ಹರಿಹರ : ಇಲ್ಲಿನ ಸಮೀಪದ ಕುಮಾರಪಟ್ಟಣ ಗ್ರಾಸಿಂ ಆಸ್ಪತ್ರೆಯ ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವ ಅಂಗವಾಗಿ, ಗ್ರಾಸಿಂ ಕಾರಖಾನೆ ಆಡಳಿತ ಮಂಡಳಿ ಹಾಗೂ ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿತ್ತು.

Spread the love

ಹರಿಹರ : ಇಲ್ಲಿನ ಸಮೀಪದ ಕುಮಾರಪಟ್ಟಣ ಗ್ರಾಸಿಂ ಆಸ್ಪತ್ರೆಯ ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವ ಅಂಗವಾಗಿ, ಗ್ರಾಸಿಂ ಕಾರಖಾನೆ ಆಡಳಿತ ಮಂಡಳಿ ಹಾಗೂ ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿತ್ತು. ಕಾರಖಾನೆಯ ಮುಖ್ಯಸ್ಥರಾದ ಸೌಮ್ಯ ಮೊಹಂತಿಯವರು ಹಾಗೂ ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥರಾದ ಸಂದೀಪ ಭಟ್ ರವರು ಸ್ವತಃ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಗ್ರಾಸಿಂ ಕಾರಖಾನೆಯ ಒಟ್ಟು ೧೧೧ ಯುನಿಟ್ ರಕ್ತ ಸಂಗ್ರಹವಾಯಿತು. ರಕ್ತ ಸಂಗ್ರಹಣೆ ಮೂಲಕ ಅಪೇಕ್ಷಿತ ಅನೇಕ ರೋಗಿಗಳಿಗೆ ಸಹಾಯವಾಯಿತು ಎಂದು ರೆಡ್ ಕ್ರಾಸ್ ಸಂಸ್ಥೆ ಮುಖ್ಯಸ್ಥರು ಕಾರಖಾನೆಯ ಆಯೋಜಕರಿಗೆ ಅಭಿನಂದನೆ ತಿಳಿಸಿ, ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿದರು. ಗ್ರಾಸಿಂ ಕ್ಲಬ್ ಸಿಬ್ಬಂದಿಯವರು ಉಪಸ್ಥಿತರಿದ್ದರು.

*ವರದಿ* *ಮೊಹಮ್ಮದ್ ಗೌಸ್* *ಸ್ಮಾರ್ಟ್ ನ್ಯೂಸ್ ಕನ್ನಡ* *ಹರಿಹರ*

Leave a Reply

Your email address will not be published. Required fields are marked *