ಸಂಭಲ್ ನ ಗೋಲಿಬಾರ್ ಮತ್ತು 1991 ರ ಆರಾಧನಾ ಸ್ಥಳಗಳ ಕಾಯಿದೆಯ ಸ್ಪಷ್ಟ ಉಲ್ಲಂಘನೆ ವಿರೋಧಿಸಿ :ಎಸ್ ಡಿ ಪಿ ಐ ಪ್ರತಿಭಟನೆ

Spread the love

*”ಸಂಭಲ್ ನ ಗೋಲಿಬಾರ್ ಮತ್ತು 1991 ರ ಆರಾಧನಾ ಸ್ಥಳಗಳ ಕಾಯಿದೆಯ ಸ್ಪಷ್ಟ ಉಲ್ಲಂಘನೆ ವಿರೋಧಿಸಿ :ಎಸ್ ಡಿ ಪಿ ಐ ಪ್ರತಿಭಟನೆ”*.ದಾವಣಗೆರೆ: ಡಿಸೆಂಬರ್ 01, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಅಹಮದ್ ನಗರ ಮದೀನಾ ಆಟೋ ಸ್ಟ್ಯಾಂಡ್ ಬಳಿ ಇತಿಹಾಸ ಪ್ರಸಿದ್ಧ ಆಜ್ಮಿರ್ ದರ್ಗಾ ಮತ್ತು ಉತ್ತರ ಪ್ರದೇಶ ರಾಜ್ಯದ ಸಂಭಲ್ ನ ಜಾಮ ಮಸೀದಿಯ ಸರ್ವೆ ಹಾಗೂ ಅದನ್ನು ವಿರೋಧಿಸಿ ಪ್ರತಿಭಟನಾ ನಿರತ 5 ಯುವಕರ ಮೇಲೆ ಗೋಲಿಬಾರ್ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಉತ್ತರ ಪ್ರದೇಶದ ಸಂಬಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಸರ್ವೆ ನಡೆಸಲು ಅನುಮತಿ ನೀಡಿರುವುದು 1991ರ “ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆಯ” ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ, ಹಾಗೂ ಪ್ರತಿವಾದಿಗಳ ವಾದವನ್ನು ಮಂಡಿಸಲು ಅವಕಾಶ ನೀಡದೆ ಇರುವುದು ನ್ಯಾಯಾಲಯದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.ಹಾಗಿದ್ದರೂ ಅಲ್ಲಿನ ನಿವಾಸಿಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಒಂದು ಬಾರಿ ಸರ್ವೆ ನಡೆಸಲು ಅವಕಾಶ ನೀಡಿ ಸಹಕರಿಸಿದ್ದು ಮತ್ತೊಂದು ಬಾರಿ ಸರ್ವೆ ನಡೆಸಲು ಪೂರ್ವ ಸೂಚನೆ ಇಲ್ಲದೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಇದನ್ನರಿತ ಸ್ಥಳೀಯರು ಪ್ರತಿಭಟನೆ ನಡೆಸುವಾಗ ಪೊಲೀಸರು ಏಕಾಏಕಿ ಗೋಲಿಬಾರ್ ನಡೆಸಿ,05ಜನರ ಹತ್ಯೆಯನ್ನು ನಡೆಸಿರುತ್ತಾರೆ. ಈ ಘಟನೆಗಳನ್ನು ನೋಡಿದರೆ ಸಂಘಪರಿವಾರದ ಈ ಆಡಳಿತ ವ್ಯವಸ್ಥೆಗೆ, ಪೊಲೀಸ್ ವ್ಯವಸ್ಥೆ ಕೂಡ ಪೂರಕವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ನಾವೆಲ್ಲರೂ ಈ ಅನ್ಯಾಯದ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟಾದರೂ ಕಾನೂನಾತ್ಮಕ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಕೆಲಸ ಮಾಡಬೇಕಾಗಿದೆ ಪ್ರಾಸ್ತಾವಿಕ ನುಡಿಗಳನ್ನು ಆಡಿದ ರಜ್ವಿ ರಿಯಾಝ್ ಅಹಮದ್.*ಪ್ರತಿನಿತ್ಯ ಭಾರತ ದೇಶದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಯ ಷಡ್ಯಂತರ ಭಾಗವಾಗಿ ಮಸೀದಿ ದರ್ಗಾ ಗಳನ್ನ ಗುರಿಯಾಗಿಸಿ ಸಮಾಜದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯಕ್ಕಾಗಿ ಶಾಂತಿ ಮತ್ತು ಸೌಹಾರ್ದಯುತ ಭಾರತದಲ್ಲಿ ಧರ್ಮ ಧರ್ಮಗಳ ಮಧ್ಯ ಕಂದಕ ಸೃಷ್ಟಿಸುವ ಹುನ್ನಾರವೇ, ಮಥುರಾ ಮತ್ತು ಗ್ಯನ್ವವಪಿ ನಂತರ ಉತ್ತರ ಪ್ರದೇಶದ ಸಂಭಾಲ್ ನ ಶಾಯಿ ಜಾಮಾ ಮಸೀದಿಯ ಸರ್ವೆ ಮತ್ತು ಆರಾಧನಾ ಸ್ಥಳಗಳ ಕಾಯಿದೆ 1991 ರ ಮತ್ತೊಂದು ಸ್ಪಷ್ಟ ಉಲ್ಲಂಘನೆ ಅದರ ಮುಂದುವರಿದ ಭಾಗವಾಗಿದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ಬಯಸುವ ಎಲ್ಲಾ ಜನರು ಈ ಕೋಮುವಾದಿಗಳ ಷಡ್ಯಂತರಗಳಿಗೆ ಬಲಿಯಾಗದೆ ಶಾಂತಿಯನ್ನು ಬಯಸುವರು ಒಗ್ಗಟ್ಟಾಗಿ ಇಂಥ ಷಡ್ಯಂತರಗಳನ್ನು ತೊಡೆದು ಹಾಕಬೇಕು ಎಂದು ಪ್ರತಿಭಟನ ಸಭೆಯು ಆಗ್ರಹಿಸಿತು.ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್ ಸ್ವಾಗತಿಸಿದರು. ಹಾಗೂ ಪ್ರತಿಭಟನೆ ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಯಹಿಯ,ಸಮಿತಿ ಸದಸ್ಯರಾದ ಇಸ್ಮಾಯೀಲ್ ಝಬಿವುಲ್ಲಾ, ಸೈಯದ್ ಅಶ್ಫಾಖ್ ಮಾತನಾಡಿದರು.ಹಾಗೂ ವಂದನ ಭಾಷಣವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ಮೋಹಸಿನ್ ರವರು ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕೋಶಾಧಿಕಾರಿ ಎ ಆರ್ ತಾಹೀರ್, ಜಿಲ್ಲಾ ಸಮಿತಿ ಸದಸ್ಯರಾದ ಫರೀದ್ ಖಾನ್, ಮನ್ಸುರ್ ಆಲಿ, ಮತ್ತು ದಾವಣಗೆರೆ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು,ಬೆಂಬಲಿಗರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *