ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟ ಸಭೆ

Spread the love

ದಾವಣಗೆರೆ: ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದು ತಿದ್ದುಪಡಿ ಕಾಯ್ದೆ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟ ಖಂಡನಾ ಸಭೆ ನೂರಾನಿ ಶಾದಿಮಾಹಲ್ ನಲ್ಲಿ ನಡೆಸಿದ್ದೆಖಂಡನಾ ಸಭೆ ಯಲ್ಲಿ ವಿವಿಧ ಸಾಮಾಜಿಕ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಮತ್ತು ಸಂಘಟನೆಯ ಮುಖಂಡರು ಪಾಲ್ಗೊಂಡು, ಈ ಕಾಯ್ದೆ ಯು ಸಂವಿಧಾನ ಪರ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವುದೆಂದು ಇದರ ಉದ್ದೇಶವಾಗಿದೆ ಎಂದು ಎಲ್ಲರೂ ಒಕ್ಕೊರಲಿನಿಂದ ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕರಾದ ಟಿ.ಅಸ್ಗರ್ ಅವರು, ‘‘ನಮ್ಮ ಪೂರ್ವಜರು ಅಲ್ಲಾಹನನ್ನು ಸಂತೃಪ್ತಪಡೆಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನು ಆಗಿದೆ ವಕ್ಫ್ . ವಕ್ಫ್‌ಗೆ ಸೇರಿರುವ ಜವೀನುಗಳು ಯಾರಿಂದಲೋ ಕಬಲಿಸಿದ ಜಮೀನಲ್ಲ. ಯಾರಿಂದಲೋ ಕಬಲಿಸಿದ ಜಮೀನು ವಕ್ಫ್ ಆಗಲು ಸಾಧ್ಯವೂ ಇಲ್ಲ. ಧರ್ಮ ಗೋಡೆ ಯನ್ನು ಬದಿಯಲಿಟ್ಟು ಎಲ್ಲಾ ಭಾರತೀಯರು ನಮ್ಮ ಜೊತೆ ಕೈ ಜೋಡಿಸಬೇಕೆಂದು ನಾವು ಕೇಳುತ್ತೇವೆ. ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಯಾಗಿ ಗುರಿಯಾಗುತ್ತವೆ. ನಮ್ಮ ಹೋರಾಟ ಹಿಂದೂ-ಮುಸ್ಲಿಂ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರು ವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಕಾಯ್ದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಲಿಸುವ ಯತ್ನವಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ. ನಾವು ಇದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ದಾವಣಗೆರೆ ಯಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು ಈ ಸಂದರ್ಭದಲ್ಲಿ ವಕೀಲರಾದ ನಜೀರ್ ಅಹ್ಮದ್. ಮಹಮ್ಮದ್ ಅಲಿ ಶೋಯೇಬ್. ಮಹಮ್ಮದ್ ಅಲ್ತಾಫ್. ರಜ್ವಿ ರಿಯಾಜ್ ಸಾಬ್. ಇಸ್ಮಾಯಿಲ್ ಕಾಟ. ಅದಿಲ್. ಜಾಫರ್. ಕೋಳಿ ಇಬ್ರಾಹಿಂ ಸಾಬ್. ಶೇರಯಾರ ಜಂಗ ಸಾಬ್.ಸುಭಾನಿ. ಲಿಯಾಕತ್ ಅಲಿ. ಮುಜಾಹೀದ್. ಮುಜಾಮಿಲ್. ತಾಹೀರ್. ಇಮ್ರಾನ್.ನಿಜಾಮ.ರಫೀಕ್. ಸರ್ಫರಜ್. ಸದಮ್. ಇತರರು ಉಪಸ್ಥಿತರಿದ್ದರು ದಿನಾಂಕ 6/4/2025 ರ ಭಾನುವಾರ ರಾತ್ರಿ 9 ಘಂಟೆಯಿಂದ ದಾವಣಗೆರೆ ಯ ನೂರಾನಿ ಶಾದಿಮಾಹಲ್ ನಲ್ಲಿ ಈ ಕಾರ್ಯಕ್ರಮ ನಡೆಯಿತು

Leave a Reply

Your email address will not be published. Required fields are marked *