ಮಾಧ್ಯಮ ಮಿತ್ರರಿಗೆ ವಿಷಯ: ಸುಮಾರು ವರ್ಷಗಳಿಂದಲೂ ಸುಮಾರು ಅನೇಕ ಕಾಲಗಳಿಂದಲೂ ಭಾಷಾ ನಗರ 12ನೇ ಕ್ರಾಸ್ನ ಪ್ರಥಮ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಖಾಲಿ ಉಳಿದಿರುವ ನಿವೇಶನವನ್ನು ಬಡ ರೋಗಿಗಳ ಬಡಜನರ ಅನುಕೂಲಕ್ಕೆ ನಿರ್ಮಿಸಿ ಕೊಡುವಂತೆ ಬಂಧುಗಳೇ ಸುಮಾರು ಕಾಲಗಳಿಂದಲೂ ಭಾಷಾ ನಗರ 12ನೇ ಕ್ರಾಸ್ ನಲ್ಲಿ ಸಮೀಪಿಸುವಂತಹ ಖಾಲಿ ನಿವೇಶನ ಒಂದನ್ನು ಆರ್ಥಿಕವಾಗಿ ಯಾವುದೇ ಪರಿಹಾರ ರೂಪಕ್ಕೆ ಬಳಸದೆ ಒಂದು ಆಡಂಬರ ರೂಪದಲ್ಲಿ ಆಚರಣೆಗೆ ನೀಡುವುದಾಗಿ ಒತ್ತಾಯಿಸುತ್ತಿದ್ದಾರೆ ಹಾಗಾಗಿ ಇದನ್ನು ಪರಿಗಣಿಸದೆ ಇಲ್ಲಿನ ಬಡವ ಜನರ ಹಿತ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಈಗಾಗಲೇ ನಿರ್ಮಿತವಾಗಿರುವಂತಹ ಪ್ರಥಮ ಆರೋಗ್ಯ ಕೇಂದ್ರದಲ್ಲಿ ಬೇಕಾಗಿರುವಂತಹ ಪ್ರಮುಖ ಪ್ರಯೋಗಾಲಗಳಿಗೆ ಸಂಬಂಧಪಟ್ಟ ಯಂತ್ರಗಳನ್ನು ಮತ್ತು ಕಟ್ಟಡಗಳನ್ನು ನಿರ್ಮಿಸಿ ಕೊಡುವುದರಿಂದ ಇಲ್ಲಿನ ಭಾಗದ ಜನರಿಗೆ ಅನುಕೂಲವಾದ ರೀತಿಯಲ್ಲಿ ತಂದು ಕೊಟ್ಟಂತಾಗುತ್ತದೆ (ಭಾಷಾ ನಗರ 12ನೇ ಕ್ರಾಸಿನ ಖಾಲಿ ನಿವೇಶನವನ್ನು ನಿರ್ಮಿಸಿ ಕೊಡುವುದರ ಮುಖ್ಯ ಉದ್ದೇಶ.) ಈ ಭಾಗದ ಜನರಿಗೆ ಅನೇಕ ಕಾಲದಿಂದಾಗಲಿ ಸುಮಾರು ವರ್ಷಗಳ ಹಿಂದೆಾಗಲಿ ಇಲ್ಲಿಯ ಸುಮಾರು ಎಂಟು ಹತ್ತು ಕಿಲೋಮೀಟರ್ ವಿಸ್ತಾರ ರೂಪದಲ್ಲಿ ಯಾವುದೇ ಒಂದು ಸರ್ಕಾರಿ ಆಸ್ಪತ್ರೆಗೆ ಸಂಬಂಧಪಟ್ಟಂತಹ ಪ್ರಯೋಗ ಪ್ರಯೋಗಾಲಯಗಳಾಗಲಿ ಮತ್ತು ಸ್ಕ್ಯಾನಿಂಗ್ ಸೆಂಟರ್ ಗಳಾಗಲಿ ಇರುವುದಿಲ್ಲ ಹಾಗಾಗಿ ಇಲ್ಲಿಯ ಜನರು ಸರ್ಕಾರಿ ಸೌಲತ್ತುಗಳಿಗಾಗಿ ಮತ್ತು ತುರ್ತು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ತಪಾಸಣೆಗಾಗಿ ಸುಮಾರು ಐದಾರು ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ ಇಲ್ಲವಾದಲ್ಲಿ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾಗಿ ಹೋಗಬೇಕಾದ ಪರಿಸ್ಥಿತಿ ಇರುತ್ತದೆ ಮತ್ತು ತುಂಬಾ ತುರ್ತು ಸಂದರ್ಭದಲ್ಲಿ ಗರ್ಭಣಿಯ ಸ್ತ್ರೀಯರಿಗೆ ಬೇರೊಂದು ಜಾಗದಲ್ಲಿ ಯಾವುದೋ ಸರ್ಕಾರಿ ಸವಲತ್ತುಗಳು ಸಿಗದೇ ಇರುವ ಕಾರಣದಿಂದಾಗಿ ಎಷ್ಟು ಜನ ಗರ್ಭಣಿ ಸ್ತ್ರೀಯರು ಮೃತಪಟ್ಟಿರುತ್ತಾರೆ ಬೇರೆ ಯಾವುದನ್ನು ಗಮನದಲ್ಲಿಟ್ಟು ಕೊಳ್ಳದೆ ಗರ್ಭಿಣಿ ಸ್ತ್ರೀಯರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಸರ್ವಸಮಾನವಾಗಿ ಸಂಬಂಧಪಟ್ಟಂತಹ ಯಂತ್ರಗಳನ್ನು ಮತ್ತು ಪ್ರಯೋಗಾಲಯಗಳನ್ನು ನಿರ್ಮಿಸಿ ಕೊಡುವುದರಿಂದ ಎಷ್ಟೋ ಹೆಣ್ಣುಮಕ್ಕಳಿಗೆ ಗರ್ಭವತಿ ಸಂದರ್ಭದಲ್ಲಿ ಯಂತ್ರಗಳನ್ನು ಮತ್ತು ಪ್ರಯೋಗಾಲಯ ನಿರ್ಮಿಸುವುದರಿಂದ ಪುನರ್ಜೀವನ ನೀಡಿದಂತಾಗುತ್ತದೆ ಹಾಗಾಗಿ ಈ ಭಾಗದ ಜನರಿಗೆ ಇದು ತುಂಬಾ ತೀವ್ರವಾದ ಪರಿಸ್ಥಿತಿ ಇರುವುದರಿಂದ ಇಲ್ಲಿನ ಜನರನ್ನು ಇಲ್ಲಿನ ನಾಯಕರು ಮತ್ತು ರಾಜಕೀಯ ಪ್ರಮುಖ ನಾಯಕರು ತಮ್ಮ ಅನುಕೂಲಕ್ಕಾಗಿ ಅನುಕೂಲಕರವಾದ ರೀತಿಯಲ್ಲಿ ಪರಿಗಣಿಸದೆ ಇರುವುದರಿಂದ ತುಂಬಾ ಮನನೊಂದು ನಿಮ್ಮೊಂದಿಗೆ ಇದನ್ನು ಪ್ರಸ್ತಾಪ ಮಾಡಲು ಇಚ್ಚಿಸಿದ್ದೇವೆ ಹಾಗಾಗಿ ಇದನ್ನು ತುಂಬಾ ಸಾಧಾರಣ ವಿಷಯವಾಗಿ ತೆಗೆದುಕೊಳ್ಳದೆ ಸುಮಾರು ಎರಡರಿಂದ ಮೂರು ಲಕ್ಷದ ಜನರಿಗೆ ಪ್ರತ್ಯೇಕವಾಗಿ ಭಾಷಾ ನಗರ 12ನೇ ಕ್ರಾಸ್ನ ಸಂಬಂಧ ಪಟ್ಟಂತಹ ಸುತ್ತಮುತ್ತಲಿನ ಭಾಗದ ಜನರಿಗೆ ತುಂಬಾ ದೊಡ್ಡ ರೀತಿಯಲ್ಲಿ ಉಪಕಾರ ಮತ್ತು ತುಂಬ ದೊಡ್ಡದಾದ ಮಟ್ಟಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಹಾಗಾಗಿ ಇಲ್ಲಿಯ ಜನರನ್ನು ಕೂಡ ಮನುಷ್ಯರ ರೀತಿಯಲ್ಲಿ ನೋಡುವುದು ಮತ್ತು ಕಾಣುವುದು ಈಗಿನ ರಾಜಕೀಯ ವ್ಯಕ್ತಿಗಳ ಕರ್ತವ್ಯವಾಗಿರುತ್ತದೆ ಹಾಗಾಗಿ ಮಾಧ್ಯಮ ಮಿತ್ರರು ಇಂತಹ ಬೃಹತ್ ವಿಷಯವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಈ ಭಾಗದ ಜನರುಗಳಿಗೆ ನೇರವಾಗಿ ತಲುಪಿಸುವಂತೆ ಈ ಮುಖ್ಯನಾ ತಮ್ಮಲ್ಲಿ ಸಮಾಜಮುಖಿಯಾಗಿ ವಿನಂತಿಸಿಕೊಳ್ಳುತ್ತಿದ್ದೇವೆ