ಜಯ ಕರ್ನಾಟಕ ಸಂಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಘಟಕದ ವತಿಯಿಂದ ದಿನಾಂಕ 12/10/2024 ರಂದು ಹರಿಹರದ ಗಾಂಧಿ ಸರ್ಕಲ್ ನಲ್ಲಿ 8ನೇ ದಿನದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದೆ ವಿಷಯ ಹರಿಹರ ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರ ಅವಧಿ ಮೀರಿರುವ ಕಾರಣ ನಿಯಮಾನುಸಾರ ಅಂಗಡಿ ಮಳಿಗೆಗಳನ್ನು ಹರಾಜು ಪ್ರಕ್ರಿಯ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ಮತ್ತು ಅಧ್ಯಕ್ಷರು ಜಿಲ್ಲಾ ಕ್ರೀಡಾಂಗಣ ಸಮಿತಿ ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನದಂತೆ ಎಲ್ಲಾ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚನೆ ನೀಡಿರುತ್ತಾರೆ ಆದರೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಾವಣಗೆರೆ ಇವರು ಹರಿಹರ ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಿಗೆ ದಿನಾಂಕ 27 /9/2024 ರಂದು ಹರಾಜು ಪ್ರಕಟಣೆ ಹೊರಡಿಸಿ ದಿನಾಂಕ 1.10.2024ರಂದು ಅರ್ಜಿ ವಿತರಿಸಲು ಹಾಗೂ ದಿನಾಂಕ 5.10.2024 ರಂದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ ಸದರಿ ಅಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳ ಮತ್ತು ಕ್ರೀಡಾ ಅಧ್ಯಕ್ಷರ ಸಮಿತಿಯಲ್ಲಿ ತೀರ್ಮಾನಿಸಿರುವ ತೀರ್ಮಾನದಂತೆ ಎಲ್ಲಾ ಮಳಿಗೆಗಳನ್ನು ಹರಾಜು ಪ್ರಕ್ರಿಯ ಕೈಗೊಳ್ಳುವಂತೆ ಅಲ್ಲದೆ ಈ ಹಿಂದೆ ಸದರಿ ವಾಣಿಜ್ಯ ಮಳಿಗೆಗಳಿಗೆ ಹರಾಜು ಪ್ರಕ್ರಿಯೆಗೆಂದು ಅರ್ಜಿ ಫಾರಮುಗಳನ್ನು ಪಡೆಯಲು ಸಾರ್ವಜನಿಕರಿಂದ ರೂ 500/- ಗಳನ್ನು ಸಂಗ್ರಹಣೆ ಮಾಡಿಕೊಂಡು ಹರಾಜು ಪ್ರಕ್ರಿಯ ನಡೆಸಿರುವುದಿಲ್ಲ ಇದರಿಂದ ಸಾರ್ವಜನಿಕರು ವಂಚಿತರಾಗಿದ್ದು ಇತ್ತೀಚಿಗೆ ಪುನ: ಸದರಿ ಮಳಿಗೆಗಳಿಗೆ ಹರಾಜು ನಡೆಸಲು ಜಿಲ್ಲಾ ಸಮಿತಿಯ ತೀರ್ಮಾನ ಉಲ್ಲಂಘನೆ ಮಾಡಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಡುವವರೆಗೂ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದ್ದು ಸತ್ಯಾಗ್ರಹದಲ್ಲಿ ತಾಲೂಕು ಅಧ್ಯಕ್ಷರಾದ ಎಸ್ ಗೋವಿಂದ ಉಪಾಧ್ಯಕ್ಷರದ ಆನಂದ್ ಎಂ ಆರ್ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿ ಎಚ್ ಕಾಜಂಚಿ ಶಬರೀಶ್ ಮಧು ಸಂಘಟನಾ ಕಾರ್ಯದರ್ಶಿ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷರು ಹನುಮಂತಪ್ಪ ಡಿ ಬಸವರಾಜ್ ಕಿರಣ್ ಆರ್ ಪಿ ವಿಜಯ್ ಸಂಜೀವಪ್ಪ ಉಪಸ್ಥಿತಿಯಲ್ಲಿದ್ದರು