ದಿನಾಂಕ 5/3/2025 ರಂದು ಜಯ ಕರ್ನಾಟಕ ಸಂಘಟನೆ ರಾಜ್ಯಅಧ್ಯಕ್ಷರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಆದ ಡಾ|| ಕೆ ಗೋವಿಂದರಾಜ್ ರವರಿಗೆ ವಿಧಾನಸೌಧದಲ್ಲಿ…. ಮನವಿ ಕೊಡಲಾಯಿತು ವಿಷಯ ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಿರುವ 50 ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಪ್ರಕ್ರಿಯೆ ನಡೆಸದಿರುವ ಮತ್ತು ಉದ್ಯಮ / ಪರವಾನಿಗೆಗಳನ್ನು ನಗರಸಭೆಯಿಂದ ನವೀಕರಿಸಿ ಕೊಳ್ಳದೆ ಅನದಿಕೃತ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಾಗೂ ಕ್ರೀಡಾಂಗಣದ ಮಳಿಗೆಗಳಲ್ಲಿ ಮಧ್ಯದ ಅಂಗಡಿ ನಡೆಸುತ್ತಿರುವ ಹಾಗೂ ಕರಾರು ಅವಧಿ ಮುಗಿದಿದ್ದರೂ ಸಹ ನಿಯಮಾನುಸಾರ ಮರು ಹರಾಜು ಪ್ರಕ್ರಿಯ ನಡೆಸದೆ ಇರುವುದರಿಂದ ಮರು ಅರಾಜು ಪ್ರಕ್ರಿಯೆ ನಡೆಸುವಂತೆ ನಮ್ಮ ಜಯ ಕರ್ನಾಟಕ ಸಂಘಟನೆಯ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಘಟಕದ ವತಿಯಿಂದ 152 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರ ಮಾಡುತ್ತಿದ್ದರೂ ಸಹ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿರುವುದಿಲ್ಲ ಹಾಗಾಗಿ ತಾವುಗಳು ತಕ್ಷಣವೇ ದಾವಣಗೆರೆ ಜಿಲ್ಲೆ ಹರಿಹರದ ಕ್ರೀಡಾಂಗಣದ ಆವರಣದಲ್ಲಿರುವ ಮಧ್ಯದ ಅಂಗಡಿಯನ್ನು ತೆರವುಗೊಳಿಸಿ ನಿಯಮಾನುಸಾರ ಎಲ್ಲಾ ಮಳೆಗೆಗಳನ್ನು ಮರು ಹರಾಜು ಪ್ರಕ್ರಿಯೆ ನಡೆಸುವಂತೆ ಮನವಿ ಕೊಡಲಾಯಿತು ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ|| ಕೆ ಗೋವಿಂದ್ ರಾಜ್ ರವರು ತಕ್ಷಣವೇ ಸಂಬಂಧಪಟ್ಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತರಾದ ಆರ್ ಚೇತನ್ ರವರಿಗೆ ಸ್ಥಳಕ್ಕೆ ಕಳಿಸಿ ಕೂಡಲೇ ಮಧ್ಯದ ಅಂಗಡಿಯನ್ನ ತೆರೆವುಗೊಳಿಸಿ ನೇಮನುಸಾರ ಹರಾಜು ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ರಾಜ್ಯ ಆಯುಕ್ತರಾದ ಆರ್ ಚೇತನ್ ರವರು ದಾವಣಗೆರೆಯ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಮಾತನಾಡುತ್ತೇನೆ ಆದಷ್ಟು ಬೇಗ ಮರು ಹರಾಜು ಪ್ರಕ್ರಿಯೆ ನಡೆಸುವಂತೆ ಮಾತನಾಡುತ್ತೇನೆ ಎಂದರು ಮನವಿ ಕೊಡುವ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯ ಅಧ್ಯಕ್ಷರು ಡಾ||ಬಿ ಎನ್ ಜಗದೀಶ್ ಅಣ್ಣನವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರಜಪೂತ್ ಹಾಗೂ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ ರವರು ಹಾಗೂ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸಾರವಾಡ ಹರಿಹರ ತಾಲೂಕು, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರು ಎಸ್ ಗೋವಿಂದ್ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿ ಹೆಚ್ ಉಪಸ್ಥಿತಿಯಲ್ಲಿದ್ದರು