ಚನ್ನಗಿರಿ :26 ನೇ ತಾರೀಕು ದಾವಣಗೆರೆ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶ ಕಾರ್ಯಕ್ರಮಕ್ಕೆ ಆಹ್ವಾನ

Spread the love

26 ನೇ ತಾರೀಕು ದಾವಣಗೆರೆ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ರಾಷ್ಟ್ರೀಯ ಮಟ್ಟದ ಬಹುದೊಡ್ಡ ನಾಯಕರು ಆಗಮಿಸಲಿದ್ದಾರೆ. ನಾವು ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಮುಂದಿನ ಪೀಳಿಗೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವಂತಹ ಸಂವಿಧಾನದ ಸಮಾನತ ತತ್ವಗಳಾದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ವಾಕ್ಯದಡಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ತಾವೆಲ್ಲರೂ ಕೂಡ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮಕ್ಕೆ ಮಹಿಳೆಯರು ಬುದ್ದಿಜೀವಿಗಳು ಹೋರಾಟಗಾರರು ಯುವಕರು ವಿದ್ಯಾರ್ಥಿಗಳು ಸಮಾನ ಮನಸ್ಕರರು ಆಗಮಿಸಿ ,ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಚಿತ್ರಲಿಂಗಪ್ಪ ಚನ್ನಗಿರಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರು. ಸೈಯದ್ ಗೌ ಗೌಸ್ಪೀರ್ ಪುರಸಭೆ ಸದಸ್ಯರು. ಹಸ್ಪಿಯ ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ngo (ಮಾನವ ಹಕ್ಕು ಆಯೋಗ) ಮಹಿಳಾ ರಾಜ್ಯಾಧ್ಯಕ್ಷರು ಹಾಗೂ ರಾಜು ಗರಗ .ಸೈಯದ್ ತನ್ವೀರ್. ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು ವರದಿ ಸ್ಮಾರ್ಟ್ ನ್ಯೂಸ್ ಕನ್ನಡ ಸೈಯದ್ ತನ್ವೀರ್ ಚೆನ್ನಗಿರಿ

Leave a Reply

Your email address will not be published. Required fields are marked *