ಕೇಂದ್ರ ಸರ್ಕಾರದ ಬೆಲೆ ಏರಿಕೆ ಜನ ವಿರೋಧಿ ನೀತಿಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಘಟನೆ ಇಂದು ದಾವಣಗೆರೆ ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದಂತ ಎಲ್ಲಾ ಮಹಿಳೆಯರು ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದಂತವರು ಕೇಂದ್ರ ಸರ್ಕಾರ ಸಿಲೆಂಡರ್ ಬೆಲೆ ಏರಿಕೆ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ಮಾಡಿರುವಂತದ್ದು ಜೊತೆಗೆ ತಂದೆಯಂತೆ ಮಗ ಎಂಬುವಂತೆ ರಾಜ್ಯ ಸರ್ಕಾರ ದಿನಸಿ ಪದಾರ್ಥಗಳ ಬೆಲೆ ಏರಿಕೆ ಮಾಡಿರುವುದನ್ನು ಎಲ್ಲಾ ಕೂಲಿ ಕಾರ್ಮಿಕ ಮಹಿಳೆಯರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಪರಿತಪಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವ ರಾಜಕೀಯ ಪಕ್ಷಗಳು ಹಾಗೂ ನಾಯಕರುಗಳ ವಿರುದ್ಧ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ನೀಡಿದರು ಹಾಗೂ ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವಂತಹ ಕೊಡುಗೆಗಳು ಜನರ ನಿದ್ದೆಗೆಡಿಸುತ್ತಿರುವುದು ದುಡಿದು ತಿನ್ನುವ ಕೈಗಳಿಗೆ ಬೆಲೆ ಏರಿಕೆಯ ಒತ್ತಡವನ್ನ ಅನುಭವಿಸುವಂತೆ ಮಾಡಿ ತಮ್ಮ ಗಂಡಂದಿರು ದುಡಿದ ಕೂಲಿ 500 ರೂಪಾಯಿ ಸಂಬಳದಲ್ಲಿ ಅರ್ಧದಷ್ಟು ಪೆಟ್ರೋಲ್ ಖರ್ಚಿಗೆ ಬಳಸುತ್ತಿರುವ ವಿಚಾರವನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ದಿನೇ ದಿನೇ ಬೆಲೆ ಏರಿಕೆ ಆಗುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನರಿಗೆ ಮಾಡಿರುವ ಗಾಯಕ್ಕೆ ರಾಜ್ಯ ಸರ್ಕಾರ ಬರೇ ಹಾಕುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ರವರು ಹಾಲಿನ ಬೆಲೆ ಏರಿಕೆ ವಿದ್ಯುತ್ ದರ ಏರಿಕೆ ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರ ಏರಿಗೆ. ಕೇಂದ್ರ ಸರ್ಕಾರದ ಎಲ್ಲಾ ಬೆಲೆ ಏರಿಕೆಯ ಜೊತೆಗೆ ರಾಜ್ಯ ಸರ್ಕಾರದ ಬೆಲೆ ಏರಿಕೆಯೂ ಸೇರಿ ನಾಡಿನ ಜನರು ಅದರಲ್ಲೂ ಕೆಳಮಟ್ಟದ ಹಾಗೂ ಸಾಮಾನ್ಯ ಜನರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದಂತಾಗಿದೆ ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ರಾಜಕೀಯ ಪಕ್ಷಗಳು ರಾಜಕೀಯ ನಾಯಕರು ಬೆಲೆ ಏರಿಕೆಯನ್ನು ನಿಲ್ಲಿಸಿ ಏರಿಸಿರುವ ಬೆಲೆಯನ್ನು ಇಳಿಸಿ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕು ಬಡವರ ಕೂಲಿಕಾರ್ಮಿಕರ ಜೀವನವನ್ನು ಸರಿದೂಗಿಸುವ ರೀತಿ ಬೆಲೆಗಳನ್ನು ನಿಗದಿಪಡಿಸಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದಂತ ಎಲ್ಲಾ ಮಹಿಳೆಯರು ಒಕ್ಕೋರಲ್ಲಿನಿಂದ ಮನವಿಯನ್ನು ಮಾಡಿಕೊಂಡರು. ಈ ಸಂದರ್ಭದಲ್ಲಿ . ಆನಂದಪ್ಪ ಎಸ್ ಎಲ್ . ಬಿಬಿಜಾನ್. ಗೀತಮ್ಮ. ಮಂಜುಳಾ. ರೇಣುಕಮ್ಮ. ಎಲ್ಲಮ್ಮ. ಜಂಶಿದ ಬಾನು. ಆಸ್ಮ. ರಾಮಚಂದ್ರ ಎಚ್. ನಿರ್ಮಲ. ಜ್ಯೋತಿ. ರಾಜೇಶ್ವರಿ. ರೇಷ್ಮಾ. ಉಪಸ್ಥಿತರಿದ್ದರು.ವರದಿ ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ