*ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಹರಿಹರ ತಾಲೂಕು ವತಿಯಿಂದ ಹರಿಹರ ನಗರದ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಚರಂಡಿ, ಪಾರ್ಕಗಳ ಅಭಿವೃದ್ಧಿ, ಸುಸರ್ಜಿತ ಸಂತೆ ಮಾರುಕಟ್ಟೆ, ವ್ಯವಸ್ಥಿತವಾದ ಪುಟ್ಬಾತ್, ಶುದ್ಧ ಕುಡಿಯುವ ನೀರಿನ ಘಟಕಗಳ ಮರುಚಾಲನೆ, ಬೀದಿ ನಾಯಿಗಳ ಹಾವಳಿ, ಬೇಸಿಗೆ ಕುಡಿಯುವ ನೀರಿನ ವ್ಯವಸ್ಥೆ, ಮುಂತಾದ ವಿವಿಧ ಬೇಡಿಕೆಗಳನ್ನು 2025-2026 ನೇ ಬಜೆಟ್ ನಲ್ಲಿ ಈಡೇರಿಸುವಂತೆ ಮಾನ್ಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ “ಧರಣಿ ಸತ್ಯಾಗ್ರಹ” ಮಾಡಲಾಗುವುದು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಹರಿಹರ ತಾಲೂಕು ಅಧ್ಯಕ್ಷರಾದ ವೈ ರಮೇಶ್ ಮಾನೆ, ನಗರ ಘಟಕ ಅಧ್ಯಕ್ಷರಾದ ಪ್ರೀತಮ್ ಬಾಬು, ಗೌರವಾಧ್ಯಕ್ಷರಾದ ಸಿದ್ದಪ್ಪ, ಹಿರಿಯ ಪತ್ರಕರ್ತರಾದ ಬಿ ಮಗದುಮ್, ಕಾನೂನು ಸಲಹೆಗಾರರು ವಕೀಲರಾದ ಹಾಲೇಶ್ ಪದಾಧಿಕಾರಿಗಳಾದ ಅಲಿ ಅಕ್ಬರ್, ರಾಮು, ರಾಜು ಬಾವಿಕಟ್ಟಿ, ಜಮೀರ್ ,ಚಂದ್ರಣ್ಣ ವೇದಾರ್, ಗೋಪಿನಾಥ್, ಗಣೇಶ್, ಗಿರೀಶ್ ಉಪಸ್ಥಿತರಿದ್ದರು*.