ಮುಸ್ತಫ ನಗರ ಮಾಗನಹಳ್ಳಿ ಮುಖ್ಯರಸ್ತೆಯಲ್ಲಿ ಬರುವಂತಹ ಖಾಲಿ ನಿವೇಶನವನ್ನು ದಕ್ಷಿಣ ವಲಯ ಭಾಗಕ್ಕೆ ಸಂಬಂಧಪಟ್ಟಂತೆ 100 ಬೆಡ್ಡು ಉಳ್ಳ ಸರ್ಕಾರ ಆಸ್ಪತ್ರೆ ನಿರ್ಮಿಸಲು ನೀಡುವಂತೆ ಮಿತ್ರ ಮಾನ್ಯರೇ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು ವರ್ಷಗಳಿಂದಾಗಲಿ ಮತ್ತು ಬಹುತೇಕ ಕಾಲಗಳಿಂದಾಗಲಿ ಈ ಭಾಗದ ಜನರಿಗೆ ಅಂದರೆ ದಕ್ಷಿಣ ವಲಯಕ್ಕೆ ಸಂಬಂಧಪಟ್ಟ ಎಲ್ಲ ಜನಾಂಗದವರಿಗೆ ಮತ್ತು ಹಳ್ಳಿಯ ಜನರಿಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಇಲ್ಲಿ ಯಾವುದೇ ತರಹದ ಸರ್ಕಾರಿ ಆಸ್ಪತ್ರೆಗಳು ಇಲ್ಲದೆ ಇರುವ ಕಾರಣದಿಂದಾಗಿ ಇಲ್ಲಿನ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು ಮತ್ತು ಸರಕಾರಿ ಸೌಲಭ್ಯಗಳು ಸರಿಯಾದ ಸೌಲತ್ತುಗಳು ದೊರಕದೇ ಇರುವುದರಿಂದ ದಕ್ಷಿಣಕ್ಕೆ ಸಂಬಂಧಪಟ್ಟಂತೆ ಒಂದು ನಿಖರವಾದ ಸರಕಾರಿ ಆಸ್ಪತ್ರೆಯನ್ನು ನಿರ್ಮಿಸಿ ಕೊಡುವುದರಿಂದ ಇಲ್ಲಿನ ಮತ್ತು ಸುತ್ತಮುತ್ತ ಹಳ್ಳಿಯ ಜನರಿಗೆ ಬಹುತೇಕ ಉಪಯೋಗ ಆಗುತ್ತದೆ ಕನಿಷ್ಠವಾಗಲಿ 100 ಬೆಡ್ಡುಗಳು ಇಲ್ಲ ಆಸ್ಪತ್ರೆಯನ್ನು ನಿರ್ಮಿಸಿ ಕೊಡಲು ಈ ಜಾಗವು ಅಂದರೆ ಮುಸ್ತಪ್ಪ ನಗರ ಮಗನಹಳ್ಳಿ ಮುಖ್ಯ ರಸ್ತೆಯಲ್ಲಿರುವಂತಹ ಈ ಖಾಲಿ ನಿವೇಶನವನ್ನು ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲು ನೀಡಬೇಕೆಂದು ಮತ್ತು ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿ ಕೊಡಬೇಕೆಂದು ತಮ್ಮಗಳ ಮುಖೇನ ಸರಕಾರಕ್ಕೆ ಒತ್ತಾಯಿಸಲು ಇಚ್ಚಿಸುತ್ತೇವೆ ಮಾಧ್ಯಮ ಮಿತ್ರರೇ ಈ ಹೋರಾಟದ ಮುಖ್ಯ ಉದ್ದೇಶ.* ದಕ್ಷಿಣ ಭಾಗಕ್ಕೆ ಸಂಬಂಧಪಟ್ಟಂತೆ ಯಾವುದೇ ರಸ್ತೆಗಳಾಗಲಿ ಅಪಘಾತ ಉಂಟಾದಲ್ಲಿ ತಕ್ಷಣವೇ ತುರ್ತು ಚಿಕಿತ್ಸೆ ಪಡೆಯಲು ಯಾವುದೇ ಒಂದು ಚಿಕ್ಕ ಸರ್ಕಾರ ಆಸ್ಪತ್ರೆ ಕೂಡ ಇಲ್ಲಿ ಇಲ್ಲದ ಕಾರಣ * ತೀವ್ರ ಹೃದಯಘಾತದಲ್ಲಿ ಬಳಲುವಂತ ವ್ಯಕ್ತಿಗಳಾಗಲಿ ರೋಗಿಗಳನ್ನಾಗಲಿ ಚಿಕಿತ್ಸೆ ನೀಡಲು ಈ ಭಾಗದಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳು ಇಲ್ಲದೆ ಇರುವುದರಿಂದ * ಮಿತ್ರರೇ ಈ ಜಾಗದಲ್ಲಿ ಬಹು ಮುಖ್ಯವಾದ ವಿಷಯವೆಂದರೆ ಈ ಭಾಗದಲ್ಲಿ ಮಿಲ್ಲುಗಳು ಮತ್ತು ಕಾರ್ಖಾನೆಗಳು ಅತಿ ಹೆಚ್ಚಾಗಿವೆ ಹಾಗಾಗಿ ಇಲ್ಲಿ ಬೆಂಕಿಯ ಸ್ಫೋಟಗಳು ಅತೀ ಹೆಚ್ಚಾಗಿ ಕಾಣಬಹುದು ಆ ಕಾರಣದಿಂದಾಗಿ ಅಂತ ಸಂದರ್ಭದಲ್ಲಿ ಅಂತ ರೋಗಿಗಳಿಗೆ ತುರ್ತು ಚಿಕಿತ್ಸೆ ಮತ್ತು ಪ್ರಥಮ ಚಿಕಿತ್ಸೆ ಬಹಳ ಅನಿವಾರ್ಯವಾಗಿ ದೊರಕಬೇಕು ಆದ ಕಾರಣ ಸುಟ್ಟ ವಿಭಾಗ ಜೋಡಣೆ ಆಧಾರಿತ ಸರ್ಕಾರಿ ಆಸ್ಪತ್ರೆ ಪ್ರಮುಖವಾಗಿ ನಿರ್ಮಿತವಾಗಬೇಕು * ಪ್ರಮುಖವಾಗಿ ದಕ್ಷಿಣ ವಲಯಕ್ಕೆ ಸಂಬಂಧಿಸಿದಂತೆ ಇಲ್ಲಿನ 40% ವಯೋವೃದ್ಧರು ತುಂಬಾ ತೀವ್ರವಾದ ಕಾಯಿಲೆಗಳಿಗೆ ತುತ್ತಾಗಿರುವುದರಿಂದ ಅವರುಗಳು ತುರ್ತಾಗಿ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಕಾರಣ ದಕ್ಷಿಣ ವಲಯದಿಂದ ಉತ್ತರ ವಲಯಕ್ಕೆ ಐದರಿಂದ ಆರು ಕಿಲೋಮೀಟರ್ ಸಾಗಿ ಚಿಕಿತ್ಸೆ ಪಡೆಯುವಷ್ಟು ಆರೋಗ್ಯಕ್ಕೆ ಇಲ್ಲದೇ ಇರುವುದರಿಂದ * ಮಿತ್ರರೇ ಹಾಗಾಗಿ ಈ ಮುಖ್ಯನ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ದಕ್ಷಿಣ ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಸರ್ಕಾರಿ ಆಸ್ಪತ್ರೆಯೂ ಕೂಡ ಇಲ್ಲದೆ ಇರುವುದರಿಂದ ತಮ್ಮಗಳ ಮುಖ್ಯನಾ ಸರ್ಕಾರಕ್ಕೆ ಒಂದು ಎಚ್ಚರಿಕೆ ನೀಡುವಂತೆ ಈ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲು ನಾವುಗಳು ಹೆಚ್ಚಿಸಿದ್ದೇವೆ ಇದರ ಮೂಲಕ ಕಾರಣ ಈ ನಿವೇಶನವನ್ನು ಯಾವುದೇ ಒಂದು ಸ್ವಾರ್ಥದ ವಿಚಾರದೊಳಗೆ ವಿಚಾರಗಳಿಗೆ ನೀಡದೆ ಇಲ್ಲಿನ ಸರ್ವಧರ್ಮ ಜನಾಂಗಗಳಿಗೆ ಅನುಕೂಲವಾಗುವಂತೆ ಒಂದು ನಿರ್ದಿಷ್ಟವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿ ಕೊಡಲು ನಿವೇಶನವನ್ನು ನೀಡಬೇಕೆಂದು ಮತ್ತು ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿ ಕೊಡಬೇಕೆಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ