ದುಃಖಸಾಗರದಲ್ಲಿ ದಕ್ಷಿಣ ಕ್ಷೇತ್ರ: ಡಾ. ಶಾಮನೂರು ಶಿವಶಂಕರಪ್ಪ ಇನ್ನಿಲ್ಲ!ದಾವಣಗೆರೆಯ ಹಿರಿಯ ದಣಿ ಮರೆಯಾದರು: ನಾಯಕನ ಅಗಲಿಕೆಗೆ ಅಯ್ಯುಬ್ ಪೈಲ್ವಾನ್ ಕಣ್ಣೀರ ಪ್ರವಾಹದಾವಣಗೆರೆ:ರಾಜ್ಯ ರಾಜಕಾರಣದ ಮಹಾನ್ ಚೇತನ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರು, ಮತ್ತು ಲಕ್ಷಾಂತರ ಬಡವರಿಗೆ ಆಧಾರಸ್ತಂಭವಾಗಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರು ತಮ್ಮ 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾರ್ಗದರ್ಶಕ, ಹಿರಿಯ ದಣಿಯಂತಿದ್ದ ಅವರ ಅಗಲಿಕೆಯಿಂದಾಗಿ ಕ್ಷೇತ್ರದ ಜನತೆ ತೀವ್ರ ಶೋಕದಲ್ಲಿ ಮುಳುಗಿದ್ದಾರೆ.’ಬಡವರ ಬಂಧು’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನ, ರಾಜ್ಯ ರಾಜಕೀಯಕ್ಕೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ತುಂಬಲಾರದ ಶಾಶ್ವತ ನಷ್ಟ. ಅವರ ಅಪ್ರತಿಮ ಸೇವೆ, ಉದಾರತೆ ಮತ್ತು ಜನಪರ ಕಾಳಜಿ ಸದಾ ಸ್ಮರಣೀಯ.. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯುಬ್ ಪೈಲ್ವಾನ್ ಅಳಲು: “ದಕ್ಷಿಣ ಭಾಗದಲ್ಲಿ ‘ಪೈಲ್ವಾನ್ಗೆ ಕರೆಯಿರಿ’ ಎನ್ನುವವರು ಇನ್ನು ಇಲ್ಲ!”ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನೋವು, ಅವರ ಆಪ್ತ ಕಾರ್ಯಕರ್ತರನ್ನು ತೀವ್ರವಾಗಿ ಘಾಸಿಗೊಳಿಸಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯ್ಯುಬ್ ಪೈಲ್ವಾನ್ ಅವರು, ನೋವನ್ನು ತಡೆದುಕೊಳ್ಳಲಾಗದೆ ಬಹಿರಂಗವಾಗಿಯೇ ಕಣ್ಣೀರಿಟ್ಟ ದೃಶ್ಯ ಎಲ್ಲರ ಹೃದಯವನ್ನು ಕಲಕಿತು.ಅಯ್ಯುಬ್ ಪೈಲ್ವಾನ್ ಅವರ ಹೃದಯವಿದ್ರಾವಕ ಶ್ರದ್ಧಾಂಜಲಿ ಸಂದೇಶ:”ನಾನು ಇಂದು ಕೇವಲ ನಮ್ಮ ರಾಜಕೀಯ ನಾಯಕನನ್ನು ಮಾತ್ರ ಕಳೆದುಕೊಂಡಿಲ್ಲ; ನನ್ನ ವೈಯಕ್ತಿಕ ಜೀವನದ ಹಿರಿಯರನ್ನು, ಕಷ್ಟ ಬಂದಾಗ ನನ್ನ ಕೈ ಹಿಡಿಯುತ್ತಿದ್ದ ನಮ್ಮ ಕುಟುಂಬದ ಆಧಾರ ಸ್ತಂಭವನ್ನು ಕಳೆದುಕೊಂಡಿದ್ದೇನೆ. ಡಾ. ಶಾಮನೂರು ಶಿವಶಂಕರಪ್ಪ ಅವರು ನಮ್ಮೆಲ್ಲರಿಗೂ ಧೈರ್ಯ ಮತ್ತು ಶಕ್ತಿಯ ಮೂಲವಾಗಿದ್ದರು. ದಕ್ಷಿಣ ಭಾಗದಲ್ಲಿ ಯಾವುದೇ ಕೆಲಸವಿದ್ದರೂ, ಸಮಸ್ಯೆಗಳಿದ್ದರೂ, ‘ಅಯ್ಯುಬ್ ಪೈಲ್ವಾನ್ ಕರೆಯಿರಿ’ ಎಂದು ಹೇಳುತ್ತಿದ್ದ ಆ ಧ್ವನಿ ಇನ್ನು ಕೇಳುವುದಿಲ್ಲ ಎಂದು ಅಳುತ್ತಾ ಕಂಬನಿ ಮಿಡಿದರು. ಅವರ ಪ್ರೀತಿ ಮತ್ತು ಶಕ್ತಿ ಎಂದಿಗೂ ಮರೆಯಲಾಗದು. ಅವರ ಅಗಲಿಕೆಯಿಂದಾಗಿ ನಾನು ಮತ್ತು ನಮ್ಮ ಕ್ಷೇತ್ರವು ನಮ್ಮ ಶಕ್ತಿ ಮತ್ತು ಧೈರ್ಯ ಎರಡನ್ನೂ ಕಳೆದುಕೊಂಡಿದ್ದೇವೆ. ಅವರ ಆದರ್ಶಗಳು ನಮ್ಮ ದಾರಿದೀಪವಾಗಿರುತ್ತವೆ. ಆ ಮಹಾನ್ ಚೇತನಕ್ಕೆ ಶಾಂತಿ ಸಿಗಲಿ.”ಬ್ಲಾಕ್ ಅಧ್ಯಕ್ಷರಾದ ಅಯ್ಯುಬ್ ಪೈಲ್ವಾನ್ ಅವರ ನೇತೃತ್ವದಲ್ಲಿ, ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ಗೌರವ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ