ಹರಿಹರ : ವಿಶ್ವವೆಲ್ಲಾ ಒಪ್ಪಿಕೊಂಡಿರುವ ರಾಮಾಯಣವನ್ನು ಬರೆದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಹಿಂದುಳಿದ ಸಮಾಜಗಳಲ್ಲೊಂದ್ದಾಗಿದ್ದು. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರೀಪೀಠ ಹಾಗೂ ಪೀಠಾಧೀಶರು ಶ್ರಮಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿಗಾಗಿ ಶ್ರೀಗಳು ಶ್ರಮಿಸುತ್ತಿರುವ ಕಾರ್ಯ ಶ್ಲಾಘನಿಯವಾದುದ್ದಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ| ಜಿ ಪರಮೇಶ್ವರ ಹೇಳಿದರು. ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರು ಪೀಠದಲ್ಲಿ ನಡೆದ 2025ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ. ಶ್ರೀ ಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 18ನೇ ವರ್ಷದ ಪುಣ್ಯರಾಧನೆ, ಡಾ| ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಹಾಗೂ ಜನ ಜಾಗೃತಿ ಜಾತ್ರಾ ಮಹೋತ್ಸವ ಉದ್ಘಾಟಿಸಿ, 2025ನೇ ಸಾಲಿನ ವಾಲ್ಮೀಕಿ ರತ್ನ ಪ್ರಶಸ್ತಿಯನ್ನು ಹರ್ತಿಕೋಟೆ ವಿರೇಂದ್ರಸಿಂಹ, ಚಿತ್ರ ನಟ ಮಾಜಿ ಸಂಸದ ಶಶಿಕುಮಾರ ಅವರಿಗೆ ಮದಕರಿ ನಾಯಕ ಪ್ರಶಸ್ತಿ ವಿತರಿಸಿ, ಸನ್ಮಾನಿಸಿದ ಅವರು ಮಾತನಾಡಿ. ಜಾತಿ ಗಣತಿಯ ವರದಿ ಸಿದ್ದಗೊಂಡಿದ್ದು, ಅದರ ವಿರುದ್ದ ಹಲವಾರು ಟೀಕೆ ಟಿಪ್ಪಣಿಗಳು ಬರುತ್ತಿವೆ. ಅದನ್ನು ಬಿಡುಗಡೆಗೊಳಿಸಲು ತಡೆ ಹೊಡ್ಡುತ್ತಿದ್ದಾರೆ. ಏನೇ ಆಗಲಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿಯೇ ತೀರುತ್ತೆವೆಂದು ಪರಮೇಶ್ವರ ಸವಾಲು ಎಸೆದರು. ಡಾ| ಬಾಬಾ ಸಾಹೇಬ ಅಂಬೇಡ್ಕರವರು ಸಂವಿದಾನವನ್ನು ರಚಿಸುವಾಗ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ ಅಂಶಗಳನ್ನು ಸಹ ಸಂವಿದಾನದಲ್ಲಿ ಅಳವಡಿಸಿದ್ದಾರೆ, ಸಮಾನತೆ, ಸಹೋದರತೆ, ಭ್ರಾತ್ತೃತ್ವ, ಸತ್ಯ, ಅಹಿಂಸೆ ಇವೆಲ್ಲವು ವಾಲ್ಮೀಕಿ ರಾಮಾಯಣದಲ್ಲಿವೆ. ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ಸಮಾಜದ ಸಂಘಟನೆ ಮಾಡಬೇಕು. ಡಾ|ಬಾಬಾ ಸಾಹೇಬರು ಹೇಳಿದಂತೆ ಮೊದಲು ಶಿಕ್ಷಣವಂತರಾಗಬೇಕು. ಅಜ್ಞಾನದಿಂದ ಜ್ಞಾನದೆಡೆಗೆ ಸಾಗಲು ಶಿಕ್ಷಣವೆ ಶಕ್ತಿ. ಜ್ಞಾನವ ಬೇಳೆದಲ್ಲಿ, ಶಿಕ್ಷಣವಂತರಾದಲ್ಲಿ ಸರ್ವವನ್ನು ಸಾಧಿಸಲು ಸಾಧ್ಯ. ಸಮಾಜದ ಸರ್ವತೋಮುಖ ಕಲ್ಯಾಣಕ್ಕಾಗಿ, ಮೀಸಲಾತಿಗಾಗಿ ಆಗ್ರಹಿಸಿ ಶ್ರೀ ಪೀಠದ ಪೀಠಾಧೀಶರಾದ ಪ್ರಸನ್ನಾನಂದ ಶ್ರೀಗಳು, ಮಠದಿಂದ ೧೫ ದಿನಗಳ ಕಾಲ ಸುಮಾರು ೪೦೦ ಕಿ.ಮಿ ದೂರದ ಬೆಂಗಳೂರು ವರೆಗೆ ಪಾದಯಾತ್ರೆ ಮೂಲಕ ತೆರಳಿ, ಪ್ರೀಡಂ ಪಾರ್ಕಿನಲ್ಲಿ ೨೫೭ ದಿನಗಳ ಕಾಲ ಅನ್ನ-ಆಹಾರವಿಲ್ಲದೆ ಸಕಾರದ ವಿರುದ್ದ ಮೌನ ಧರಣಿ ಸತ್ಯಾಗ್ರಹ ನಡೆಸಿರುವುದು ಮರೆಯಲಾರದ ಸಂಗತಿಯಾಗಿದೆ. ಶ್ರೀಗಳು ಸತ್ಯಾಗ್ರಹ ನಡೆಸುತ್ತಿದ್ದ ಸಮಯದಲ್ಲಿ ಸಮ್ಮಿಶ್ರ ಸರ್ಕಾರವಿತ್ತು. ಆಗ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿದ್ದರು. ನಾನು ಉಪ ಮಖ್ಯ ಮಂತ್ರಿಯಾಗಿದ್ದೆ. ಮುಖ್ಯ ಮುಖ್ಯ ಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಶ್ರಿಗಳಿಂದ ಮನವಿ ಸ್ವೀಕರಿಸಲಿಲ್ಲ. ಆದ ಸಮಾಜ ೧೫ ಜನ ಶಾಸಕರ ಜೊತೆಗೂಡಿ ಸ್ಥಳಕ್ಕೆ ತೆರಳಿ ಶ್ರೀಗಳ ಮನವಿಯನ್ನು ಸ್ವೀಕರಿಸಿ. ಅಂದು ಶ್ರಿಗಳಿಗೆ ಭರವಸೆ ನೀಡಿದಂತೆ ಇಂದು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದೆವೆ. ಆ ಕೆಲಸ ನಮ್ಮಿಂದೆ ಆಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಅವರ ಕಾಲು ಮತ್ತು ಮಂಡಿನೋವಿನಿಂದ ಬರಲು ಆಗಿರುವುದಿಲ್ಲ. ಸಿದ್ದರಾಮಯ್ಯನವರು, ಹಾಗೂ ಸರ್ಕಾರ ಯ್ಯಾವಾಗಲೂ ನಿಮ್ಮ ಬೆಂಬಲಕ್ಕಿರುತ್ತದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಲಿಗೆ ವರ್ಷಕ್ಕೆ 58 ಸಾವಿರಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಈ ಯೋಜನೆಗಳ ಕುರಿತು ವಿಶ್ವ ಸಂಸ್ಥೆ ಸಮಿಕ್ಷೆ ನಡೆಸಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಷ್ಯ. ಅದಕ್ಕಾಗಿ ಶ್ರೀ ಪೀಠದಿಂದ ವೈದ್ಯಕೀಯ, ಇಂಜನೀಯರಿಂಗ್ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮಠದ ಹತ್ತಿರವಾಗಲಿ, ಮತ್ತು ದೂರದಲ್ಲಾಗಲಿ 10 ಅಥವಾ 50 ಎಕರೆ ಭೂಮಿಯನ್ನು ಖರೀಧಿಸಬೇಕು. ಅದಕ್ಕೆ ನಮ್ಮ ಸರ್ಕಾರದ ಬೆಂಬಲ ವಿರುತ್ತದೆ. ನಾನಿಂದು ನೇರವಾಗಿ ಹೇಳುತ್ತೆನೆ. ಕಾಂಗ್ರೇಸ್ ಅಂದರೆ ವಾಲ್ಮೀಕಿ ಸಮಾಜ, ವಾಲ್ಮೀಕಿ ಸಮಾಜವೆಂದರೆ ಕಾಂಗ್ರೇಸ್ ಎಂದು ಡಾ| ಜಿ ಪರಮೇಶ್ವರ ವಾಲ್ಮೀಕಿ ಸಮಾಜಕ್ಕೆ ಕರೆನೀಡಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ ಅವರು ವೇದಿಕೆಯತ್ತ ಬರುತ್ತಿದ್ದಂತೆಯೇ ವಾಲ್ಮೀಕಿ ಸಮಾಜದವರು, ಮುಂದಿನ ಮುಖ್ಯ ಮಂತ್ರಿ ಸತೀಶ ಜಾರಕೀಹೊಳಿ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಸಚಿವ ಜಾರಕೀಹೊಳಿ ಮಾತನಾಡಿ, ಸಮಾಜದ ಸರ್ವರನ್ನು ಜಾಗೃತರನ್ನಾಗಿಸುವುದೆ ಜಾತ್ರೆಯ ಉದ್ದೇಶ, ಶಿಕ್ಷಣ, ಉದ್ಯಮ, ಸಾಮಾಜಿಕ ನ್ಯಾಯ, ಆರ್ಥಿಕ ಸಬಲತೆ ಎಲ್ಲರದಾದಾಗ ಅಭಿವೃದ್ಧಿ ಸಾಧ್ಯ. ಡಾ| ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿದಾನ ಬರೆದು 70 ವರ್ಷಗಳ ನಂತರ, ಈಗ ಅವರ ಕನಸು ನನಸಾಗಿಸುವ ಪರಿರ್ವನೆಯ ಗಾಳಿ ಬಿಸುತ್ತಿದೆ. ಈಗ ಅಭಿವೃದ್ಧಿಯ ಕಾಲವಾಗಿದೆ ಕಳೆದ ಹಲವಾರು ವರ್ಷಗಳಿಂದ ಉದ್ಯಮ ಸ್ಥಾಪಿಸುವುದಕ್ಕಾ ಕೆ.ಐಡಿಬಿ ಯಲ್ಲಿ ಕೈಗಾರಿಕಾ ಶೆಡ್ಡುಗಳನ್ನು ಪಡೆಯಲು ತುಂಬಾ ತೊಂದರೆ ಇತ್ತು. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಕೆಎಸ್‌ಎಫ್‌ಸಿ ಹಾಗೂ ಕೆಐಡಿಬಿ ಇಂದ ಸುಲಬವಾಗಿ ಉದ್ಯಮಕ್ಕಾಗಿ ಕಡಿಮೆ ಬಡ್ಡಿಯಲ್ಲಿ ಹೆಚ್ಚಿನ ಲಾಭ ಸಿಗುವಂತಾಗಿದೆ. ಸರ್ವಕ್ಕೂ ಶಿಕ್ಷಣವೆ ಮದ್ದಾಗಿದ್ದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷನವನ್ನು ಕಲಿಸಿರಿ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಅಯೋದ್ಯಯಲ್ಲಿನ ರಾಮನೇ ಬೇರೆ, ವಾಲ್ಮೀಕಿ ರಾಮಾಯಣದ ರಾಮನೇ ಬೇರೆ. ರಾಮ ಪೂಜೆಯ ವಸ್ತುವಲ್ಲ. ನಾವೆಲ್ಲಾ ವಿದ್ಯಾವಂತರಾಗದಿದ್ದಲ್ಲಿ ಕೇಸರಿ ಮಯದತ್ತ ಸಾಗಬೇಕಾಗುತ್ತದೆ. ನಿವೇಲ್ಲ ಶಿಕ್ಷಣ ಪಡೆವರಾದಲ್ಲಿ ಮಾತ್ರ ಹಸಿರಿಕರಣದತ್ತ ಸಾಗಲು ಸಾಧ್ಯ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂವಿದಾನದ ಕಾಯ್ದೆ ಅಡಿಯಲ್ಲಿ ಜಾರಿಯಾಗಿವೆ ಎಂದು ವಿಶ್ವ ಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿರುವುದು ಶ್ಲಾಘನಿಯ ವೆಂದರು. ದಿವ್ಯ ಸಾನಿಧ್ಯವಹಿಸಿದ್ದ ಶ್ರೀಪೀಠದ ಪೀಠಾಧೀಶರಾದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆಯುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು, ಬ್ಯಾಕ್‌ಲಾಗ್ ಹುದ್ದೆಗಳ ಭತಿಗೆ ಸರ್ಕಾರ ಮುಂದಾಗಬೇಕೆAದರು. ಜಾತ್ರಾ ಸಮಿತಿಯ ಅಧ್ಯಕ್ಷ ಬಿ.ದೇವೆಂದ್ರಪ್ಪ ಚಿಕ್ಕಮ್ಮನಹಟ್ಟಿ, ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಸಹಕಾರ ಸಚಿವ ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಂಸದ ಈ ತುಕಾರಾಮ್ ಮಾತನಾಡಿದರು. ಉಪ ಸಭಾಪತಿ ರುದ್ರಪ್ಪ ಲಮಾಣಿ, ಹಿಂದುಳಿದ ವರ್ಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಜೆ.ಎನ್ ಗಣೇಶ, ಎಸ್.ವಿ ರಾಮಚಂದ್ರಪ್ಪ, ಶಾಸಕರಾದ ಪ್ರಕಾಶ ಕೋಳಿವಾಡ, ಡಿ.ಜಿ ಶಾಂತನಗೌಡ, ಕೆ.ಎಸ್ ಬಸವಂತಪ್ಪ, ಲತಾ ಮಲ್ಲಿಕಾರ್ಜುನ, ಶ್ರೀನಿವಾಸ್ ಮಾನೆ, ಯು.ಬಿ ಬಣಕಾರ, ಯಾಸಿರ್‌ಖಾನ್ ಪಠಾಣ, ದರ್ಶಯನ್ ದೃವನಾರಾಯಣ, ವಿರೇಂದ್ರ ಪಪ್ಪಿ, ಮಾಜಿ ಶಾಸಕ ಎಸ್ ರಾಮಪ್ಪ, ಹೆಚ್.ಪಿ ರಾಜೇಶ ಇದ್ದರು.