ಅನ್ನಭಾಗ್ಯ: ಇನ್ಮುಂದೆ ಹಣದ ಬದಲು ದಿನಸಿ ಕಿಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ

Spread the love

ಬೆಂಗಳೂರು: ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ನೀಡಿದ್ದು, ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಆಹಾರ ಕಿಟ್ ನಲ್ಲಿ ಎಣ್ಣೆ, ಬೇಳೆ, ಕಾಳು ಒಳಗೊಂಡ ದಿನಸಿ ಇರಲಿದೆ.

ಈ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ ಮಾಡಿದ್ದು, ಅನ್ನಭಾಗ್ಯದ 5 ಕೆಜಿ ಅಕ್ಕಿ ಬದಲು, ಇಲ್ಲಿವರೆಗೆ ಹಣ ನೀಡಲಾಗುತ್ತಿತ್ತು. ಇದೀಗ ಹಣದ ಬದಲು ಆಹಾರದ ಕಿಟ್ ವಿತರಿಸಲಾಗುವುದು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಅನ್ನಭಾಗ್ಯದ ಹಣ ಡಿಬಿಟಿ ಫಲಾನುಭವಿಗಳ ಖಾತೆಗೆ ಸರಿಯಾಗಿ ಸಮಯಕ್ಕೆ ಜಮಾ ಆಗದಿರುವ ಹಿನ್ನೆಲೆ ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *