ಹರಿಹರ: ವ್ಯಕ್ತಿ ಶವವೊಂದು ಪತ್ತೆಯಾಗಿದೆ . ಯಾರು ಎಂದು ತಿಳಿದು ಬಂದಿಲ್ಲ

Spread the love

ಈ ದಿನ ಹರಿಹರ ನಗರದಲ್ಲಿ ಇರುವಂತ ರಾಜು ವೈನ್ಸ್ ಶಾಪಿನಾ ಮುಂಭಾಗದಲ್ಲಿ ಅನಾಮದೆಯಾ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಆ ವ್ಯಕ್ತಿಯ ಸಂಬಂಧಿಕರು ಯಾರು ಎಂದು ತಿಳಿದುಬಂದಿಲ್ಲ ಕಾರಣ ಅಂಜುಮನ್ ಎ ಇಸ್ಲಾಮಿಯಾ ಕಮಿಟಿಯ ಆಂಬುಲೆನ್ಸ್ ನಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಮಾರ್ಚ್ ಗೇ ಪೊಲೀಸ್ ಸಿಬ್ಬಂದಿಯವರ ಮುಂದಾಳತ್ವದಲ್ಲಿ ಕಳುಹಿಸಿಕೊಳ್ಳಲಾಯಿತು. ದಾವಣಗೆರೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಶವವನ್ನುಅಬ್ಸರ್ವೇಷನ್ ನಲ್ಲಿ ಇಡಲಾಗುವುದು ಕಾರಣ ಆ ಆ ಮೃತ ವ್ಯಕ್ತಿಯ ಸಂಬಂಧಿಕರು ಯಾರಾದರೂ ಬರಬಹುದು ಎಂದು ಮತ್ತು ಯಾರು ಬರದೇ ಇದ್ದ ಪಕ್ಷದಲ್ಲಿ ಜಿಲ್ಲಾ ಆಸ್ಪತ್ರೆಯ ನಿರ್ದೇಶನಾದಂತೆ ನಗರಸಭೆಯವರಿಗೆ ಆಗಲಿ ಅಥವಾ ಹರಿಹರ ನಗರದಿಂದ ಮೃತ ವ್ಯಕ್ತಿಯನ್ನು ತೆಗೆದುಕೊಂಡು ಹೋಗಿರುವ ಅಂಜುಮನ್ ಎ ಇಸ್ಲಾಮಿಯ ಕಮಿಟಿಯವರಿಗಾಗಲಿ ಶವವನ್ನು ಒಪ್ಪಿಸುತ್ತಾರೆ ನಂತರ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಹೀಗೆ ಅನಾಮದೇಯ ಶವಗಳು ಇದ್ದಂತ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಮಿಯ ಕಮಿಟಿಯ ಸದಸ್ಯರು ಈ ರೀತಿ ಶವವನ್ನು ಅಂತಿಮ ಸಂಸ್ಕಾರ ಮಾಡುವ ಕಾರ್ಯವನ್ನು ಬಹಳ ದಿನಗಳಿಂದ ನೆರವೇರಿಸಿಕೊಂಡು ಬಂದಿರುತ್ತಾರೆ. ಹಾಗೂ ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ ವೈದ್ಯಾಧಿಕಾರಿಗಳು ನೀಡುವ ಮಾಹಿತಿಯ ಮೇರೆಗೆ ಸಾವಿಗೆಕಾರಣ ಏನು ಎಂಬುದು ತಿಳಿಯುತ್ತದೆ ಎಂದು ಮಾಹಿತಿ. ನೀಡಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *