ಹರಿಹರ:ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಾಬಾ ಸಾಹೇಬ್ ಅವರ 134 ಜಯಂತಿ

Spread the love

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಆಡಳಿತ ಹಾಗೂ ತಾಲೂಕ ಪಂಚಾಯತ್ ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಹಾಗೂ ಭಾರತದ ಮಾಜಿ ಉಪ ಪ್ರಧಾನಿ. ಹಸಿರು ಕ್ರಾಂತಿಯ ಹರಿಕಾರ. ಅಜಾತಶತ್ರು ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಕಾರ್ಯಕ್ರಮವನ್ನು ಈ ದಿನ ಹರಿಹರ ನಗರದ ಗುರುಭವನದಲ್ಲಿ ನೆರವೇರಿಸಲಾಯಿತು. ಈ ಒಂದು ಕಾರ್ಯಕ್ರಮವನ್ನು ಹರಿಹರ ನಗರದ ಎಕೆ ಕಾಲೋನಿ ಮೂರನೇ ಕ್ರಾಸ್, ಯಂತ್ರಾಪುರ ಇಲ್ಲಿಂದ ಮೆರವಣಿಗೆಯ ಮುಖಾಂತರ ಮಾನ್ಯ ಜನಪ್ರಿಯ ಶಾಸಕ ಬಿ.ಪಿ ಹರೀಶ್ ರವರು ಹಾಗೂ ತಾಲೂಕು ದಂಡಾಧಿಕಾರಿಗಳು . ಮಾಜಿ ಶಾಸಕರಾದಂತ ಎಸ್ ರಾಮಪ್ಪನವರು. ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಕಮಿಟಿ ಅಧ್ಯಕ್ಷರಾದ ಎನ್ ಹೆಚ್ ನಂದಿ ಗವಿ ಶ್ರೀನಿವಾಸ್ ರವರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕು ಪಂಚಾಯತ್ ಇ.ಓ . ಪಿಡಬ್ಲ್ಯೂಡಿ ಇಂಜಿನಿಯರ್ ನಗರಸಭೆ ಪೌರಾಯುಕ್ತರು. ಅಧ್ಯಕ್ಷರು. ಉಪಾಧ್ಯಕ್ಷರು. ಎಲ್ಲಾ ಶಾಲಾ-ಕಾಲೇಜುಗಳ ಎಸ್ ಡಿ ಎಂ ಸಿ ಅಧ್ಯಕ್ಷರು. ಪದಾಧಿಕಾರಿಗಳು. ಪೊಲೀಸ್ ಇಲಾಖೆಯ ಸಿಬ್ಬಂದಿಯವರು. ಹಾಗೂ ಸಾವಿರಾರು ಜನ ಅಂಬೇಡ್ಕರ್ ರವರ ಹಾಗೂ ಬಾಬು ಜಗಜೀವನ್ ರಾಮ್ ರವರ ಅಭಿಮಾನಿಗಳ ಬಳಗದವರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿ ಊಟದ ಕಾರ್ಯಕರ್ತರು ಹಾಗೂ ನಗರಸಭೆಯ ಪೌರಕಾರ್ಮಿಕರು. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು ಹಾಗೂ ಗುರುಭವನದಲ್ಲಿ ವೇದಿಕೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಒಂದು ವೇದಿಕೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಹಾಗೂ ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಹಲವರು ಮಾಹಿತಿಯನ್ನು ನೀಡಿದರು ವರದಿ ಶೇಕ್ ಅಲ್ತಾಫ್ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ

Leave a Reply

Your email address will not be published. Required fields are marked *