ಹರಿಹರ ಶಾಖೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

Spread the love

ಹರಿಹರ ಶಾಖೆಯಲ್ಲಿ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ಜಿಲ್ಲಾ ಕೇಂದ್ರ ಗ್ರಂಥಾಲಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ಶುಕ್ರವಾರ ರಂದು ನವೆಂಬರ್ 14 ರಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿಗಳಾದ ಪಿ. ಆರ್. ತಿಪ್ಪೇಸ್ವಾಮಿ ಅವರು ಜವಹಾರಲಾಲ್ ನೆಹರು ಹಾಗೂ ಗ್ರಂಥಾಲಯದ ಪಿತಾಮಹ ಡಾ. ಎಸ್. ಆರ್. ರಂಗನಾಥ್ ನ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮುಂದುವರಿದು ಮಾತನಾಡಿ ಜವಹಾರಲಾಲ್ ನೆಹರು ಅವರು ಜನ್ಮ ದಿನ ಇದ್ದು ಮಕ್ಕಳು ನೆಹರು ಅವರ ಹೃದಯಕ್ಕೆ ಅತೀ ಸಮೀಪವಿರುವಂತೆ ಪುಸ್ತಕಗಳು ಹಾಗೂ ಗ್ರಂಥಾಲಯಗಳು ಸಹ ಅವರ ಮೆಚ್ಚಿನವಾಗಿದ್ದುದರಿಂದ ನವೆಂಬರ್ 14 ರಿಂದಲೇ ಒಂದು ವಾರ ಪೂರ್ತಿ ರಾಜ್ಯಾದ್ಯಂತ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸುತ್ತೇವೆ. ಆದ್ದರಿಂದ ಇಂದು ಹರಿಹರ ಗ್ರಂಥಾಲಯದಲ್ಲಿ ನೂತನ ಪಠ್ಯ ಪುಸ್ತಕ ಪರಾಮರ್ಶನ ಮತ್ತು ವಿವಿಧ ಸ್ಪರ್ಧಾತ್ಮಕ ಪುಸ್ತಕಗಳ ಪ್ರದರ್ಶನ ಏರ್ಪಡಿಸುವ ಮೂಲಕ ಯುವ ಜನತೆಯನ್ನು ಗ್ರಂಥಾಲಯಗಳಡೆಗೆ ಸೆಳೆಯುವದು ಹಾಗೂ ನಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಸಮಾರೋಪ ಸಮಾರಂಭ ದಲ್ಲಿ ಪ್ರಶಸ್ತಿ, ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಆದ್ದರಿಂದ ಯುವ ಜನತೆ ಹಾಗೂ ಹಿರಿಯರು, ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಬಳಸಿಕೊಳ್ಳಿ ಎಂದು ಹೇಳಿದರು.ಸ್ವಾಗತವನ್ನು ಶಾಖಾ ಗ್ರಂಥಾಲಯದ ಪ್ರಭಾರಧಾರಕರಾದ ರವಿಕುಮಾರ್ ಮಾಡಿದರು. ಎಂ. ಶಿವಾನಂದ, ಸಂಜಯ್, ಕೇಶವ, ರಮೇಶ್ ಬೆಳ್ಳೂಡಿ ಹಾಗೂ ಗ್ರಂಥಾಲಯದ ಓದುಗರು, ಸಾರ್ವಜನಿಕರು, ಸ್ಪರ್ಧಾತ್ಮಕ ಓದುಗರು ಉಪಸ್ಥಿತರಿದ್ದರು. ವರದಿ ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ

Leave a Reply

Your email address will not be published. Required fields are marked *