ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಗುರುಕುಲ ರತ್ನ ಪ್ರಶಸ್ತಿ. ಗುರುಕುಲ ಶಾಲೆಯ ಕಾರ್ಯದರ್ಶಿ ಅಬ್ದುಲ್ .ಆರ್ ಅವರಿಗೆ ನೀಡಲಾಯಿತು *ಈ ಪ್ರಶಸ್ತಿಯನ್ನು ಪರಮ ಪೂಜ್ಯ ಅನಂತ ಶ್ರೀ ವಿಭೂಷಿತ* *ಶಿವಜ್ಞಾನ ತೀರ್ಥ ಸ್ವಾಮಿಗಳು,**ಶಂಕರ ಆತ್ಮ ನಂದ ಸರಸ್ವತಿ ಮಹಾಸ್ವಾಮಿಗಳು, ಹಾಗೂ**ಶ್ರೀ ಶ್ರೀ ಮಹರ್ಷಿ ಆನಂದ ಗುರುಜಿ ಇವರ ದಿವ್ಯ ಸಾನಿಧ್ಯದಲ್ಲಿ ಪ್ರದಾನ ಮಾಡಲಾಗಿದೆ.*ಇದು ಅವರ ನಿಸ್ವಾರ್ಥ ಸೇವೆ, ಪ್ರಜ್ಞಾವಂತ ನಾಯಕತ್ವ ಮತ್ತು ದಾವಣಗೆರೆ ಜಿಲ್ಲೆಯ ಶ್ರೇಷ್ಠ ವಿದ್ಯಾ ಸಂಸ್ಥೆಗಳಲ್ಲಿ ಗುರುಕುಲವನ್ನು ಮೊನ್ನೆಲೆಗೆ ತರುವಲ್ಲಿ ಅವರ ದಿಟ್ಟ ಪ್ರಯತ್ನಗಳಿಗೆ ನೀಡಲಾದ ಗೌರವವಾಗಿದೆ. ಗುರುಕುಲ ಶಾಲೆಯ ಕಾರ್ಯದರ್ಶಿ ಅಬ್ದುಲ್ ಆರ್ ಅವರು ಮಾತನಾಡಿ ನಮ್ಮ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳ ಪೋಷಕರ ಸಹಕಾರ ಅಗತ್ಯ ಇದೆ ಇನ್ನು ನಮ್ಮ ಶಾಲೆ ಎತ್ತರಕ್ಕೆ ಬೆಳೆಯಲಿ ಎಂದು ಶ್ರಮಿಸುತ್ತಿರುವ ಶಿಕ್ಷಕ ವೃಂದಕ್ಕೆ ಹಾಗೂ ಮಕ್ಕಳ ಪೋಷಕರಿಗೆ ಧನ್ಯವಾದಗಳು ತಿಳಿಸಿ. ಅಖಿಲ ಭಾರತ ವಿಶ್ವಕರ್ಮ. ಸಮಾಜದವರಿಗೂ ಧನ್ಯವಾದಗಳು ತಿಳಿಸಿದರು ವರದಿ ಸ್ಮಾರ್ಟ್ ನ್ಯೂಸ್ ಕನ್ನಡ