ತೀರ್ಪನ್ನು ಪುನರ್ ಪರಿಶೀಲಿಸಲು ಮೇಲ್ಮನವಿ ಸಲ್ಲಿಸುವುದು ಅತ್ಯವಶ್ಯಕವಾಗಿರುತ್ತದೆ.
ಒಂದುವೇಳೆ ಈ ತೀರ್ಪನ್ನು ಪುನರ್ ಪರಿಶೀಲಿಸದೆ ಸ್ಪಷ್ಟ ಹಾಗೂ ವಿವರವಾದ ತೀರ್ಪು ಬರದೆ ಇದ್ದರೆ ಮುಂದಿನ ದಿನಗಳಲ್ಲಿ ಇದೇ ತೀರ್ಪನ್ನು ನೆಪವಾಗಿಟ್ಟುಕೊಂಡು ಧಾರ್ಮಿಕ ಸ್ಥಳಗಳಲ್ಲಿ ಗೊಂದಲ/ಗಲಾಟೆಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಅಲ್ಲದೆ ಕೋಮು ಮನಸ್ಥಿತಿ ವುಳ್ಳವರಿಗೆ ವೇದಿಕೆಯನ್ನು ಸೃಷ್ಟಿಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಈ ತೀರ್ಪನ್ನು ತೀವ್ರವಾಗಿ ಪರಿಗಣಿಸಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಪುನರ್ ಪರಿಶೀಲಿಸಲು ಮೇಲ್ಮನವಿಯನ್ನು ಸಲ್ಲಿಸಬೇಕೆಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಸರ್ಕಾರಕ್ಕೆ ಒತ್ತಾಯಿಸಿ ಕಾನೂನು ಮಂತ್ರಿಗಳಿಗೆ ಅರ್ಜಿಯನ್ನು ಇಮೇಲ್ ಮುಖಾಂತರ ಕಳುಹಿಸಿಕೊಟ್ಟಿರುತ್ತಾರೆ.