ಈ ದಿನ 28-11-2024 ರಂದು ಲೋಕಸಭೆಯಲ್ಲಿ ಸನ್ಮಾನ್ಯ ಶ್ರೀ ನಿತಿನ್ ಜೈರಾಮ್ ಗಡ್ಗರಿ ರವರನ್ನು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರು ರವರ ಅಧಿಕೃತ ಕಚೇರಿಯಲ್ಲಿ ಸನ್ಮಾನ್ಯ ಶ್ರೀ ಈ.ತುಕಾರಾಮ್, ಸಂಸದರು ಬಳ್ಳಾರಿ ಲೋಕಸಭಾ ಕ್ಷೇತ್ರ ಇವರು ಭೇಟಿಯಾಗಿ ಅಖಂಡ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಹೊಸಪೇಟೆ – ಗುತ್ತಿ ಹೆದ್ದಾರಿಯಲ್ಲಿ ಬರುವ ಬರುವ ಮೇಲ್ಸೇತುವೆಗಳ ಬಗ್ಗೆ ಹಾಗೂ ಹೊಸಪೇಟೆ ಬೈಪಾಸ್ ಇಂದ ಸುಧಾ ಕ್ರಾಸ್ ರವರೆಗೆ ಮತ್ತು ಹೊಸಪೇಟೆ – ಚಿತ್ರದುರ್ಗ ಬರುವ ಮೇಲ್ಸೇತುವೆಗಳ ಬಗ್ಗೆ ಚರ್ಚಿಸಿ ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದು ಸದರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.