ದಾವಣಗೆರೆ : 11 ಡಿಸೆಂಬರ್ 24 , ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ -ಅಂಬೇಡ್ಕರ್ ಜಾಥಾ 2ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆಗಳನ್ನು ನೀಡಿ ಕಣ್ಣೆರೆಸುವ ತಂತ್ರ ಮಾಡುತ್ತಿದೆ. ಈ ಅಸಹಾಯಕ U Turn ಚಾಳಿಯನ್ನು ಖಂಡಿಸಿ, ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧ ಬೆಳಗಾವಿಗೆ ಈ ಕೆಳಕಂಡ ಜನಾಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಹಮ್ಮಿಕೊಂಡಿದ್ದೇವೆ.*ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು.**ಮುಸ್ಲಿಮರ 2B ಮೀಸಲಾತಿಯನ್ನು ಪುನರ್ಸ್ಥಾಪಿಸಿ ಶೇಕಡಾ 8ಕ್ಕೆ ಏರಿಸಬೇಕು.**ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಜಾರಿಗೊಳಿಸಬೇಕು.**ವಕ್ಸ್ ಆಸ್ತಿಗಳ ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ಫ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು.*• *ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ SCP/TSP ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು.**25-26 ನಾಲಿನ ಬಜೆಟ್ ನಲ್ಲಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ಮೀಸಲಿಡಬೇಕು.*ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವುದು.ಮುಂತಾದ, ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಈ ಸಮುದಾಯಗಳ ಸಾಂವಿಧಾನಿಕ ಹಕ್ಕು ರಕ್ಷಣೆ ಕಾಯಿದೆ ಮತ್ತು ಯೋಜನೆಗಳಿಗಾಗಿ ಆಗ್ರಹಿಸಿ SDPI ವತಿಯಿಂದ ದಿನಾಂಕ 10 ಡಿಸೆಂಬರ್ 2024ರಿಂದ *ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ “ಚಲೋ ಬೆಳಗಾವಿ, ಅಂಬೇಡ್ಕರ್ ಜಾಥವನ್ನು- 2* ಹಮ್ಮಿಕೊಳ್ಳಲಾಗಿದೆ. ಸದರಿ ಜಾಥವು 10-12-2024 ರಂದು ಉಡುಪಿಯಿಂದ ಪ್ರಾರಂಭವಾಗಿ ವಿವಿಧ ಜಿಲ್ಲೆಗಳ ಮೂಲಕ 13-12-024 ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆ ಜಿಲ್ಲೆಯ ಹರಿಹರ ನಗರಕ್ಕೆ ತಲುಪಿ ಪ್ರೊ. ಬಿ ಕೃಷ್ಣಪ್ಪ ರವರ ಸಮಾಧಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಜಾಥವು ಪಕೀರಸ್ವಾಮಿ ಮಠದವರೆಗೆ ತಲುಪಿ ತದನಂತರ ಜಾಥಾವು ಕಾಲ್ನಡಿಗೆಯೊಂದಿಗೆ ಶಿವಮೊಗ್ಗ ವೃತ್ತ, ಹರಪನಹಳ್ಳಿ ವೃತ್ತದ ಮೂಲಕ ಹರಿಹರ ತಾಲೂಕು ಕಚೇರಿವರೆಗೆ ಬಂದು ಸಭಾ ಕಾರ್ಯಕ್ರಮ ವನ್ನು ನಡೆಸಿ ರಾಣೆಬೆನ್ನೂರಿನ ಕಡೆಗೆ ಮುಂದುವರೆಯಲಿದೆ .