ಪೊಲೀಸ್ ಅಧೀಕ್ಷಕರವರ ಕಛೇರಿ, ದಾವಣಗೆರೆ ಜಿಲ್ಲೆ, ದಾವಣಗೆರೆ.០:-16-02-2025.ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆ ಕಳವು ಮಾಡುತ್ತಿದ್ದ ಆರೋಪಿತರ ಬಂಧನ 8,65,000/-ರೂ ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳ ಜಪ್ತಿ.ಹರಿಹರ ತಾ।। ಬನ್ನಿಕೋಡು ಗ್ರಾಮದ ಶ್ರೀಮತಿ ಶಶಿಕಲಾ ಕೋಂ ರಮೇಶ ಎಂಬುವರ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಪರಿಹಾರ ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಎಂಬುವರು ದಿನಾಂಕ:-1-02-2025 ರಂದು ಮನೆಗೆ ಬಂದು ಸಂಜೆ 04-00 ಗಂಟೆಯಿಂದ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾದುದಾರರ ಮನೆಯಲ್ಲಿದ್ದ ಒಟ್ಟು 144,000/- ರೂ ಬೆಲೆಯ 02 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಪೂಜೆ ಮಾಡಿಕೊಡುತ್ತೇವೆ ಅಂತಾ ಹೇಳಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರುಗಳನ್ನ ಪತ್ತೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ಅಂತಾ ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ-30/2025, 00: 305 0/2 3(5) 2.2.2-2023 D ಕೈಗೊಂಡಿರುತ್ತದೆ.ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಮಾನ್ಯ ಶ್ರೀಮತಿ ಉಮಾ ಪ್ರಶಾಂತ್ ಪೊಲೀಸ್ ಅಧೀಕ್ಷಕರು ದಾವಣಗೆರೆ, ಶ್ರೀ ವಿಜಯ್ ಕುಮಾರ್ ಸಂತೋಷ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ಮಂಜುನಾಥ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಬಸವರಾಜ.ಬಿ.ಎಸ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ-ವಿಭಾಗ, ಶ್ರೀ ಸುರೇಶ ಸಗರಿ ವೃತ್ತ ನಿರೀಕ್ಷಕರು ಹರಿಹರ ವೃತ್ತರವರ ಮಾರ್ಗದರ್ಶನದಲ್ಲಿ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ(ಕಾ&ಸು) ರವರ ನೇತೃತ್ವದಲ್ಲಿ ಶ್ರೀ ಮಹದೇವ ಸಿದ್ದಪ್ಪ ಭತ್ತೆ ಪಿ.ಎಸ್.ಐ(ತನಿಖೆ) ಠಾಣೆಯ ಸಿಬ್ಬಂದಿಗಳಾದ-ಎ.ಎಸ್.ಐ ರವರವರಾದ ಶ್ರೀ ತಿಪ್ಪೇಸ್ವಾಮಿ, ಹೆಚ್.ಸಿ.ರವರುಗಳಾದ ರಮೇಶ ಜಿ.ಎನ್. ನೀಲಮೂರ್ತಿ, ದಾದಾಪೀರ್, ಅನಿಲ ಕುಮಾರ, ಬಸವನಗೌಡ, ಅಂಗರಾಜ್, ಕರಿಯಪ್ಪ ಹಾಗು ಸಿಪಿಸಿರವರುಗಳಾದ ಸತೀಶ್ ಟಿ.ವಿ, ರಿಜ್ವಾನ್ ನಾನೂರ್, ಗಂಗಾಧರ, ಸುರೇಶ ಉಪ್ಪಾರ. ಪ್ರಸನ್ನಕಾಂತ. ಅನಿಲ್ ಕುಮಾರ್ ನಾಯ್ಕ, ಕಡೇಮನಿ ನಾಗಪ್ಪ, ಅರ್ಜುನ್ ನಂದ್ಯಾಲ, ಶ್ರೀಮತಿ ಸುಶೀಲ ಸಿ.ಎಂ. ಶ್ರೀಮತಿ ನಾಜೀಮಾ, ಶ್ರೀಮತಿ ಪವಿತ್ರ ಇಲಾಖಾ ವಾಹನ ಚಾಲಕರಾದ ಸಿದ್ದಪ್ಪರವರನ್ನೊಳಗೊಂಡ ತಂಡವು ಪತ್ತೆ ಕಾರ್ಯ ನಡೆಸಿ ಆರೋಪಿತರುಗಳಾದ ಎ1-ಇಸ್ಮಾಯಿಲ್ ಜಬೀವುಲ್ಲಾ ಬಿನ್ ಮಹಮದ್ ಅನೀಫ್, 30 ವರ್ಷ, ಮುಸ್ಲಿಂ ಜನಾಂಗ, ಎಲೆಕ್ನಿಷಿಯನ್ ಕೆಲಸ, ವಾಸ-1ನೇ ಮೇನ್, 18 ನೇ ಕ್ರಾಸ್, ಬಾಷಾನಗರ, ದಾವಣಗೆರೆ. ಎ2 -ಶ್ರೀಮತಿ ರುಕ್ಷಾನ ಬೇಗಂ ಕೋಂ ಜಲಾಲುದ್ದೀನ್ ಖಾನ್, 30 ವರ್ಷ, ಮುಸ್ಲಿಂ ಜನಾಂಗ, ಟೈಲರಿಂಗ್ ಕೆಲಸ, ವಾಸ-ಜಗತ್ಸಿಂಗ್‌ರ, ಓಡಿಸ್ತಾ ರಾಜ್ಯ, ಇವರನ್ನು ಬಂಧಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 02 ಪ್ರಕರಣಗಳು ಮತು ಆಜಾದ್ ನಗರ ಠಾಣೆಯ 01 ಪ್ರಕರಣ ಪತ್ತೆಯಾಗಿದ್ದು ಬಂಧಿತರಿಂದ 8,65,000/-ರೂ ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ತನಿಖೆ ಮುಂದುವರೆದಿರುತ್ತದೆ. ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಐಪಿಎಸ್ ರವರು ಶ್ಲಾಘಿಸಿರುತ್ತಾರೆ.