ಜಯ ಕರ್ನಾಟಕ ಸಂಘ ವತಿಯಿಂದ AEE. ಹಾಗೂ ಪೊಲೀಸ್ ಅಧ್ಯಕ್ಷರು ಹರಿಹರ ಅವರಿಗೆ ಮನವಿ ನೀಡವಾಯಿತು

Spread the love

ಜಯ ಕರ್ನಾಟಕ ಸಂಘ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಘಟಕದ ವತಿಯಿಂದ ದಿನಾಂಕ 16.12.2025 ರಂದು ನಗರ ಸಭೆ ಅಧಿಕಾರಿಗಳಾದ AEE ವಿನಯ್ ರವರಿಗೆ ಮತ್ತು ಮಾನ್ಯ ಪೊಲೀಸ್ ಅಧಿಕ್ಷಕರು ಹರಿಹರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀಪತಿ ಗಿನ್ನಿರವರಿಗೂ ಮನವಿ ಕೊಡಲಾಯಿತು ವಿಷಯ:- ಹರಿಹರ ನಗರದ ಪ್ರಮುಖ ರಸ್ತೆಗಳಾದ ಹರಿಹರ ದಿಂದ ದಾವಣಗೆರೆಗೆ ಹೋಗುವ ಮೇಲು ಸೇತುವೆ ಕೆಳಭಾಗದ ರಸ್ತೆ ಹಾಗೂ ತುಂಗಭದ್ರಾ ಸೇತುವೆಯ ಮೇಲೆ ಮತ್ತು ಇಂಡಸ್ಟ್ರಿಯಲ್ ಏರಿಯಾದಿಂದ ಸೆಂಟ್ ಮೇರಿಸ್ ಶಾಲೆಯವರೆಗೆ ಹಾಗೂ ಎಪಿಎಂಸಿಯಿಂದ ಬೈಪಾಸ್ ಗೆ ಹೋಗುವ ರಸ್ತೆ ಹಾಗೂ ಹರಪನಹಳ್ಳಿ ಸರ್ಕಲ್ ನಿಂದ 4 ದಿಕ್ಕುಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಬೀದಿ ದೀಪಗಳು ಹಾಗೂ ಸಿಸಿ ಕ್ಯಾಮೆರಾ ಅಳವಡಿಸಿ ಕೊಡಬೇಕು ಹಾಗೂ ಬೀದಿ ದೀಪಗಳು ಸಿಸಿ ಕ್ಯಾಮೆರಾ ಇಲ್ಲದ ಕಾರಣ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟು ಆಗುತ್ತಿದೆ ಮತ್ತು ತುಂಗಭದ್ರಾ ಸೇತುವೆಯ ಮೇಲೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬೀದಿ ದೀಪದ ವ್ಯವಸ್ಥೆ ಮಾಡಿದ್ದರು ಸಹ ಆ ಬೀದಿ ದೀಪಗಳು ನಮ್ಮ ಹರಿಹರ ನಗರಕ್ಕೆ ಮುಖ್ಯಮಂತ್ರಿಗಳು ಮಿನಿಸ್ಟರ್ ಗಳು ಆಗಮಿಸುತ್ತಿರುವ ಸಮಯದಲ್ಲಿ ಅಷ್ಟೇ ಬೆಳಕು ನೀಡುತ್ತವೆ ಮುಖ್ಯಮಂತ್ರಿಗಳು ಬಂದು ಹೋದ ನಂತರ ಮತ್ತು ಯಥಾ ಪ್ರಕಾರ ಬೀದಿ ದೀಪಗಳು ಬಂದ್ ಆಗಿ ಹೋಗುತ್ತವೆ ಅದೇ ರೀತಿ ಹರಿಹರ ನಗರದಲ್ಲಿ ಬೈಕ್ ಗಳು ತುಂಬಾ ಕಳ್ಳತನ ಆಗುತ್ತಿವೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬೇಗ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಸಿಸಿ ಕ್ಯಾಮರಾ ಇಲ್ಲದೆ ಇರುವ ಕಾರಣ ಈ ರೀತಿ ವ್ಯವಸ್ಥೆಯ ಆಗುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೂ ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿರುತ್ತಾರೆ ತುಂಗಭದ್ರೆ ಸೇತುವೆ ಮೇಲೆ ರಾತ್ರಿ ಎಂಟು(8: ಗಂಟೆ ಆದರೆ ಸಾಕು ಕತ್ತಲು ತುಂಬಿ ಭಯದ ವಾತಾವರಣ ಇರುತ್ತದೆ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ಮತ್ತು ನಡೆದಾಡಿಕೊಂಡು ಹೋಗುವ ಮಹಿಳೆಯರಿಗೆ ತುಂಬಾ ಭಯವಾಗುತ್ತೆ ರಾತ್ರಿ ಹೊತ್ತಿನಲ್ಲಿ ಒಡೆದು ನದಿಯಲ್ಲಿ ಎಸೆದರು ಕೂಡ ಯಾರಿಗೂ ಗೊತ್ತಾಗುವುದಿಲ್ಲ ಅದೇ ರೀತಿ ಹರಿಹರದ 4 ದಿಕ್ಕಿನಲ್ಲಿಯೂ ಸಹ ಈ ರೀತಿ ಸಮಸ್ಯೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿಕೊಂಡು ಆದಷ್ಟು ಬೇಗ ಸಿಸಿ ಕ್ಯಾಮೆರಾದ ವ್ಯವಸ್ಥೆ ಹಾಗೂ ಬೀದಿ ದೀಪಗಳ ವ್ಯವಸ್ಥೆ ಮಾಡಿಕೊಡಬೇಕು ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಯ ಮುಂಭಾಗ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಕೊಡಲಾಯಿತು ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರು ಎಸ್ ಗೋವಿಂದ ಅಧ್ಯಕ್ಷರಾದ ಆನಂದ್ ಎಂ ಆರ್ ಪ್ರದನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿಎಚ್ ವಿಜಯ್ ಅರುಣ್ ಜೀವನ್ ಸುನಿಲ್ ಬಿಲ್ಲ ಅನಿಲ್ ದುರ್ಗಪ್ಪ ಶಮಿವುಲ್ಲಾ ಕರಿ ಬಸ್ಯಾ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತಿಯಲ್ಲಿದ್ದರು

Leave a Reply

Your email address will not be published. Required fields are marked *