ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೀಸಲಾದ ಅನುದಾನ ಸಂಪೂರ್ಣವಾಗಿ ಬಳಕೆಯಾಗಬೇಕು – ಎಐಎಂಐಎಂ ದಾವಣಗೆರೆ ಆಗ್ರಹದಾವಣಗೆರೆ: ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (AIMIM) ದಾವಣಗೆರೆ ಶಾಖೆಯ ಪ್ರತಿನಿಧಿ ಮಂಡಳಿ, ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಅಲಿ ಶೋಯಬ್ ಅವರ ನೇತೃತ್ವದಲ್ಲಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದೆ. ಈ ಮನವಿಯನ್ನು ಜಿಲ್ಲೆ ಅಲ್ಪಸಂಖ್ಯಾತ ಅಧಿಕಾರಿ ಮುಖಾಂತರ ಸಚಿವರಿಗೆ ನೀಡಲಾಯಿತು.ಪ್ರಸ್ತುತ 2024-25ನೇ ಸಾಲಿಗೆ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗೆ ₹3,059.84 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಆದರೆ ಕೇವಲ ₹1,505.72 ಕೋಟಿ ಮೊತ್ತ ಮಾತ್ರ ವಿನಿಯೋಗವಾಗಿದೆ. ಸುಮಾರು ₹1,276.29 ಕೋಟಿ ಅನುದಾನ ಇನ್ನೂ ಖರ್ಚಾಗದೆ ಉಳಿದಿದ್ದು, ಇದು ಸರಿಯಾದ ನಿಯಂತ್ರಣ ಇಲ್ಲದ ಕಾರಣ ಎಂದು ಪ್ರತಿನಿಧಿ ಮಂಡಳಿ ಆರೋಪಿಸಿದೆ.AIMIM ದಾವಣಗೆರೆ ಶಾಖೆಯ ಪ್ರಮುಖ ಬೇಡಿಕೆಗಳು:✔ ಉಳಿದಿರುವ ₹1,276.29 ಕೋಟಿ ಮೊತ್ತವನ್ನು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಪೂರ್ಣವಾಗಿ ಬಳಸಲು ತಕ್ಷಣ ಕ್ರಮ ಕೈಗೊಳ್ಳಬೇಕು.✔ ಅನುದಾನದ ಯೋಜನೆವಾರು ಲೆಕ್ಕಪತ್ರ (ಆಡಿಟ್ ವರದಿ) ಜನತೆಗೆ ಮತ್ತು ಸಂಬಂಧಿತ ಸಮಿತಿಗಳಿಗೆ ಜಾರಿಗೆ ತರಬೇಕು.✔ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಗಳ ಸದುಪಯೋಗ ತಲುಪುವಂತೆ ಕ್ರಮ ಕೈಗೊಳ್ಳಬೇಕು.ಈ ಸಂಧರ್ಭದಲ್ಲಿ ಮಾತನಾಡಿದ ಮುಹಮ್ಮದ್ ಅಲಿ ಶೋಯಬ್ ಅವರು,“ಸರ್ಕಾರವು ಪ್ರಾಮಾಣಿಕವಾಗಿ ಈ ಅನುದಾನವನ್ನು ಸಮರ್ಪಕವಾಗಿ ಬಳಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಬೇಕು” ಎಂದು ಒತ್ತಾಯಿಸಿದರು.ಇತ್ತೀಚೆಗೆ ಅನೇಕ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಿದರೂ, ಅದರ ಸರಿಯಾದ ಬಳಕೆ ಇಲ್ಲದಿರುವ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಸರ್ಕಾರದ ಹೊಣೆಗಾರಿಕೆ ಹೆಚ್ಚಿಸಲು ಮತ್ತು ಲೆಕ್ಕಪತ್ರ ಪಾರದರ್ಶಕವಾಗಿಸಲು ಈ ವರದಿ ಅನಿವಾರ್ಯ ಎಂದು AIMIM ಪ್ರತಿನಿಧಿ ಮಂಡಳಿ ಹೇಳಿದರು.ಈ ಮನವಿಯನ್ನು ತಕ್ಷಣ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.ಈ ಸಂದರ್ಭದಲ್ಲಿ AIMIM ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಮತುಲ್ಲಾ, ಜಿಲ್ಲಾ ಸಮಿತಿಯ ಸದಸ್ಯ ಸನೌಲ್ಲಾ, ತಾಲ್ಲೂಕು ಅಧ್ಯಕ್ಷ ಅಯೂಬ್ ಖಾನ್ ಹಾಗೂ ತಾಲ್ಲೂಕು ಯುವ ಅಧ್ಯಕ್ಷ ತಾಹೀರ್ ಉಪಸ್ಥಿತರಿದ್ದರು.