ಹರಿಹರ ನಗರದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಕ್ಷಿಣ ಏಷ್ಯಾ ನಾಗರಿಕರ ಅಧಿಕಾರ ರಕ್ಷಣಾ ಫೆಡರೇಶನ್, ಇವರ ಸಹಯೋಗದೊಂದಿಗೆ, ಇಂದು ಹರಿಹರ ನಗರ ಸಭೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಹರಿಹರ ನಗರ ಸಭೆ ಅಧ್ಯಕ್ಷರು ಶ್ರೀ ಮತಿ ಕವಿತಾ ಮಾರುತಿ ಬೇಡರ್ ರವರಿಗೆ ಮನವಿ ಸಲ್ಲಿಸಿದ್ದರು,ಇತ್ತೀಚೆಗೆನ ದಿನಗಳಳಿ ಹರಿಹರ ನಗರದಲ್ಲಿ ಸೊಳ್ಳೆಗಳಿಂದ ವಿವಿಧ ಕಾಯಿಲೆಗಳ ಡೆಂಗು, ಮಲೇರಿಯಾ, ಪ್ರಕರಣ ಹೆಚ್ಚಾಗುತ್ತಿದ್ದು ರಿಂದ ಕೂಡಲೇ ಇದನ್ನು ನಿಯಂತ್ರಿಸಲು ಲಿಕ್ವಿಡ್ ಸ್ಪ್ರೇ ಹಾಗೂ ಡಿಡಿಟಿ ಸಾರ್ವಜನಿಕ ಸ್ಥಳ ಹಾಗೂ ಕೊಳಚೆ ಪ್ರದೇಶಗಳಲ್ಲಿ ಉಪಯೋಗಿಸಿದರೆ ಪ್ರಕರಣದ ಸಂಖ್ಯೆ ಕಡಿಮೆ ಆಗಬಹುದು, ಸಂಭಂದಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಒಂದು ವಿಶೇಷ ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಈ ಕೆಲಸವನ್ನು ಮಾಡಬೇಕು ಎಂದು ಆಗ್ರಿಸಿದರು, ಈ ಸಂದರ್ಭದಲ್ಲಿ ನಮ್ಮ ವಾಹಿನಿಗೆ ಹರಿಹರ ನಾಗರಿಕರು ಅಣ್ಣಪ್ಪ, ನಾಗರಾಜ್ ಭಂಡಾರಿ ಮಾತನಾಡಿ ಮಾಹಿತಿ ಹಂಚಿಕೊಂಡರು, ಈ ಪ್ರತಿಭಟನೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ರಾಹುಲ್, ಪ್ರವೀಣ್,ನಗರ ಸಭೆ ಸದಸ್ಯರು ಶಾಹಿನಾ ದಾದಾಪೀರ್ , ಸೈಯದ್ ಅಲ್ಲಿಂ, ಇನು ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತಿ ಇದ್ದರೂ,