ಹರಿಹರ:537 ಕನಕದಾಸ ಜಯಂತಿ ಆಚರಣೆಯನ್ನು ತಾಲೂಕ್ ಆಡಳಿತ ಆಯೋಜನೆ

Spread the love

537 ನೇ ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆಯನ್ನು ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿಪಿ ಹರೀಶ್ ವಹಿಸಿ ಮಾತನಾಡಿ ದಾಸ ಶ್ರೇಷ್ಠ ದಾಸ ಕನಕದಾಸರು ಒಂದೇ ಜಾತಿಗೆ ಸೀಮಿತಗೊಳಿಸದೆ ಸರ್ವ ಮನುಕುಲಕ್ಕೆ ಒಳಿತನ್ನು ಬಯಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ.ಇವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಜಯಂತಿಗೆ ಅರ್ಥ ಬರುತ್ತದೆ ಸರ್ಕಾರ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುವುದಕ್ಕೆ ಜಾರಿಗೆ ತಂದಿರುವುದು ಮುಂದಿನ ಯುವ ಪೀಳಿಗೆ ಇತಿಹಾಸವನ್ನು ತಿಳಿದುಕೊಂಡು ಅವರಂತೆ ಬದುಕಿನ ಸಾರ್ಥಕತೆ ನಡೆಸಿದರೆ ಅವರ ಜೀವನ ಉತ್ತಮವಾಗಿರುತ್ತದೆ ಎಂದು ಹೇಳಿದರು.ತಹಶೀಲ್ದಾರ್ ಕೆ ಎಂ ಗುರು ಬಸವರಾಜ್ ಮಾತನಾಡಿ ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು.ಹರಿಭಕ್ತರಾದ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು. ದೇವರ ಲೀಲೆಯಿಂದ ಬದುಕುಳಿದ ನಂತರ ಅವರು ಯೋಧನಾಗಿದ್ದ ಕೆಲಸವನ್ನು ತ್ಯಜಿಸಿ ಹರಿದಾಸರಾದರು ಮತ್ತು ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು.ಕನಕದಾಸರು ನಡೆದ ಭಕ್ತಿ ಆಂದೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಯಾಕೆಂದರೆ ಅವರಿಗೆ ದೇವರ ಪೂಜೆಯಲ್ಲಿ, ದೇವಸ್ಥಾನಗಳ ನಿಯಮಗಳಲ್ಲಿ ಜಾತಿಗಳನ್ನು ತರುವುದು ಇಷ್ಟವಿರಲಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು.ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾದ್ದರಿಂದ ಅವರಿಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರು. ಅಂದಿನ ಸಮಾಜ ಜಾತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರಿಂದ ಅವರನ್ನು ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಕನಕದಾಸರು ಶ್ರೀಕೃಷ್ಣನನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಶ್ರೀಕೃಷ್ಣನು ಅವರನ್ನು ಪ್ರೀತಿಸುತ್ತಿದ್ದ ಕಾರಣ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರಡುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನು ತಿರುಗಿ ಗೋಡೆಯ ಒಂದು ಕಿಂಡಿಯ ಮೂಲಕ ತನ್ನ ದರ್ಶನವನ್ನು ಕರುಣಿಸುತ್ತಾನೆ. ಇಂದಿಗೂ ಕೃಷ್ಣನ ದೇವಸ್ಥಾನದ ಮುಖ್ಯ ಬಾಗಿಲು ಶಾಶ್ವತವಾಗಿ ಮುಚ್ಚಿದ್ದು, ಶ್ರೀಕೃಷ್ಣನ ವಿಗ್ರಹವು ದೇವಸ್ಥಾನದ ಹಿಂಭಾಗಕ್ಕೆ ಮುಖ ಮಾಡಿದೆ ಎಂದು ಹೇಳಲಾಗುತ್ತದೆ. ಮೇಲಾಗಿ, ಗೋಡೆಯಲ್ಲಿನ ಬಿರುಕು ಅಂದಿನಿಂದ ಕನಕನ ಕಿಟಕಿ ಎಂಬರ್ಥದ ‘ಕನಕನ ಕಿಂಡಿ’ ಎಂದು ಹೆಸರನ್ನು ಪಡೆದುಕೊಂಡಿತು. ಇಂದಿಗೂ ಭಕ್ತರು ಈ ಕಿಟಕಿಯ ಮೂಲಕ ಶ್ರೀಕೃಷ್ಣನನ್ನು ಭೇಟಿಯಾಗಿ ದರ್ಶನವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ಪೌರಾಯುಕ್ತ ಸುಬ್ರಹ್ಮಣ್ಯ ಪಿ, ತಾ.ಪಂ ಕಾರ್ಯನಿರ್ವಣಾಧಿಕಾರಿ ಸುಮಲತಾ, ವೃತ್ತ ನಿರೀಕ್ಷಕ ಸುರೇಶ್ ಸಗರಿ, ಪಿಎಸ್ಐ ಶ್ರೀಪತಿ ಗಿನ್ನಿ, ಹಾಲುಮತ ಸಮಾಜದ ಅಧ್ಯಕ್ಷ ಹಾಲಪ್ಪ , ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮಾಜದ ಬಂಧುಗಳು ಜಯಂತಿಯ ಕಾರ್ಯಕ್ರಮದಲ್ಲಿ ಇದ್ದರು.5

Leave a Reply

Your email address will not be published. Required fields are marked *