ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ

Spread the love

ನಗರದ ಹರಿಹರೇಶ್ವರ ಅರ್ಬನ್ ಕೋ ಆಫ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಪುಸ್ತಕ ಅಂಗಡಿಯ ವ್ಯಾಪಾರಿ ಜಿ.ಕೆ ಮಲ್ಲಿಕಾರ್ಜುನ, ಉಪಾಧ್ಯಕ್ಷರಾಗಿ ನಾಗೆಂದ್ರಸಾ ಕಾಟ್ವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಹರಿಹರೇಶ್ವರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಕೆ ಮಲ್ಲಿಕಾರ್ಜುನ, ಉಪಾಧ್ಯಕ್ಷರಾಗಿ ನಾಗೇಂದ್ರಸಾ ಕಾಟ್ವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಚುನಾವಣಾ ಫಲಿತಾಂಶ ಘೋಷಿಸಿದರು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ/ಉಪಾಧ್ಯಕ್ಷರನ್ನು ಬ್ಯಾಂಕ್‌ನ ಮಾಜಿ ಅಧ್ಯಕ್ಷರುಗಳಾದ ರವಿಚಂದ್ರ ಕೆ, ಹಾಲೇಶ ಬಾವಿಕಟ್ಟಿ, ನಿರ್ದೇಶಕರಾದ ಅನ್ವರಪಾಷಾ ಬಿ.ಕೆ, ಪ್ರವಿಣಕುಮಾರ ಜಿ.ವಿ, ವೀಣಾ ಹೆಚ್.ಆರ್, ಈಶ್ವರಪ್ಪ, ಅಣ್ಣಪ್ಪ ಕೆ, ಪರಶುರಾಮ ಅಂಬೇಕರ, ವಿದ್ಯಾ ಆರ್.ಮೆರ‍್ವಾಡೆ, ವ್ಯವಸ್ಥಾಪಕ ಪ್ರಕಾಶ ಸಿ, ಬ್ಯಾಂಕ್ ನಡೆದು ಬಂದ ದಾರಿ, ಅಭಿವೃದ್ಧಿ ಕುರಿತು ಮಾತನಾಡಿದರು. ಸಿಬ್ಬಂದಿ ಪಿ ಶಶಿಕಲಾ, ರೇಖಾ ಮೆರ‍್ವಾಡೆ, ಶಿವಕುಮಾರ ಎ, ಪ್ರಶಾಂತ ಪಿ, ಕಿರಣ ಎ, ಬಿಂದೂಶ್ರೀ, ಪಿಗ್ಮಿ ಸಂಗ್ರಹಗಾರರಾದ ಕರಿಬಸಪ್ಪ, ನಾಗರಾಜ, ಸುಮಾ ಹೆಚ್.ಎಂ, ಲಲಿತಾ ಎಂ ಅಂಗಡಿ, ಬಿ ಸುರೇಶ, ಸಾಯಿಚಂದ್ರ, ಶಿವಾನಂದ ಕೆ, ಕ್ರೀಡಾಪಟು ನಿಜಗುಣ ಇದ್ದರು.

Leave a Reply

Your email address will not be published. Required fields are marked *