ದಾವಣಗೆರೆ : ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಾಸ 14/12/2024

Spread the love

ದಾವಣಗೆರೆ :14 /12/2024 ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಾಸ ನಗರ ಉಪವಿಭಾಗ-2 ರ ವ್ಯಾಪ್ತಿಯ ಯರಗುಂಟ ವಿತರಣಾ ಕೇಂದ್ರದಿಂದ ಹೊರುಡುವ ಎಫ್-6 ಶಿವಾಲಿ, ಎಫ್-7 ಶಿವನಗರ ಮತ್ತು ಎಫ್-16 ಎಸ್‍ಜೆಎಂ, ಎಸ್‍ಟಿಪಿ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.14 ರಂದು ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಸ್‍ಪಿಎಸ್ ನಗರ, ಬಿಎನ್ -1 ಲೇಔಟ್, ಬಾಷಾ ನಗರ, ಚೌಡೇಶ್ವರಿ ನಗರ, ಗಾಂಧಿನಗರ, ಶಿವನಗರ, ಎಸ್‍ಎಸ್‍ಎಂ ನಗರ, ಬಿ ಡಿ ಲೇಔಟ್, ಬಿಸ್ಮಿಲ್ಲಾ ಲೇಔಟ್, ಹೆಗ್ಡೆ ನಗರ, ಮುಸ್ತಫಾ ನಗರ , ಅಜಾದ್ ನಗರ ,ಬಾಷಾ ನಗರ ಮೇನ್ ರೋಡ್, ಎಸ್‍ಜೆಎಂ ನಗರ 1 ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ, ಸೇವಾದಳ ಕಾಲೋನಿ, ಹೊಸ ಕ್ಯಾಂಪ್, ಬಿಎನ್ ಲೇಔಟ್, ಮಾಗನಹಳ್ಳಿ ಲೇಔಟ್ ಸುತ್ತಮುತ್ತ, ಕೊಂಡಜ್ಜಿ ರೋಡ್ ವಿಜಯನಗರ ಬಡಾವಣೆ , ಎಸ್‍ಎಂಕೆ ನಗರ 2 ನೇ ಹಂತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.ವಿದ್ಯುತ್ ವ್ಯತ್ಯಯ:ಜಲಸಿರಿ ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.14 ರಂದು ಬೆಳಿಗ್ಗೆ 10 ರಿಂದ 4 ಗಂಟೆಗೆಯವರೆಗೆ ಕೆ.ಟಿ.ಜೆ ಫೀಡರ್ ವ್ಯಾಪ್ತಿಯ ಕೆ.ಟಿ.ಜೆ. ನಗರ 1 ಮತ್ತು 2ನೇ ಕ್ರಾಸ್, ಶಿವಪ್ಪ ಸರ್ಕಲ್, ಸಿದ್ದಮ್ಮ ಪಾರ್ಕ್, ಮುರಘರಾಜೇಂದ್ರ ಮಠ, ಕ್ರೋಮ್ ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *