ಜಮ್ಮು ಮತ್ತು ಕಾಶ್ಮೀರದ ದೋಡ ವಿಧಾನಸಭಾ ಕ್ಷೇತ್ರದ ನೂತನ ಎಎಪಿ ಶಾಸಕ .

Spread the love

ಇವರ ಹೆಸರು ಮೆಹರಾಜ್ ಮಲಿಕ್ .
ವಯಸ್ಸು – 36 ..
ಜಮ್ಮು ಮತ್ತು ಕಾಶ್ಮೀರದ ದೋಡ ವಿಧಾನಸಭಾ ಕ್ಷೇತ್ರದ ನೂತನ ಎಎಪಿ ಶಾಸಕ .
ಇವರ ಒಟ್ಟೂ ಆಸ್ತಿ ಎಷ್ಟು ಗೊತ್ತಾ 29,000 !
ಹೌದು ಬರೀ ಇಪ್ಪತ್ತೊಂಬತ್ತು ಸಾವಿರ.

ಸಣ್ಣಪುಟ್ಟ ಕಾರ್ಪೆಂಟರಿ‌ ಕೆಲಸಗಳನ್ನು ಮಾಡಿಕೊಂಡಿದ್ದ ಯುವಕ ಎಎಪಿ ಶುರುವಾದಾಗ ಪಕ್ಷ ಸೇರುತ್ತಾನೆ. ಜನರ ಜೊತೆಗೆ ಬೆರೆಯುತ್ತಾ ಒಡಾಡುತ್ತಿದ್ದ ಈ ಹುಡುಗನಿಗೆ ಜನರೇ ದುಡ್ಡು ಕೊಟ್ಟು ಕಾಶ್ಮೀರದ ದೋಡ ಜಿಲ್ಲೆಯ ಜಿಲ್ಲಾ ಪಂಚಾಯತ್ (District Council) ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾರೆ.
ಮೆಹರಾಜ್ ಮಲಿಕ್ ಅವರ ಜನಪರ ಕೆಲಸಗಳನ್ನು ಕಂಡು ಈ ಬಾರಿ ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿ, ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಣೆ ಮಾಡಿ ಚುನಾವಣೆ ಮಾಡಿದರು.
ಇವತ್ತು ಫಲಿತಾಂಶ ಕಣ್ಣ ಮುಂದಿದೆ. ಭಾರತದ ಮುಕುಟಮಣಿ ಕಾಶ್ಮೀರದಲ್ಲಿ ಕ್ರಾಂತಿಯ ದನಿ ಮೊಳಗಿದೆ, ಪೊರಕೆ ಗೆದ್ದಿದೆ.
ಇವತ್ತು‌ ಐದು ರಾಜ್ಯಗಳಲ್ಲಿ ನಮ್ಮ ಶಾಸಕರು ಇದ್ದಾರೆ

ಪ್ರತಿಯೊಬ್ಬ ಎಎಪಿ ಬೆಂಬಲಿಗರಿಗೂ ಇದು ಹೆಮ್ಮೆಯ ಕ್ಷಣ!
ಅಭಿನಂದನೆಗಳು .

Leave a Reply

Your email address will not be published. Required fields are marked *