2025 ಭಾರತೀಯ ಪಂಚಾಂಗ ಕ್ಯಾಲೆಂಡರ್ ಬಿಡುಗಡೆ

Spread the love

ಉಡುಪಿಯ ಕೇಶವ ಮೆಹೆಂದಳೆ ರಚಿಸಿದ ೨೦೨೫ರ ಭಾರತೀಯ ಪಂಚಾಂಗ ದಿನದರ್ಶಿಕೆಯನ್ನು, ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ| ಜಿ.ಜೆ.ಮೆಹೆಂದಳೆಯವರು ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಹಾಗೂ ಮಂಡ್ಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ ಇವರು, ನಂತರ ದುಬ್ಯೆಗೆ ಹೋಗಿ ಅಲ್ಲಿ ಕನಸ್ಟçಕ್ಷನ್ ಪ್ರೊಜೆಕ್ಟ್ ಮ್ಯಾನೇಜರ್‌ರಾಗಿ ಕೆಲಸ ಮಾಡಿದರು. ಕೊವಿಡ್ ಸಮಯದಲ್ಲಿ ಕಂಪನಿ ಸಂಬಳವಿಲ್ಲದೇ ಧೀರ್ಘಕಾಲದ ರಜೆ ಹೆರಿದ್ದರಿಂದ ಮರಳಿ ಭಾರತಕ್ಕೆ ಬಂದ ಇವರು ಜನಸಾಮಾನ್ಯರಿಗೆ ದಿನನಿತ್ಯಕ್ಕೆ ಬೇಕಾಗುವಂತೆ ಪ್ರತಿ ದಿನದ ಪಂಚಾAಗ, ತಿಥಿ, ಮಾಸ, ಹಬ್ಬ, ಪೂಜೆ, ಏಕಾದಶಿ, ಗ್ರಹಣ ಇತ್ಯಾದಿಗಳ ಮಾಹಿತಿ ಒಂದೆಡೆಗೆ ಸಿಗುವ ದಿನದರ್ಶಿಕೆಯ ಕೊರತೆ ಕಂಡು ದಿನದರ್ಶಿಕೆ ರಚಿಸಿದರು. ೨೦೨೧ ರಲ್ಲಿ ಮೊದಲ ದಿನದಶೀಕೆ ಬಿಡುಗಡೆಯಾಗಿ ಮುದ್ರಣದ ನಂತರ ಅದರಲ್ಲಿಯ ದೋಷಗಳನ್ನು ಸಿದ್ದಪಡಿಸಿ, ಮುದ್ರಿಸಿ ಇಂದಿಗೆ ೩ ನೇ ವರ್ಷದಲ್ಲಿ ಅತ್ಯಂತ ಸುಂದರವಾಗಿ ಆಯಾ ದಿನಕ್ಕೆ ಅನುಗುಣವಾಗಿ ಸುಲಭ-ಸರಳವಾಗಿ ಎಲ್ಲ ವಿವರಗಳನ್ನು ನೀಡುವ ದಿನದರ್ಶಿಕೆ ಇದಾಗಿದೆ ಎಂದು, ಡಾ|ಜಿ.ಜೆ.ಮೆಹೆಂದಳೆ ಹೇಳಿದರು. ಧನ್ಯೋಸ್ಮಿ ಭರತಭೂಮಿ ಸಂಘಟನೆಯ ಶ್ಯಾಮಾಚಾರಿ, ವಿಜಯ ಉದಗಟ್ಟಿ, ಕಿರಣ.ಕೆ, ಆಶಾ ಕಾರ್ಯಕರ್ತೆ ಪುಷ್ಪಲತಾ ಜುಂಜಪ್ಪ, ಕಮ್ಮಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *