ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಘೋಷಿತ ವ್ಯಾಪಾರ ಪ್ರದೇಶ ಹಾಗೂ ನಿರ್ಭಂದಿತ ವ್ಯಾಪಾರ ಪ್ರದೇಶ, ಮತ್ತು ವಾಹನ ಸಂಚಾರ ನಿಯಮಗಳ ಪಾಲನೆ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಚೌಕಿಪೇಟೆ ಮಂಡಿಪೇಟೆ ಚಾಮರಾಜಪೇಟೆ ಮಾರ್ಕೆಟ್ ಸುತ್ತಮುತ್ತ ಸಣ್ಣ ಸಣ್ಣ ತರಕಾರಿ ಹಣ್ಣಿನ ಅಂಗಡಿಗಳು ತುಂಬಾ ಜಾಸ್ತಿಯಾಗಿದ್ದು ವಾಹನ ಸವಾರಿಗೆ ಹಾಗೂ ಪಾದ ಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಎಸ್ ಪಿ ಉಮಾ ಪ್ರಶಾಂತ್ ತಿಳಿಸಿದರುನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ, ಪೊಲೀಸರು ದಂಡ ವಿಧಿಸಿ, ಸಿ.ಸಿ.ಟಿವಿ ಕ್ಯಾಮೆರಾಗಳ ಮೂಲಕ ದಂಡದ ನೋಟಿಸ್ ಕೂಡ ವಾಹನ ಮಾಲೀಕರಿಗೆ ರವಾನೆಯಾಗುತ್ತಿದೆ. ಬಸ್ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು,ಆಟೋ, ಟ್ಯಾಕ್ಸಿಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ವಾಹನ ಸವಾರರು ಪಾದಚಾರಿಗಳು ಸುಗಮವಾಗಿ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ ಎಂದು ತಿಳಿಸಿದರು.ಆಟೋಗಳಲ್ಲಿ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ, ಕೂಡಲೇ ಅವರಿಗೆ ದಂಡ ವಿಧಿಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸಿಗ್ನಲ್ ಜಂಪ್ ಮಾಡುತ್ತಿರುವ ವಾಹನ ಸವಾರರ ಮೇಲೆ ಕಾನೂನು ಕ್ರಮ ಮಾಡದ ಪೊಲೀಸರಿಗೆ ಎಚ್ಚರಿಕೆ ನೀಡಿದರು.ಮಹಾನಗರ ಪಾಲಿಕೆ ವ್ಯಾಪ್ತಿಯ ಅಕ್ತರ್ರಜ್ಹಾ ಸರ್ಕಲ್ನಿಂದ ಬಾಡಾ ಕ್ರಾಸ್ವರೆಗೆ ವರ್ತುಲ ರಸ್ತೆಯ ಕಾಮಾಗಾರಿಯನ್ನು ಮಾಡುವುದರಿಂದ ನಗರದ ಹೊರವಲಯದಲ್ಲಿ ಭಾರಿ ವಾಹನಗಳು ಸಂಚಾರ ಮಾಡುವುದರಿಂದ ನಗರದಲ್ಲಿನ ಹಗಲು ವೇಳೆವಾಣಿಜ್ಯ ಸಂಕೀರ್ಣಗಳು ಇರುವ ರಸ್ತೆಗಳ ಸಂಚಾರ ದಟ್ಟಣೆಯನ್ನು ಕಡಿತಗೊಳಿಸಿದಂತಾಗುತ್ತದೆ. ಮಂಡಿಪೇಟೆಯಲ್ಲಿ ತರಕಾರಿಯವರು ತುಂಬಾ ಕಸವನ್ನು ಜಾಸ್ತಿ ಮಾಡುತ್ತಿದ್ದು, ಕಸ ತೆಗೆಯಲು ತುಂಬಾ ಕಷ್ಟವಾಗಿರುತ್ತದೆ ಎಂದು ಪಾಲಿಕೆ ಆಯುಕ್ತೆ ತಿಳಿಸಿದರು.ಸಭೆಯಲ್ಲಿ ಡಿಸಿ ಗಂಗಾಧರಸ್ವಾಮಿ, ಪಾಲಿಕೆಯ ಮಹಾಪೌರರಾದ ಚಮನ್ ಸಾಬ್.ಕೆ, ಪಾಲಿಕೆ ಕಮಿಷನರ್ ರೇಣುಕಾ ಹೆಚ್ಚುವರಿ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಎಂ ಉಪಮಹಾಪೌರರಾದ ಸೋಗಿ ಶಾಂತಕುಮಾರ್, ಸಂತೋಷ್, ಮಂಜುನಾಥ, ಸ್ಮಾರ್ಟ್ ಸಿಟಿ ನಿರ್ದೇಶಕ ವೀರೇಶ್, ಆರ್.ಟಿ.ಓ ಅಧಿಕಾರಿ ಪ್ರಮುತೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.