ಅಕ್ರಮ ಮಧ್ಯ ಮಾರಾಟ ನಿಲ್ಲಿಸುವಂತೆ ಚನ್ನಗಿರಿ ಅಬಕಾರಿ ಕಚೇರಿ ಮುಂದೆ ನಡೆಯುತ್ತಿದ್ದ 17ನೇ ದಿನದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ದಾವಣಗೆರೆ ಅಪಾರ ಜಿಲ್ಲಾಧಿಕಾರಿಗಳು ಹಾಗೂ ಅಪಾರ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿ ಮೇರೆಗೆ ಬೇಡಿಕೆ ಈಡೇರಿಸಲು 15 ದಿನಗಳ ಗಡವು ನೀಡಿ 15 ದಿನಗಳ ಒಳಗಾಗಿ ಬೇಡಿಕೆ ಈಡೇರದಿದ್ದರೆ ತಾಲೂಕು ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಮೊದಲ ದಿನದಿಂದ ಇಲ್ಲಿಯ ವರೆಗೆ ನಮ್ಮ ಹೋರಾಟ ಯಶಸ್ವಿಯಾಗಿ ನಡೆದು ಬರಲು ಸಹಕರಿಸಿದ DSS ಮುಖಂಡರಿಗೂ ಹಾಗೂ ಬೆಂಬಲ ನೀಡಿ ಶಕ್ತಿ ತುಂಬಿದ ಕನ್ನಡ ನಾಡು ಹಿತ ರಕ್ಷಣಾ ವೇದಿಕೆ. ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ರಾಷ್ಟ್ರೀಯ ಬೀಮ್ ಆರ್ಮಿ. ಅಂಗನವಾಡಿ ಕಾರ್ಯಕರ್ತೆಯರರು ಹಾಗೂ ಮಹಿಳಾ ಸಂಘಟನೆ. ಹಮಾಲಿ ಕಾರ್ಮಿಕರ ಸಂಘ. ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ . ಮಾನವ ಹಕ್ಕುಗಳ ಆಯೋಗ . ಗಂಗಾ ಪ್ಯಾರಾಮೆಡಿಕಲ್ ಕಾಲೇಜ್. ಮಣ್ಣಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಅಹಿಂದ ಪ್ರಗತಿಪರ ಎಲ್ಲಾ ಜನಪರ ಸಂಘಟನೆಗಳ. ವಕೀಲರಾದ ಅನಿಸ್ ಪಾಷಾ ಹಾಗೂ ಪ್ರತಿಯೊಬ್ಬ ಹೋರಾಟಗಾರರಿಗೂ ಹೃದಯ ಪೂರ್ವಕ ಧನ್ಯವಾದಗಳು ಮುಂದಿನ ಎಲ್ಲಾ ಜನಪರ ಹೋರಾಟಗಳಿಗೂ ನಿಮ್ಮೆಲ್ಲರ ಬೆಂಬಲ ಸದಾ ಇರಲಿ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ.. ಎಂದು ಪ್ರತಿಭಟನಾಕಾರರು ತಿಳಿಸಿದರು ವರದಿ ಸ್ಮಾರ್ಟ್ ನ್ಯೂಸ್ ಕನ್ನಡ ಚೆನ್ನಗಿರಿ