆಗಳನ್ನು ನಡೆಸಿರುವುದಿಲ್ಲ.

ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಎಸ್ಸಿ, ಎಸ್ಟಿ ಜನಸಮುದಾಯದವರ ಹಕ್ಕುಗಳ ಸಂರಕ್ಷಣೆ ಬಗ್ಗೆ ಪುಂಖಾನು, ಪುಂಖವಾಗಿಆಡುವ ಮಾತು ಕೇವಲ ಮೊಸಳೆ ಕಣ್ಣೀರು ಎಂಬುದು ಇಲ್ಲಿ ಬಯಲಾಗಿದೆ. ಇಂತಹ ಸಭೆಗಳು ತಾಲ್ಲೂಕು ಮಟ್ಟದ ಜೊತೆಗೆ ಹೋಬಳಿ ಹಾಗೂ ಗ್ರಾಮ ಪಂಚಾಯ್ತಿಮಟ್ಟದಲ್ಲೂ ನಿಯಮತವಾಗಿ ನಡೆಸಬೇಕು.  ಒಂದೊAದು ಪ್ರದೇಶಕ್ಕೆ ತಳಸಮುದಾದವರ ಸಮಸ್ಯೆಗಳು ವಿಭಿನ್ನವಾಗಿರುವ ಕಾರಣ  ಸಭೆಗಳು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಮಾಜಕಲ್ಯಾಣಾಧಿಕಾರಿಗಳು ಚರ್ಚಿಸಿ ಆದಷ್ಟು ಬೇಗನೆ ಈ ಸಭೆಯನ್ನು ಆಯೋಜಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಮಾಜಕಲ್ಯಾಣಾಧಿಕಾರಿಗಳು ಚರ್ಚಿಸಿ ಆದಷ್ಟು ಬೇಗನೆ ಈ ಸಭೆಯನ್ನು ಆಯೋಜಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *