ದಾವಣಗೆರೆ ಜಿಲ್ಲೆಯ, ಹರಿಹರ ತಾಲೂಕು ಹರಿಹರ ನಗರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರ, ಹಾಗೂ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ನಗರ ಸಭೆ ಹರಿಹರ, ಶಿಕ್ಷಣ ಇಲಾಖೆ ಹರಿಹರ, ಹರಿಹರ ತಾಲ್ಲೂಕು ಬಸವ ಜಯಂತಿ ಉತ್ಸವ ಸಮಿತಿಯ ಇವರ ಸಂಯುಕ್ತಾಶ್ರಯದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಬಸವ ಜಯಂತಿ ಪ್ರಯುಕ್ತ, ತಾಲ್ಲೂಕು ಕಚೇರಿಯಲ್ಲಿ ಇಂದು ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,ನಂತರ ನಗರದ108 ಲಿಂಗೇಶ್ವರ ದೇವಸ್ಥಾನ, ಭರಂಪುರ, ಭವ್ಯ ಎತ್ತಿನ ಮೆರವಣಿಗೆ ಮುಖಾಂತರ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳಾದ ಕೆ ಎಂ ಗುರು ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದುರ್ಗಪ್ಪ, ನಗರಸಭಾ ಪೌರಾಯುಕ್ತರು ಸುಬ್ರಹ್ಮಣ್ಯ ಶೇಟಿ, ವಿವಿಧ ಇಲಾಖೆ ಅಧಿಕಾರಿಗಳು, ಬಸವ ಜಯಂತಿಯ ಸಮಿತಿಯ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು, ಮಾಜಿ ಶಾಸಕರಾದ H S ಶಿವಶಂಕರ್, ಮಾಜಿ ಶಾಸಕರಾದ ಎಸ್ ರಾಮಪ್ಪ, ಚಂದ್ರಶೇಖರ್ ಪೂಜಾರಿ, ಹಾಲೇಶ್ ಗೌಡರು, ಉಪಸ್ಥಿತಿ ಇದ್ದರೂ,ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ