ಆಗ್ನೇಯ ಪದವೀಧರ ಕ್ಷೇತ್ರ-2026 ;ಜೆಡಿಯು ಪಕ್ಷದ ಅಭ್ಯರ್ಥಿ ಡಾ.ಕೆ.ನಾಗರಾಜ್ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಘೋಷಣೆ

Spread the love

ಹರಿಹರ ಜು 4: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ-2026 ರಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಜೆಡಿಯು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಕೆ.ನಾಗರಾಜ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಾಟೀಲ್ ಘೋಷಣೆ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಆಗ್ನೇಯ ಪದವೀಧರ ಕ್ಷೇತ್ರವು ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ ಒಳಪಡಲಿದೆ. ಈಗಾಗಲೇ ಐದು ಜಿಲ್ಲೆಗಳಲ್ಲಿ ಸಂಚಾರ ಆರಂಭಿಸಿದ್ದು ತಾಲೂಕು, ಹೋಬಳಿ ಹಾಗು ಜಿಲ್ಲಾಮಟ್ಟಗಳಲ್ಲಿ ಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಚಾರಪಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳ ಮನಸ್ಥಿತಿ ಪ್ರಕ್ಷುಬ್ಧವಾಗಿದೆ ಎನ್ನುವುದು ನಮಗೆಲ್ಲ ತಿಳಿದಿದೆ.ಯಾವುದನ್ನು ಲೆಕ್ಕಿಸದೆ ಸಮ ಸ್ಥಿತಿಯಲ್ಲಿ ಕೆಲಸ ಮಾಡುವಂತಹ ಯೋಗ್ಯರು ಸಮಾಜಕ್ಕೆ ಬೇಕಾ ಗಿದೆ. ಈ ತಳಹದಿಯಲ್ಲಿ ನಮ್ಮ ಪಕ್ಷ ರಾಜ್ಯದಾದ್ಯಂತ ಸಂಘಟನೆ ಯನ್ನು ಮಾಡುತ್ತ ಹೊರಟಿದೆ ಇದರ ಪರಿಣಾಮವಾಗಿ ವಿಧಾನ ಪರಿಷತ್ತಿಗೆ ನಮ್ಮ ಅಭ್ಯರ್ಥಿಯೊಬ್ಬರನ್ನು ಸ್ಪರ್ಧಿಗೊಳಿಸಲಾಗುತ್ತಿದೆ. ಶಿಕ್ಷಣ,ಆರೋಗ್ಯ,ಪರಿಸರ,ಆಡಳಿತದಲ್ಲಿ ಸಾಮರಸ್ಯ ಇವುಗಳು ಇಂದು ಇಲ್ಲವಾಗಿದೆ.ಇವುಗಳೆಲ್ಲ ಸ್ಥಾಪಿಸುವ ನಿಟ್ಟಿನಲ್ಲಿ ನಮ್ಮ ಪಕ್ಷವು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ ಅದೇ ರೀತಿ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದರು. ಚುನಾವಣೆಗಳಲ್ಲಿ ಯಾವುದೇ ರೀತಿಯ ಹಣ,ಹೆಂಡಗಳನ್ನು ಬಳಕೆ ಮಾಡದೇ ಈಗಾಗಲೇ ಒಂದು ಬಾರಿ ನಾನು ಗೆದ್ದಿರುತ್ತೇನೆ. ಅದರಂತೆ ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ರೀತಿಯ ಆಮಿಷ ಆಕಾಂಕ್ಷಿಗಳಿಲ್ಲದೆ ಸ್ಪರ್ಧೆಗೆ ತಯಾರಾಗಬೇಕು. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ ಮಾಡುತಿದ್ದೇವೆ ಎಂದು ತಿಳಿಸಿದರು. ಈಗಿನ ರಾಜಕಾರಣದಲ್ಲಿ ಪೊಜಿಷನ್ ಮಾತ್ರ ಇದೆ ಪವರ್ ಇಲ್ಲವಾಗಿದೆ ನಮ್ಮ ಪಕ್ಷದ ದೃಷ್ಟಿಯಲ್ಲಿ ಪವರ್ ಫುಲ್ ಇರುವ ಪೊಜಿಶನ್ ಉಳ್ಳ ರಾಜಕಾರಣಿಗಳು ಬೇಕಾಗಿದೆ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಪವರ್ ನೀಡಲಾಗುತ್ತಿದೆ.ಈಗಾಗಲೇ ನಮ್ಮ ಜೊತೆ ಕೆಆರ್‌ಎಸ್‌, ಆಮ್ ಆದ್ಮಿ ಪಾರ್ಟಿ ಪಕ್ಷಗಳು ಹಾಗೂ ಕನ್ನಡಪರ ಸಂಘಟನೆಗಳು ದಲಿತ ಸಂಘಟನೆಗಳು ನಮ್ಮ ಕೈಜೋಡಿಸಲು ಮುಂದಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹಲವಾರು ಆಂದೋಲನಗಳು ಸಂಗ್ರಾಮಗಳು ನಡೆದವು ನಂತರ ಸ್ವಾತಂತ್ರ್ಯ ದೊರೆಯಿತು ಆದರೆ ಪ್ರಸ್ತುತದಲ್ಲಿ ಉಲ್ಟಾ ಆಗಿದ್ದು ಯಾವುದೇ ಆಂದೋಲನಗಳು ಸಂಗ್ರಾಮಗಳು ನಡೆಯದೆ ತಣ್ಣಗಿದೆ ಮತ್ತೆ ಹಳೆಯ ಸಂಭ್ರಮ ಬರಬೇಕಾದರೆ ಪ್ರದರ್ಶನಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಅಭ್ಯರ್ಥಿ ಡಾ.ಕೆ.ನಾಗರಾಜ್ ಮಾತನಾಡಿ, ಮೂರು ಬಾರಿ ಈಗಾಗಲೇ ನಾನು 3 ಬಾರಿ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಕಳೆದ ಚುನಾವಣೆಯಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಪರಾಭವ ಹೊಂದಿದ್ದೇನೆ. ಈ ಬಾರಿ ಜೆಡಿಎಸ್ ಹಾಗೂ ಇತರೆ ಪಕ್ಷಗಳ ನೆರವಿನಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಮುಖಂಡರುಗಳಾದ ಕೆ.ರಂಗನಾಥ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಜಯಣ್ಣ, ನೀಲಗಿರಿಯಪ್ಪ, ಶಿವಯೋಗಿ, ಶ್ರೀಶೈಲ ಗೌಡ್ರು, ವೀರಭದ್ರಪ್ಪ,ಶ್ರೀಧರ, ಶಿವಣ್ಣ, ನಾರಾಯಣಪ್ಪ ಗೌಡ್ರು, ರಮೇಶ್ ಕುಮಾರ್, ವಿವೇಕ್, ಯಾರಬ್, ಅಜೇಯ, ರಾಜೇರಾವ್, ಮುಸ್ಟೂರಪ್ಪ, ಸತೀಶ್, ಚಿನ್ಮಯ್, ಕುಮಾರಸ್ವಾಮಿ, ಮಂಜುನಾಥ,ಅಣ್ಣಪ್ಪ, ಪ್ರಕಾಶ್ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು. *ವರದಿ* *ಶೇಕ್ ಅಲ್ತಾಫ್* *ಸ್ಮಾರ್ಟ್ ನ್ಯೂಸ್ ಕನ್ನಡ* *ಹರಿಹರ*

Leave a Reply

Your email address will not be published. Required fields are marked *