ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಕ್ಕೆ ಬಂದ ನಾಗರಿಕರ ಮೇಲೆ ದಾಳಿ ಮಾಡಿ ಭಯೋತ್ಪಾದಕರು ಗುಂಡಿಕ್ಕಿ ಸೂಮರು 26 ಜನರ ಹತ್ಯೆ ಮಾಡಿ ಹತ್ತಾರು ಜನರನ್ನು ಗಾಯಗೊಳಿಸಿದ ಘಟನೆ ಖಂಡಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟ ಪ್ರತಿಭಟನೆ ನಡೆಸಿತು.ಈ ಸಂಬಂಧ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಿತು.ಇದೆ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕ ಟಿ. ಅಸ್ಗರ್ ಅವರು, ಈ ಘಟನೆಯಲ್ಲಿ ಹತ್ಯೆಯಾದ ಜನರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಗಾಯಗೊಂಡ ಜನರು ಅತಿ ಶೀಘ್ರದಲ್ಲಿ ಗುಣಮುಖ ಆಗಲು ಪ್ರಾರ್ಥಿಸುತ್ತೇವೆ. ಈ ಘಟನೆಯಿಂದ ದೇಶದ ನಾಗರಿಕರು ಆಕ್ರೋಶಗೊಂಡಿದ್ದಾರೆ. ಈ ಕೃತ್ಯ ಎಸಗಿದ ಎಲ್ಲಾ ಆರೋಪಿಗಳಿಗೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇದರ ಹಿಂದೆ ಇರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಆಗಲಿ, ಶತ್ರು ದೇಶದಲ್ಲಿ ಇದ್ದರೂ ಹುಡಿಕಿ ತಂದು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೋತೆ ರಾಜಕೀಯ ಸಿದ್ಧಾಂತದ ನಮ್ಮ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಭದ್ರತೆ ಮತ್ತು ಸುರಕ್ಷತೆ ವಿಷಯಗಳಲ್ಲಿ ನಾವು ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳ ಜೊತೆ ನಾವು ಇದ್ದೇವೆ ಎಂದು ತಿಳಿಸಿದರು.ಅಮಿತ್ ಶಾ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗಾಯಗೊಂಡ ಜನರಿಗೆ ಭೇಟಿಯಾಗಿ ಧೈರ್ಯ ತುಂಬಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಕಾರ್ಯಕ್ಕೆ ದಾವಣಗೆರೆ ಮುಸ್ಲಿಂ ಒಕ್ಕೂಟ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತದೆ ಎಂದು ಹೇಳಿದರು.ಭಯೋತ್ಪಾದಕ ಕೃತ್ಯ ತಡೆಗಟ್ಟಲು ಗುಪ್ತಚರ ಇಲಾಖೆ ವಿಫಲವಾಗಿದೆ. ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ವಿಫಲವಾಗಿದ್ದಾರೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಈ ಘಟನೆಯಲ್ಲಿ ಜೀವ ಕಳೆದುಕೊಂಡವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಟಿ . ಅಜ್ಗರ್ ವಕೀಲ್ ನಜೀರ್ ಅಹ್ಮದ್, ಮಹಮ್ಮದ್ ಅಲಿ ಶೋಯೇಬ್. ಜೆ. ಅಮನುಲ್ಲಾ ಖಾನ್, ಅದಿಲ್ ಖಾನ್, ಮಸೂದ್ ಅಹ್ಮದ್, ಜಬೀವುಲ್ಲಾ, ಜಾಫರ್, ರಿಯಾಜ್, ಶಾಬಾಜ್ ಖಾನ್, ಮುಜಾಮಿಲ್, ರಹಮತವುಲ್ಲಾ. ಹಯಾತ್, ಲಿಯಾಕತ್ ಅಲಿ, ನವೀದ್, ರಫೀಕ್ ಮತ್ತಿತರರು ಹಾಜರಿದ್ದರು. ವರದಿ ಸ್ಮಾರ್ಟ್ ನ್ಯೂಸ್ ಕನ್ನಡ