ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನೂತನ ತಾಲ್ಲೂಕು ಆಡಳಿತಾಧಿಕಾರಿಗಳಿಗೆ ಸ್ವಾಗತ–ಸನ್ಮಾನಸುದ್ದಿವಿವರ:ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ್ರ ನೇತೃತ್ವಹರಿಹರ ತಾಲ್ಲೂಕು ಘಟಕದ ವತಿಯಿಂದ ನೂತನವಾಗಿ ಹರಿಹರ ತಾಲ್ಲೂಕಿಗೆ ಆಗಮಿಸಿರುವ ತಾಲೂಕ್ ದಂಡಾಧಿಕಾರಿಯಾಗಿ ಶ್ರೀ ಜಿ. ಸಂತೋಷ್ ಕುಮಾರ್ ಅವರಿಗೆ ಆತ್ಮೀಯ ಸ್ವಾಗತ ನೀಡಿ ಗೌರವ ಸನ್ಮಾನ ., ತಾಲ್ಲೂಕಿನ ಆಡಳಿತ ಇನ್ನಷ್ಟು ಜನಪರವಾಗಿರಲಿ, ಕನ್ನಡ ಭಾಷೆ–ನೆಲ–ಜಲ–ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಆಶಿಸಿದರು. ತಾಲ್ಲೂಕಿನ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಯ ಸಂಪೂರ್ಣ ಸಹಕಾರ ಇರಲಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಹಾಗೂ ಸರ್ಕಾರ ಕಚೇರಿಗಳಲ್ಲಿ ಕನ್ನಡಾಂಬೆಯ ಭಾವಚಿತ್ರವನ್ನು ಕಡ್ಡಾಯಗೊಳಿಸಬೇಕೆಂದು ಕೋರಲಾಯಿತು ಸಂಘಟನೆಯ ತಾಲೂಕ ಗೌರವ ಅಧ್ಯಕ್ಷರಾದ ಅಮಾನುಲ್ಲ .ಕೆ ತಾಲೂಕ್ ಅಧ್ಯಕ್ಷರಾದ ರಾಜೇಶ್ ಹೆಚ್ ಕಾರ್ಯದರ್ಶಿಗಳಾದ ಮುರಳಿ ಉಪಾಧ್ಯಕ್ಷರಾದ ರವಿ ಬಳ್ಳಾರಿ ನಗರ ಘಟಕದ ಅಧ್ಯಕ್ಷರಾದ ಶಕೀಲ್ ಅಹ್ಮದ್ ಫುಟ್ಬಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮನ್ಸೂರ್ ಅಲಿ ಲಾರಿ ಚಾಲಕರ ಸಂಘದ ಅಧ್ಯಕ್ಷರಾದ ಸಯ್ಯದ್ ಯೂಸುಫ್ ಮತ್ತು ಸಮೀವುಲ್ಲಾ ಮತ್ತು ಮಹಿಳಾ ಪದಾಧಿಕಾರಿಗಳಾದ ಶಾಮಲಾದೇವಿ ಕೋಟೆ ಉಪಸ್ಥಿದ್ದರು