ದಾವಣಗೆರೆ ಭಾರತದ ಯೋಧರು ಪಾಕಿಸ್ತಾನದಲ್ಲಿ ಉಗ್ರರನ್ನು ಗುರುತಿಸಿ ದಾಳಿ ಮಾಡುವ ಮೂಲಕ ಶೌರ್ಯವನ್ನು ಮತ್ತೊಮ್ಮೆ ಸಾಬೀತು

Spread the love

ದಾವಣಗೆರೆ : ಭಾರತದ ಯೋಧರು ಪಾಕಿಸ್ತಾನದಲ್ಲಿನ ಉಗ್ರರನ್ನು ನೆಲೆಗಳನ್ನು ಗುರುತಿಸಿ ದಾಳಿ ಮಾಡುವ ಮೂಲಕ ಸೈನಿಕರ ಶೌರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ದಾವಣಗೆರೆ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಎಂ.ಕೆ. ಲಿಯಾಖತ್ ಆಲಿ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಹಲ್ಗಾಮ್‍ನಲ್ಲಿ ಉಗ್ರರು ನಡೆಸಿದ ದಾಳಿಗೆÀ 26 ಮಂದಿ ಕುಟುಂಬಗಳು ನೊಂದಿದ್ದವು. ಭಾರತ ಸರಕಾರ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದೆ. ಉಗ್ರರ ಕೃತ್ಯಕ್ಕೆ ಬಲಿಯಾದ, ಸಂಬಂಧಿಕರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಅವಕಾಶ ನೀಡಬಾರದು. ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ಕೇಂದ್ರ ಸರಕಾರದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅವರು ಸೇನೆಯ ಶೌರ್ಯವನ್ನು ಶ್ಲಾಘಿಸಿದ್ದಾರೆ. ಉಗ್ರಗಾಮಿಗಳ ನಾಶಕ್ಕೆ ಕೇಂದ್ರ ಸರಕಾರದ ಜೊತೆ ನಾವಿದ್ದೇವೆ. ಭಯೋತ್ಪಾದನೆ ಜಗತ್ತಿಗೆ ಮಾರಕವಾಗಿದೆ. ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಸರ್ಕಾರ ವಿರೋಧ ಪಕ್ಷವಿದೆ. ಸೇನೆ ತೆಗೆದುಕೊಳ್ಳುವ ಕ್ರಮಗಳಿಗೆ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದ್ದಾರೆ. ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಶೌರ್ಯ ಖುಷಿಯ ವಿಚಾರ. ಭಾರತದ ಜೊತೆ ಕಿಡಿಗೇಡಿತನ ಮಾಡುವ ಬೇರೆ ದೇಶಗಳಿಗೂ ಇದು ಸಂದೇಶ ನೀಡಿದಂತಾಗಿದೆ ಎಂದು ಹೇಳಿದ್ದಾರೆ.ಭಯೋತ್ಪಾದಕರು ಸಂಪೂರ್ಣ ನಾಶ ಮಾಡಬೇಕಿದೆ. ಉಗ್ರರ ನಾಶಕ್ಕೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *