ಹರಿಹರ : ತಾಲೂಕಿನ ರಾಜನಹಳ್ಳಿ ಗ್ರಾಮದ ವಾಲ್ಮೀಕಿ ಮಠದಲ್ಲಿ ೭ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ ೮ ರಂದು ಶನಿವಾರ ಬೆಳಿಗ್ಗೆ ೧೦:೦೦ ಗಂಟೆಯಿಂದ ಸಂಜೆ ೬:೦೦ ರ ವರೆಗೆ, ಕಾರ್ಮಿಕ ಸಚಿವರು ಸಂತೋಷ ಲಾಡ್ ನೇತೃತ್ವದ “ಸಂತೋಷ್ ಲಾಡ್ ಫೌಂಡೇಶನ್” ಹಾಗೂ ಶ್ರೀಮಠದ ಸಹಭಾಗಿತ್ವದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಉದ್ಯೋಗಾಸಕ್ತರು ಈ ಕ್ಷಣದಿಂದಲೇ ಆನ್ಲೈನ್ ರಿಜಿಸ್ಟ್ರೇಷನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ದಿನಾಂಕ: ೦೮.೦೨.೨೦೨೫ ರಂದು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಿ, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
*ವರದಿ* *ಮೊಹಮ್ಮದ್ ಗೌಸ್* *ಸ್ಮಾರ್ಟ್ ನ್ಯೂಸ್ ಚಾನಲ್ ಕನ್ನಡ* *ಹರಿಹರ*