ಹರಿಹರ ಶಾಖೆಯಲ್ಲಿ ಬಾಬುಜಿ ಜಯಂತಿ. ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ಶನಿವಾರ ರಂದು ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಹಾಗೂ ಭಾರತ ದ ಮಾಜಿ ಉಪ ಪ್ರಧಾನ ಮಂತ್ರಿ ಗಳಾದ ಡಾ. ಬಾಬು ಜಗಜೀವನ್ ರಾಂ ಅವರ 118 ನೇಯ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಮಾನವತಾವಾದಿ,ಸಮಾನತೆಯ ಹರಿಕಾರ ಅವರ ಸಮತಾದಿನ ಅಲ್ಲದೆ ಭಾರತದಲ್ಲಿ ಗಣನೀಯ ಸಾರ್ವಜನಿಕ ಸೇವೆಯ ದಾಖಲೆಯನ್ನು ಹೊಂದಿರುವ ಆಧುನಿಕ ಭಾರತೀಯ ರಾಜ್ಯoಗದ ಬೆಳೆವಣಿಗೆಗೆ ಶೇಷ್ಟ ಕೊಡುಗೆ ನೀಡಿದವರು ರಾಷ್ಟ್ರ ಸೇವೆಗಾಗಿ ಬದಕನ್ನೇ ಮಿಸಲಿಟ್ಟ ಈ ಮಹಾ ಪುರುಷನ್ನನು ಸ್ಮರಿಸಬೇಕಾದದ್ದು ನಮ್ಮ ಎಲ್ಲರ ಆದ್ಯ ಕರ್ತವ್ಯ ಎಂದು ಪುಷ್ಪರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು. ಶಾಖಾ ಪ್ರಭಾರಧಾರಕರಾದ ರವಿಕುಮಾರ್, ಸಂಜಯ್ ಪಿ, ಕೇಶವ ಎಸ್ ಹಾಗೂ ಓದುಗರಾದ ಪ್ರದೀಪ್, ಪ್ರಜ್ವಲ್, ಪ್ರಮೋದ ಪರಮೇಶ್, ಚಂದನಾ, ಭಾಗ್ಯ , ದೀಪಾ ,ಯಶವಂತ ಸಾರ್ವಜನಿಕರು, ಓದುಗರು ಉಪಸ್ಥಿತರಿದ್ದರು.