ಸುಕುನ್ ಫೌಂಡೇಶನ್ ವತಿಯಿಂದ ಉರ್ದು ಶಾಲೆ ಮಕ್ಕಳಿಗೆ ಅಧ್ಯಯನ ಸಾಮಗ್ರಿಗಳ ವಿತರಣೆ

Spread the love

ಹರಿಹರ ಜೂ 30: ನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಿನನಿತ್ಯದ ಅಧ್ಯಯನದಲ್ಲಿ ಅಗತ್ಯವಿರುವ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ಪೆನ್ಸಿಲ್, ರಬ್ಬರ್‌ ಸೇರಿದಂತೆ ವಿವಿಧ ಅಧ್ಯಯನ ಸಾಮಗ್ರಿಗಳನ್ನು ಸುಕುನ್ ಫೌಂಡೇಶನ್ ವತಿಯಿಂದ ವಿತರಿಸಲಾಯಿತು.    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೌಂಡೇಶನ್‌ನ ಸಂಸ್ಥಾಪಕ ಮಹಮ್ಮದ್ ರಿಹಾನ್, ನಮ್ಮ ಫೌಂಡೇಶನ್ ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ನಡೆಸುತ್ತಿದ್ದು, ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡ ಮಕ್ಕಳಿಗೆ ಅನುಕೂಲವಾಗಲೆಂದು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.   ಇದಲ್ಲದೆ ರಂಜಾನ್ ತಿಂಗಳಲ್ಲಿ ದಾನಧರ್ಮದ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ, ಸಮಾಜದ ಬಡ ಮತ್ತು ಅಗತ್ಯವಿರುವ ಮುಸ್ಲಿಂ ಬಾಂಧವರ ಕಲ್ಯಾಣಕ್ಕಾಗಿ ಪ್ರತಿವರ್ಷವೂ ಹಲವಾರು ಸೇವಾ ಚಟುವಟಿಕೆಗಳನ್ನು ಕೈಗೊಂಡು ಮಾದರಿ ನೆಡುವುದರಲ್ಲಿದೆ. ಈ ಪವಿತ್ರ ತಿಂಗಳಲ್ಲಿ, ಸಂಸ್ಥೆಯು ಬಡ ಕುಟುಂಬಗಳಿಗೆ ಉಪಯೋಗವಾಗುವ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸುವುದರೊಂದಿಗೆ, ಅವುಗಳ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತಿದೆ.   ಅಲ್ಲದೆ, ಮಕ್ಕಳಿಗೆ ಹಬ್ಬದ ಸಂತೋಷ ತರುವ ನಿಟ್ಟಿನಲ್ಲಿ ನೂತನ ಬಟ್ಟೆಗಳನ್ನು ವಿತರಿಸಿ, ಅವರ ಮುಖದಲ್ಲಿ ನಗು ತರಲು ಸಹಕಾರ ನೀಡುತ್ತಿದೆ. ಈ ಸೇವಾ ಕಾರ್ಯಗಳು ಸಂಸ್ಥೆಯ ಮಾನವೀಯತೆ ಹಾಗೂ ಸಮಾಜದ ಪ್ರತಿಯೊಬ್ಬರ ಬಗ್ಗೆ ಇರುವ ಜವಾಬ್ದಾರಿಯ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ.ಅನೇಕರು ಈ ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡು ದಾನಧರ್ಮದ ಕಾರ್ಯಗಳಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.    ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಪದಾಧಿಕಾರಿಗಳಾದ ಸಮೀವುಲ್ಲಾ, ಇಮ್ರಾನ್ ಅಬು ಸಾಲಿಹ, ಸಯ್ಯದ್ ಮತೀನ್, ಜಬಿ ಉಲ್ಲಾ, ನಜೀರ್ ಸಾಬ್, ಸೈಯದ್ ರಫೀಕ್, ಇರ್ಫಾನ್ ಡಿ, ಶಕೀಲ್, ನಫೀಸ್‌ ಜೊತೆಗೆ ಶಾಲೆಯ ಮುಖ್ಯೋಪಾಧ್ಯೆ ಅಲಮ್ಸ್ ಗೌಹರ್ ಜಾನ್, ಶಿಕ್ಷಕಿ ಜಾಹೇರ ಬೇಗಂ ಹಾಗೂ ಶಿಕ್ಷಕಿಯರಾದ ಸೈಯದಾ ಗುಲ್ಜಾರ್ ಮತ್ತು ದುರ್ಗಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *