ಹರಿಹರ: ಗುತ್ತೂರು ಗ್ರಾಮದ ದಲಿತರಿಗೆ ಸ್ಮಶಾನಭೂಮಿ ನೀಡಲು ಮನವಿ

Spread the love

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹರಿಹರ ನಗರದ ನಗರಸಭೆಯ ವ್ಯಾಪ್ತಿಯಲ್ಲಿನ ಗುತ್ತೂರು ಗ್ರಾಮದ ದಲಿತರಿಗೆ ಸ್ಮಶಾನ ರುದ್ರ ಭೂಮಿ ಇಲ್ಲದ ಕಾರಣ, ಮೃತಪಟ್ಟವರ ಶವ ಸಂಸ್ಕಾರ ಅಂತ್ಯಕ್ರಿಯೆ ಮಾಡಲು ಗ್ರಾಮದ ದಲಿತರು ಹಲವಾರು ತೊಂದರೆ ಅನುಭವಿಸುತ್ತಿದ್ದು,
ಸ್ಮಶಾನಕ್ಕಾಗಿ ಭೂಮಿ ನೀಡಬೇಕೆಂದು ಒತ್ತಾಯಿಸಿ ಗ್ರಾಮದ ದಲಿತರು ಬುಧವಾರ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಜ್ಜಪ್ಪ ದೊಡ್ಮನಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರುದ್ರ ಭೂಮಿಗಾಗಿ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದು,
ಇಲ್ಲಿಯವರೆಗೂ ನಮಗೆ ರುದ್ರ ಭೂಮಿಯನ್ನು ನೀಡಿರುವುದಿಲ್ಲ.
ಗುತ್ತೂರು ಗ್ರಾಮದಲ್ಲಿರುವ ದಲಿತರಾದ ನಮಗೆ ಸ್ಮಶಾನಕ್ಕಾ ಸರ್ಕಾರ ಭೂಮಿಯನ್ನು ನೀಡದಿರುವ ಕಾರಣ, ಊರ ಹತ್ತಿರದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿಯೇ ಶವ ಸಂಸ್ಕಾರವನ್ನು ಮಾಡುತ್ತಾ ಬಂದಿರುತ್ತೆವೆ.
ಮಳೆಗಾಲ ಬಂದರೆ ಸಾಕು,
ಆ ಸಮಯದಲ್ಲಿ ಸತ್ತವರ ಶವವನ್ನು ಹೆಗಲ ಮೇಲೆ ಹೊತ್ತು ಹರಿಯುವ ನದಿಯ ನೀರಿನಲ್ಲಿಯೇ, ರೈತರ ಗದ್ದೆಗಳ ಬದುವಿನಲ್ಲಿ ಏಳುತ್ತಾ-ಬೀಳುತ್ತಾ ಸಾಗಿ ನದಿಯ ದಡದಲ್ಲಿಯೇ ಶವ ಸಂಸ್ಕಾರ ಮಾಡುವ ದೃಷ್ಯ ನೋಡಿದರೆ ಎಂಥವರಿಗಾದರೂ ನೋವೆನ್ನಿಸದಿರಲಾರದು.
ಆದ ಕಾರಣ ಸರ್ಕಾರದಿಂದ ಗುತ್ತೂರು ಗ್ರಾಮದ ದಲಿತರಿಗೆ ರುದ್ರ ಭೂಮಿ ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ಹೆಚ್ ಬಿ ಸಿ ನಾಗರಾಜ ಮಾತನಾಡಿ, ಸಂವಿದಾನ ದೇಶದ ದಲಿತರಿಗೆ ಎಲ್ಲಾ ಸೌಲಭ್ಯವನ್ನು ನೀಡಿದೆ. ಆದರೆ, ಗುತ್ತೂರು ಗ್ರಾಮದಲ್ಲಿ ದಲಿತರಿಗೆ ಸ್ಮಶಾನವನ್ನು ನೀಡದಿರುವುದು ನೋವಿನ ಸಂಗತಿಯಾಗಿದೆ. ಗ್ರಾಮದ ಸರ್ವೆ ನಂಬರ್ 89/1 ರಲ್ಲಿ ಬರುವ 2 ಎಕರೆ ಜಮೀನನ್ನು ದಲಿತ ರುದ್ರ ಭೂಮಿಗಾಗಿ ನೀಡಬೇಕೆಂದು ಸರ್ಕಾರಕ್ಕೆ ಹಲವಾರು ಭಾರಿ ಮನವಿ ಸಲ್ಲಿಸಿದ್ದೆವೆ.
ಸರ್ಕಾರ ಇಲ್ಲಿಯವರೆಗೂ ನಮ್ಮ ಮನವಿಗೆ ಸ್ಪಂಧಿಸಿಲ್ಲ ಆದ ಕಾರಣ ತಕ್ಷಣವೆ ನಮ್ಮೂರಿನ ದಲಿತರಿಗೆ ರುದ್ರ ಭೂಮಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಮಾತನಾಡಿ, ಸಂವಿದಾನ ಬದ್ದವಾಗಿ ದಲಿತರಿಗೆ ಸ್ಮಶಾನ ಭೂಮಿಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದು, ಭೂಮಿ ನೀಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತುರು ಗ್ರಾಮದ
ಮುಖಂಡರಾದ ಮರಿಯಪ್ಪ, ಹನುಮಂತಪ್ಪ, ನಿಂಗಪ್ಪ, ರಾಜಶೇಖರ, ಬಸವರಾಜಪ್ಪ, ಎಲ್ ಬಿ ಚೌಡಪ್ಪ,
ಬಿ ಬಸವರಾಜಪ್ಪ, ಹಾಲಪ್ಪ, ಪ್ರಕಾಶ, ಪರಶುರಾಮ್, ಹೊನ್ನಪ್ಪ, ಕೆಂಚಪ್ಪ, ಅಚಿಜನೇಪ್ಪ, ಮಾರ್ತಾಂಡಪ್ಪ, ನಾಗಪ್ಪ, ರಾಮಪ್ಪ, ರಘು, ಮೈಲಪ್ಪ ಸೇರಿದಂತೆ ಅನೇಕರು ಇದ್ದರುದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹರಿಹರ ನಗರದ ನಗರಸಭೆಯ ವ್ಯಾಪ್ತಿಯಲ್ಲಿನ ಗುತ್ತೂರು ಗ್ರಾಮದ ದಲಿತರಿಗೆ ಸ್ಮಶಾನ ರುದ್ರ ಭೂಮಿ ಇಲ್ಲದ ಕಾರಣ, ಮೃತಪಟ್ಟವರ ಶವ ಸಂಸ್ಕಾರ ಅಂತ್ಯಕ್ರಿಯೆ ಮಾಡಲು ಗ್ರಾಮದ ದಲಿತರು ಹಲವಾರು ತೊಂದರೆ ಅನುಭವಿಸುತ್ತಿದ್ದು,
ಸ್ಮಶಾನಕ್ಕಾಗಿ ಭೂಮಿ ನೀಡಬೇಕೆಂದು ಒತ್ತಾಯಿಸಿ ಗ್ರಾಮದ ದಲಿತರು ಬುಧವಾರ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಜ್ಜಪ್ಪ ದೊಡ್ಮನಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರುದ್ರ ಭೂಮಿಗಾಗಿ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದು,
ಇಲ್ಲಿಯವರೆಗೂ ನಮಗೆ ರುದ್ರ ಭೂಮಿಯನ್ನು ನೀಡಿರುವುದಿಲ್ಲ.
ಗುತ್ತೂರು ಗ್ರಾಮದಲ್ಲಿರುವ ದಲಿತರಾದ ನಮಗೆ ಸ್ಮಶಾನಕ್ಕಾ ಸರ್ಕಾರ ಭೂಮಿಯನ್ನು ನೀಡದಿರುವ ಕಾರಣ, ಊರ ಹತ್ತಿರದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿಯೇ ಶವ ಸಂಸ್ಕಾರವನ್ನು ಮಾಡುತ್ತಾ ಬಂದಿರುತ್ತೆವೆ.
ಮಳೆಗಾಲ ಬಂದರೆ ಸಾಕು,
ಆ ಸಮಯದಲ್ಲಿ ಸತ್ತವರ ಶವವನ್ನು ಹೆಗಲ ಮೇಲೆ ಹೊತ್ತು ಹರಿಯುವ ನದಿಯ ನೀರಿನಲ್ಲಿಯೇ, ರೈತರ ಗದ್ದೆಗಳ ಬದುವಿನಲ್ಲಿ ಏಳುತ್ತಾ-ಬೀಳುತ್ತಾ ಸಾಗಿ ನದಿಯ ದಡದಲ್ಲಿಯೇ ಶವ ಸಂಸ್ಕಾರ ಮಾಡುವ ದೃಷ್ಯ ನೋಡಿದರೆ ಎಂಥವರಿಗಾದರೂ ನೋವೆನ್ನಿಸದಿರಲಾರದು.
ಆದ ಕಾರಣ ಸರ್ಕಾರದಿಂದ ಗುತ್ತೂರು ಗ್ರಾಮದ ದಲಿತರಿಗೆ ರುದ್ರ ಭೂಮಿ ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ಹೆಚ್ ಬಿ ಸಿ ನಾಗರಾಜ ಮಾತನಾಡಿ, ಸಂವಿದಾನ ದೇಶದ ದಲಿತರಿಗೆ ಎಲ್ಲಾ ಸೌಲಭ್ಯವನ್ನು ನೀಡಿದೆ. ಆದರೆ, ಗುತ್ತೂರು ಗ್ರಾಮದಲ್ಲಿ ದಲಿತರಿಗೆ ಸ್ಮಶಾನವನ್ನು ನೀಡದಿರುವುದು ನೋವಿನ ಸಂಗತಿಯಾಗಿದೆ. ಗ್ರಾಮದ ಸರ್ವೆ ನಂಬರ್ 89/1 ರಲ್ಲಿ ಬರುವ 2 ಎಕರೆ ಜಮೀನನ್ನು ದಲಿತ ರುದ್ರ ಭೂಮಿಗಾಗಿ ನೀಡಬೇಕೆಂದು ಸರ್ಕಾರಕ್ಕೆ ಹಲವಾರು ಭಾರಿ ಮನವಿ ಸಲ್ಲಿಸಿದ್ದೆವೆ.
ಸರ್ಕಾರ ಇಲ್ಲಿಯವರೆಗೂ ನಮ್ಮ ಮನವಿಗೆ ಸ್ಪಂಧಿಸಿಲ್ಲ ಆದ ಕಾರಣ ತಕ್ಷಣವೆ ನಮ್ಮೂರಿನ ದಲಿತರಿಗೆ ರುದ್ರ ಭೂಮಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಮಾತನಾಡಿ, ಸಂವಿದಾನ ಬದ್ದವಾಗಿ ದಲಿತರಿಗೆ ಸ್ಮಶಾನ ಭೂಮಿಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದು, ಭೂಮಿ ನೀಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತುರು ಗ್ರಾಮದ
ಮುಖಂಡರಾದ ಮರಿಯಪ್ಪ, ಹನುಮಂತಪ್ಪ, ನಿಂಗಪ್ಪ, ರಾಜಶೇಖರ, ಬಸವರಾಜಪ್ಪ, ಎಲ್ ಬಿ ಚೌಡಪ್ಪ,
ಬಿ ಬಸವರಾಜಪ್ಪ, ಹಾಲಪ್ಪ, ಪ್ರಕಾಶ, ಪರಶುರಾಮ್, ಹೊನ್ನಪ್ಪ, ಕೆಂಚಪ್ಪ, ಅಚಿಜನೇಪ್ಪ, ಮಾರ್ತಾಂಡಪ್ಪ, ನಾಗಪ್ಪ, ರಾಮಪ್ಪ, ರಘು, ಮೈಲಪ್ಪ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *