ವೃದ್ಧ ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿತನ ಬಂಧನದಾವಣಗೆರೆ ವೃದ್ದೆಯ ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೊಕ್ಕನೂರು ಗ್ರಾಮದ ವಿರೇಶಚಾರಿ, (38) ಬಂಧಿತ ಆರೋಪಿ.ಜನವರಿ 26 ರಂದು ಬೆಳಗಿನಜಾವ 05-45 ಗಂಟೆ ಸಮಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದ ಮಲ್ಲಮ್ಮ ಗಂಡವೆಂಕಟನಗೌಡ ಕೊರಳಲ್ಲಿದ್ದ 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಮಲೆಬೆನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು.ಫೆ. 16 ರಂದು ಆರೋಪಿ ಬಂಧಿಸಿ ಒಟ್ಟು 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ಅಂದಾಜು ಬೆಲೆ 2,00,000/- ರೂ ಬೆಲೆ ಬಾಳುವ ಮಾಂಗಲ್ಯ ಸರವÀನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.