ಅಧಿಕೃತ ಆದೇಶವಿಲ್ಲದೆ ಭೂಮಾಪನ ಮಾಡುತ್ತಿರುವ ಪರವಾನಿಗೆ ಭೂಮಾಪಕ ಎಚ್ ಎಸ್ ಕುಮಾರ್

Spread the love

ಅಧಿಕೃತ ಆದೇಶವಿಲ್ಲದೆ ಭೂಮಾಪನ ಮಾಡುತ್ತಿರುವ ಪರವಾನಗಿ ಭೂಮಾಪಕ ಎಚ್.ಎಸ್.ಕುಮಾರ್ಹರಿಹರ : ಯಾವುದೇ ಅಧಿಕೃತ ಆದೇಶವಿಲ್ಲದೆ ಭೂಮಾಪನ ಮಾಡುತ್ತಿರುವದಾಗಿ ಸರ್ಕಾರಿ ಪರವಾನಿಗೆ ಭೂಮಾಪಕ ಎಚ್. ಎಸ್.ಕುಮಾರ್ ( ಸಂಖ್ಯೆ 16/1684) ತಿಳಿದು ಬಂದಿದೆ. ಹಲವು ವರ್ಷಗಳಿಂದ ಹರಿಹರ ತಾಲೂಕಿನ ಭೂಮಾಪಕ ಸರ್ವೆ ಇಲಾಖೆಯಲ್ಲಿ ಸರ್ಕಾರಿ ಪರವಾನಿಗೆ ಭೂಮಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ರವರು ಸೋಮವಾರ ನಗರದ ಹೊರವಲಯದ ಸರ್ವೆ ನಂಬರ್ 61/3 ಮತ್ತು 67/1 ಜಮೀನಿಗೆ ಸಂಬಂಧಿಸಿದಂತೆ ಅಳತೆ ಮಾಡುವುದಾಗಿ ನೋಟಿಸ್ ಜಾರಿಗೊಳಿಸಿ ಅಳತೆಗೆ ಬಂದ ವೇಳೆ ಅಧಿಕೃತ ಆದೇಶ ಪತ್ರವನ್ನು ಕೇಳಿದಾಗ ಯಾವುದೇ ಪತ್ರವನ್ನು ತೋರಿಸದೆ ಕೇವಲ ಮೇಲಾಧಿಕಾರಿಗಳ ಮೌಖಿಕ ಆದೇಶದ ಮೇಲೆ ಮಾಡುತ್ತಿರೋದಾಗಿ ತಿಳಿಸಿದರು. ಆದರೆ ಆದೇಶವನ್ನು ತಂದು ನೀವು ಅಳತೆ ಮಾಡಿಕೊಳ್ಳಿರಿ ಎಂದು ಪತ್ರಕರ್ತರು ತಿಳಿಸಿದಾಗ ನಾನು ಯಾವುದೇ ಕಾರಣಕ್ಕೂ ಅಳತೆ ಮಾಡುವುದನ್ನು ನಿಲ್ಲಿಸುವುದಿಲ್ಲ ಅಳತೆ ಮಾಡಿಯೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದವರಂತೆ ಮಾತನಾಡಿರುತ್ತಾರೆ. ಈ ರೀತಿ ಇವರು ಮಾತನಾಡಲು ಕಾರಣ ಏನಿರಬಹುದು ಎಂದು ಆಶ್ಚರ್ಯ ಕಡೆ ಮಾಡಿಕೊಟ್ಟಿದೆ. ನಂತರ ತಮ್ಮ ಮೇಲಾಧಿಕಾರಿ ಗಳೆಂದು ಹೇಳಿ ಚಲನ ವಾಣಿ ಮೂಲಕ ಏನನ್ನೋ ಮಾತನಾಡಿ ಮತ್ತು ಪತ್ರಕರ್ತರೊಂದಿಗೆ ಮಾತನಾಡುವಂತೆ ತಿಳಿಸಿದಾಗ ಅಧಿಕಾರಿಗಳು ಮಾತನಾಡಲು ಒಪ್ಪಲಿಲ್ಲ. ಇದೆಲ್ಲವನ್ನು ಗಮನಿಸಿದಾಗ ಭೂಮಾಪಕ ಕುಮಾರ್ ಮತ್ತು ಮೇಲಾಧಿಕಾರಿಗಳು ಯಾವುದೋ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಮಾಡುತ್ತಿದ್ದಾರೆ ಎಂದು ಅನಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದೇ ವಿಚಾರವಾಗಿ ಚರ್ಚಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಮ್ಮ29.11.2024 ರ ಪತ್ರದಲ್ಲಿ 03.12. 2024 ರಂದು ಸಂಜೆ 4.30 ಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಕಾರಣಾಂತರದಿಂದ ಸಭೆ ಮುಂದೂಡಲಾಗಿದೆ. ಮುಂದಿನ ಸಭೆ ನಡೆಯುವವರೆಗೂ ಸ್ವಲ್ಪ ತಾಳ್ಮೆವಹಿಸಿ ಸಭೆ ಯ ತೀರ್ಮಾನದ ನಂತರ ಅಳತೆ ಮಾಡಿರಿ ಎಂದು ದೂರು ದಾರರ ಪರವಾಗಿ ನಾರಾಯಣ ಆಶ್ರಮದ ಕೆಲವರು ಮನವಿ ಮಾಡಿದಾಗ ಯಾವುದಕ್ಕೂ ಕೇರ್ ಮಾಡದೆ ನಾನು ಅಳತೆ ಮಾಡುಯೇ ಸಿದ್ದ ಎನ್ನುವ ಧೋರಣೆ ಯೊಂದಿಗೆ ಅಳತೆ ಮಾಡಿರುತ್ತಾರೆ. ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ದೂರುದಾರರ ಪರವಾಗಿ ಒತ್ತಾಯಿಸಿರುತ್ತಾರೆ. ಹಲವಾರು ವರ್ಷಗಳಿಂದ ಸರ್ವೆ ಇಲಾಖೆಯಲ್ಲಿ ಸರ್ಕಾರಿ ಪರವಾನಿಗೆ ಭೂಮಾಪಕರಾದ ಎಚ್.ಎಸ್.ಕುಮಾರ್ ರವರ ವರ್ತನೆ ಸಾರ್ವಜನಿಕರೊಂದಿಗೆ ಸಮಂಜಸವಾಗಿರುವುದಿಲ್ಲ ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಗಮನಿಸಬೇಕು ಮತ್ತು ನಗರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಈ ವಿಚಾರವಾಗಿ ಕೂಡಲೇ ಸಭೆ ನಡೆಸಿ ಸಭೆಯ ತೀರ್ಮಾನದಂತೆ ಮುಂದುವರಿಯವಂತೆ ಸಂಬಂಧಪಟ್ಟ ಸರ್ವೆ ಇಲಾಖೆಯವರಿಗೆ ಸೂಚನೆ ನೀಡಬೇಕು ಎನ್ನುವುದಷ್ಟೇ ಪತ್ರಿಕೆಯ ಕಾಳಜಿಯಾಗಿದೆ.

Leave a Reply

Your email address will not be published. Required fields are marked *