*ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯನ್ನು ತನ್ನ ಕೋಮು ದ್ವೇಷಕ್ಕೆ ಬಳಸಿದ ಶಾಸಕ ಬಿಪಿ ಹರೀಶ್ ಕಂಡು ಕಾಣದಂತೆ ವರ್ತಿಸುತ್ತಿರುವ ನಿಸ್ಸಹಾಯಕ ಕಾಂಗ್ರೆಸ್ ಸರ್ಕಾರ – ಎಸ್ ಡಿ ಪಿ ಐ.*

Spread the love

*ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯನ್ನು ತನ್ನ ಕೋಮು ದ್ವೇಷಕ್ಕೆ ಬಳಸಿದ ಶಾಸಕ ಬಿಪಿ ಹರೀಶ್ ಕಂಡು ಕಾಣದಂತೆ ವರ್ತಿಸುತ್ತಿರುವ ನಿಸ್ಸಹಾಯಕ ಕಾಂಗ್ರೆಸ್ ಸರ್ಕಾರ – ಎಸ್ ಡಿ ಪಿ ಐ.*ಹರಿಹರ:28 ಜನವರಿ, ದಿನಾಂಕ (21-01-25) ರಂದು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆದಿರುತ್ತದೆ. ಈ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು. ಮುಖ್ಯವಾಗಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ, ಜನಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಅವುಗಳನ್ನು ಅನುಷ್ಠಾನ ಮಾಡಲು ಚರ್ಚೆ ನಡೆಸಬೇಕಿತ್ತು.ಆದರೆ ಇಲ್ಲಿನ ಶಾಸಕರು ಅದು ಯಾವುದನ್ನು ಮಾಡದೆ ತನ್ನ ಸ್ವ ಪ್ರತಿಷ್ಠೆ ಮತ್ತು ತನ್ನ ಕೋಮು ದ್ವೇಷಕ್ಕೆ ಉಪಯೋಗಿಸಿಕೊಂಡಿದ್ದಾರೆ.ಒಬ್ಬ ಜನಪ್ರತಿನಿಧಿ ಯಾದವರು ಎಲ್ಲರನ್ನು ಒಗ್ಗೂಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಆದರೆ ಈ ವ್ಯಕ್ತಿ ಸಂಘದ ಶಾಖೆಯಲ್ಲಿ ಪಡೆಯುವ ಶಿಕ್ಷಣವನ್ನು ತನ್ನ ಕೋಮ ದ್ವೇಷದ ಭಾಗವಾಗಿ ಮುಸ್ಲಿಂ ಅಧಿಕಾರಿಗಳ ವಿರುದ್ಧ ಪ್ರದರ್ಶಿಸಿದ್ದಾರೆ.ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿ ಪಡೆದು ಚರ್ಚೆ ನಡೆಸಲಾಗಿದೆ. ಆದರೆ ಇಲ್ಲಿನ ಮುಸ್ಲಿಂ ಅಧಿಕಾರಿಗಳು ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳ ನಾಯಕರ ಆಟೋಟೋಪ ಗಳಿಗೆ ಬಲಿಯಾಗಿದ್ದಾರೆ.ಸಭೆಯ ನಿಮಿತ್ತ ಚರ್ಚೆ ನಡೆಯುವ ಸಂದರ್ಭದಲ್ಲಿ ಮುಸ್ಲಿಂ ಅಧಿಕಾರಿಗಳ ಹೆಸರನ್ನು ಕೇಳಿದ ನಂತರ ತನ್ನ ಶಾಖೆಯ ಶಿಕ್ಷಣ ನೆನಪಾಗಿ ತಾಲೂಕು ಪಂಚಾಯಿತಿ ಸಿಬ್ಬಂದಿಗಳಾದ ಸಲೀಂ ಮತ್ತು ಮಹಮ್ಮದ್ ಅಲಿ ರವರಿಗೆ ಇದು ಪಾಕಿಸ್ತಾನವಲ್ಲ ಹರಿಹರ ಎಂದು ತನ್ನ ಕೋಮು ಮನಸ್ಥಿತಿಯನ್ನು ಮುಂದುವರೆಸಿ ಅವರ ತೇಜೋವಧೆಯನ್ನು ಮಾಡಿದ್ದಾರೆ. ಮತ್ತು ಇದರ ಮುಂದುವರೆದ ಭಾಗವಾಗಿ ಅವರ ವಿರುದ್ಧ ನೋಟಿಸು ಜಾರಿ ಮಾಡಿ ಅವರನ್ನು ಅಮಾನತು ಮಾಡಲು ಆದೇಶ ಮಾಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಇದನ್ನೆಲ್ಲ ತಡೆಯದೆ ಮೂಕ ವಿಸ್ಮಯರಾಗಿ ವೀಕ್ಷಿಸಿದ್ದಾರೆ.ದಾವಣಗೆರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ರವರು ಕಾರ್ಯಪ್ರವೃತ್ತರಾಗಿ ಶಾಸಕರ ಕೋಮು ದ್ವೇಷದ ಭಾಗವಾಗಿ ತೆಗೆದುಕೊಂಡ ಎಲ್ಲಾ ಆದೇಶಗಳನ್ನು ಹಿಂಪಡೆಯುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಈ ಕ್ರಮಕ್ಕೆ ತಡೆ ನೀಡದಿದ್ದರೆ ದೊಡ್ಡಮಟ್ಟದ ಹೋರಾಟ ರೂಪಿಸುವುದಾಗಿ, ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸಮಿವುಲ್ಲಾ ರವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *